ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಕಳೆದ ಮೂರು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುವುದರೊಂದಿಗೆ ತಾತ್ಕಾಲಿಕ ವೃದ್ಧಾಶ್ರಮಕ್ಕೆ ಕಳುಹಿಸಿ ಸಹಕಾರಿಯಾದ ಪೊಲೀಸ್ ಸಿಬ್ಬಂದಿ ಧರೆಪ್ಪ ಕುಂಬಾರ ಹಾಗೂ ಸಾರಿಗೆ ನಿಯಂತ್ರಕ ಗಿರೆಪ್ಪ ಮರನೂರ ಸೇವೆ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಳೆದ ಮೂರು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುವುದರೊಂದಿಗೆ ತಾತ್ಕಾಲಿಕ ವೃದ್ಧಾಶ್ರಮಕ್ಕೆ ಕಳುಹಿಸಿ ಸಹಕಾರಿಯಾದ ಪೊಲೀಸ್ ಸಿಬ್ಬಂದಿ ಧರೆಪ್ಪ ಕುಂಬಾರ ಹಾಗೂ ಸಾರಿಗೆ ನಿಯಂತ್ರಕ ಗಿರೆಪ್ಪ ಮರನೂರ ಸೇವೆ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.

ಬನಹಟ್ಟಿ ಬಸ್ ನಿಲ್ದಾಣದೊಳಗೆ ಕಳೆದ ಮೂರು ದಿನಗಳಿಂದ ಹಾಸಿಗೆಯಲ್ಲಿಯೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಂಗಳವಾರ ಮಾನವೀಯತೆಯೊಂದಿಗೆ ವೈದ್ಯಕೀಯ ತುರ್ತು ಚಿಕಿತ್ಸೆ ಕಲ್ಪಿಸಿದ್ದಲ್ಲದೇ ಬನಹಟ್ಟಿಯ ರಮೇಶ ದೊಡಮನಿಯವರ ಮಹಾಲಕ್ಷ್ಮೀ ಕಾಡಸಿದ್ಧೇಶ್ವರ ವೃದ್ಧಾಶ್ರಮ ಹಾಗೂ ಅನಾಥಾಶ್ರಮಕ್ಕೆ ತಲುಪಿಸಿದರು. ತಮ್ಮ ಸೇವೆಯೊಂದಿಗೆ ಇಂತಹ ಮಾನವೀಯ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಗಳಿಗೆ ಜನತೆ ಅಭಿನಂದಿಸಿದ್ದಾರೆ.-----------