ಮಳೆ ಆರ್ಭಟಕ್ಕೆ ರಸ್ತೆಗುರುಳಿದ ಮರ: ಸಂಚಾರ ಅಸ್ತವ್ಯಸ್ತ

| Published : Jul 22 2025, 12:00 AM IST

ಸಾರಾಂಶ

ಶೃಂಗೇರಿ: ತಾಲೂಕಿನಾದ್ಯಂತ ಮುಂಗಾರು ಚುರುಕಾಗಿದ್ದು ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಮೆಣಸೆ ಪಂಚಾಯಿತಿ ಮೆಣಸೆ ಕಿಕ್ರೆ ಸಂಪರ್ಕ ರಸ್ತೆ ಸಸಿಮನೆ ಸಮೀಪ ಬೃಹತ್ ಮರವೊಂದು ರಸ್ತೆಗುರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಕಡಿತಗೊಂಡಿತ್ತು.

ಶೃಂಗೇರಿ: ತಾಲೂಕಿನಾದ್ಯಂತ ಮುಂಗಾರು ಚುರುಕಾಗಿದ್ದು ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಮೆಣಸೆ ಪಂಚಾಯಿತಿ ಮೆಣಸೆ ಕಿಕ್ರೆ ಸಂಪರ್ಕ ರಸ್ತೆ ಸಸಿಮನೆ ಸಮೀಪ ಬೃಹತ್ ಮರವೊಂದು ರಸ್ತೆಗುರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಕಡಿತಗೊಂಡಿತ್ತು.

ಸಸಿಮನೆ, ಕಿಕ್ರೆ, ತುಮ್ಮನೆಜಡ್ಡು ಸುತ್ತಮುತ್ತಲ ಗ್ರಾಮಸ್ಥರು ರಸ್ತೆ ಸಂಚಾರ ಕಡಿತಗೊಂಡಿದ್ದರಿಂದ ಪರದಾಡು ವಂತಾಗಿತ್ತು. ಸತತ ಮೂರ್ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಸ್ತೆ ಸಂಚಾರ ಪುನರ್ ಆರಂಬಿಸಲಾಯಿತು. ಸೋಮವಾರವೂ ಸಾಧಾರಣವಾಗಿ ಮಳೆ ಮುಂದುವರಿದಿತ್ತು .ಥಂಡಿ ಗಾಳಿ, ಚಳಿ ವಾತಾವರಣವಿದ್ದು, ಬೆಳಿಗ್ಗೆಯಿಂದಲೂ ಬಿಡುವಿಲ್ಲದೇ ಸಾಧಾರಣವಾಗಿ ಮುಂದುವರಿದು ಸಂಜೆ ಮತ್ತೆ ಆರ್ಭಟಿಸಲಾರಂಬಿಸಿತ್ತು.

21 ಶ್ರೀ ಚಿತ್ರ 2-

ಶೃಂಗೇರಿ ಮೆಣಸೆ ಪಂಚಾಯಿತಿ ಕಿಕ್ರೆ ಸಸಿಮನೆ ಬಳಿ ಮಳೆಗೆ ರಸ್ತೆ ಮೇಲೆ ಬೃಹತ್ ಮರ ಉರುಳಿ ಬಿದ್ದಿರುವುದು.