ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲಾ ಸಮೀಪ ಗುರುವಾರ ಮರ ಬಿದ್ದು ವಿದ್ಯುತ್ ಕಂಬಗಳ ಮುರಿದು ಹಾನಿಯಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ನಾಪೋಕ್ಲು: ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲಾ ಸಮೀಪ ಗುರುವಾರ ಮರ ಬಿದ್ದು ವಿದ್ಯುತ್ ಕಂಬಗಳ ಮುರಿದು ಹಾನಿಯಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.ನಾಪೋಕ್ಲು - ಹಳೆ ತಾಲೂಕು ಮುಖ್ಯ ರಸ್ತೆಯಲ್ಲಿ ಗುರುವಾರ ರಾತ್ರಿ ಬೃಹತ್ ಗಾತ್ರದ ಮರ ಒಂದು ಬುಡ ಸಮೇತ ರಸ್ತೆಯ ಬದಿಗೆ ಉರುಳಿ ಬಿದ್ದ ಪರಿಣಾಮ ಟ್ರಾನ್ಸ್ ಫಾರ್ಮರ್ ಕಂಬ ಸೇರಿದಂತೆ ಒಟ್ಟು ಆರು ವಿದ್ಯುತ್ ಕಂಬಗಳು ಮುರಿದು ಬಿದ್ದು ನಾಪೋಕ್ಲು ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಇದರಿಂದಾಗಿ ಸ್ವಲ್ಪಮಟ್ಟಿದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಸರ್ಕಾರಿ ಪ್ರಾಥಮಿಕ ಶಾಲಾ ಸಮೀಪ ಗುರುವಾರ ಮರ ಬಿದ್ದು ವಿದ್ಯುತ್ ಕಂಬಗಳ ಮುರಿದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತು.