ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು

| Published : Apr 24 2025, 11:51 PM IST

ಸಾರಾಂಶ

ಅಮೀನಗಡ ಪಟ್ಟಣದಲ್ಲಿ ಸಂಜೆ ಸುರಿದ ಭಾರೀ ಬಿರುಗಾಳಿ ಮಳೆಗೆ ಭಾರಿ ಗಾತ್ರದ ಮರಗಳು ಧರೆಗುರುಳಿವೆ.

ಕನ್ನಡಪ್ರಭ ವಾರ್ತೆ ಅಮೀನಗಡ

ಪಟ್ಟಣದಲ್ಲಿ ಸಂಜೆ ಸುರಿದ ಭಾರೀ ಬಿರುಗಾಳಿ ಮಳೆಗೆ ಭಾರಿ ಗಾತ್ರದ ಮರಗಳು ಧರೆಗುರುಳಿವೆ. ವಿಜಯಾ ಕರದಂಟು ಫ್ಯಾಕ್ಟರಿಯಲ್ಲಿ ಛಾವಣಿ ಶೀಟ್‌ ಹಾರಿ ಗಾಜಿನ ಕಿಟಕಿಗಳು ಮುರಿದುಬಿದ್ದ ಪರಿಣಾಮ ಕಾರ್ಯನಿರ್ವಹಿಸುತ್ತಿದ್ದ 7 ಜನ ಕಾರ್ಮಿಕರಿಗೆ ಗಾಯಗಳಾಗಿದ್ದು ಕೆಲವರನ್ನು ಅಮೀನಗಡ ಸರಕಾರಿ ಆಸ್ಪತ್ರೆ ಹಾಗೂ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.ಪಟ್ಟಣದ ಬುದ್ದಿಮಾಂದ್ಯಶಾಲೆಯ ಎದುರಿನ ಬೃಹತ್ ಆಲದಮರ ಉರುಳಿಬಿದ್ದಿದ್ದು, ಅದರ ಕೆಳಗೆ ನಿಲ್ಲಿಸಿದ್ದ ಶಿಕ್ಷಕ ಹೊಸಮನಿಯವರ ಹೊಂಡ ಬೈಕ್ ಅಪ್ಪಚ್ಚಿಯಾಗಿದೆ.