ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

| Published : Jul 09 2025, 12:19 AM IST

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು: ಚಲಿಸುತ್ತಿದ್ದ ಕಾರಿನ ಮೇಲೆ ಸಿಲ್ವರ್‌ ಮರ ಬಿದ್ದ ಪರಿಣಾಮ ಕಾರು ಜಖಂಗೊಂಡಿದ್ದು, ಚಾಲಕ ಸೇರಿದಂತೆ ಇತರ ಮೂವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಅರೇಹಳ್ಳಿ- ಡೋಲನಮನೆ ರಸ್ತೆಯ ಚೆಕ್‌ ಡ್ಯಾಂ ಬಳಿ ನಡೆದಿದೆ.

ಬೇಲೂರು: ಚಲಿಸುತ್ತಿದ್ದ ಕಾರಿನ ಮೇಲೆ ಸಿಲ್ವರ್‌ ಮರ ಬಿದ್ದ ಪರಿಣಾಮ ಕಾರು ಜಖಂಗೊಂಡಿದ್ದು, ಚಾಲಕ ಸೇರಿದಂತೆ ಇತರ ಮೂವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಅರೇಹಳ್ಳಿ- ಡೋಲನಮನೆ ರಸ್ತೆಯ ಚೆಕ್‌ ಡ್ಯಾಂ ಬಳಿ ನಡೆದಿದೆ.

ಚಾಲಕ ಈಶ್ವರ್‌ ತಮ್ಮ ವೈಯಕ್ತಿಕ ಕೆಲಸ ಮುಗಿಸಿಕೊಂಡು ಹೆಗ್ಗಡಿಹಳ್ಳಿಯಿಂದ ಅರೇಹಳ್ಳಿಗೆ ತೆರಳುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬೃಹತ್ ಸಿಲ್ವರ್ ಮರವೊಂದು ಕಾರಿನ ಮೇಲೆ ಬಿದ್ದಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸಂತೆಯ ದಿನವಾದ್ದರಿಂದ ಈ ಘಟನೆ ಪರಿಣಾಮ ಕೆಲಕಾಲ ವಾಹನಗಳ ದಟ್ಟಣೆ ಏರ್ಪಟ್ಟಿತ್ತು. ಗ್ರಾಮಸ್ಥರು ಹಾಗೂ ಸಹ ಪ್ರಯಾಣಿಕರು ಕಾರಿನ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.