ಧರ್ಮಾಧಿಕಾರಿ ಹೆಗ್ಗಡೆ ಅವರಿಗೆ ಗೌರವ

| Published : Aug 22 2025, 01:00 AM IST

ಸಾರಾಂಶ

ಕ್ಷೇತ್ರದ ಬಗ್ಗೆ ಹರಡಿರುವ ವದಂತಿಗಳಿಂದ ಕುಗ್ಗದಿರುವಂತೆ ಸದಸ್ಯರು ಧರ್ಮಾಧಿಕಾರಿಗಳಲ್ಲಿ ಮನವಿ ಮಾಡಿದರು. ಅಲ್ಲದೇ ಕ್ಷೇತ್ರದ ಹಿರಿಮೆ ಹೆಚ್ಚಿಸುವ ಸಕಲ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ಸದಾ ಜತೆಗಿರುವುದಾಗಿ ಹೆಗ್ಗಡೆ ಅವರಿಗೆ ಸ್ಪಷ್ಟಪಡಿಸಿದರು.

ಧಾರವಾಡ: ಇಲ್ಲಿಯ ಸತ್ತೂರ ಬಳಿಯ ವೀರ ಸೌಧದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಗುರುವಾರ ಬೆಳಗ್ಗೆ ಭೇಟಿ ಮಾಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಬಗ್ಗೆ ಹರಡಿರುವ ವದಂತಿಗಳಿಂದ ಕುಗ್ಗದಿರುವಂತೆ ಸದಸ್ಯರು ಧರ್ಮಾಧಿಕಾರಿಗಳಲ್ಲಿ ಮನವಿ ಮಾಡಿದರು. ಅಲ್ಲದೇ ಕ್ಷೇತ್ರದ ಹಿರಿಮೆ ಹೆಚ್ಚಿಸುವ ಸಕಲ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ಸದಾ ಜತೆಗಿರುವುದಾಗಿ ಹೆಗ್ಗಡೆ ಅವರಿಗೆ ಸ್ಪಷ್ಟಪಡಿಸಿದರು.

ಕ್ಷೇತ್ರದ ಆಶಯ ಮತ್ತು ಗೌರವಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ವೇದಿಕೆಯ ಸದಸ್ಯರ ಪ್ರಯತ್ನಗಳಿಗೆ ಧರ್ಮಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ವೇದಿಕೆಯ ಮುಖಂಡರಾದ ರಾಜಣ್ಣ ಕೊರವಿ, ವಸಂತ ಅರ್ಕಾಚಾರ, ಸವಿತಾ ಅಮರಶೆಟ್ಟಿ, ಕರಿಯಪ್ಪ ಅಮ್ಮಿನಭಾವಿ, ದ್ಯಾಮಣ್ಣ ಹುಡೇದ, ಪುಂಡಲೀಕ ಹಡಪದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ಸೇರಿದಂತೆ ಹಲವರಿದ್ದರು.