ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಜಯಣ್ಣಗೆ ಶ್ರದ್ಧಾಂಜಲಿ

| Published : Dec 12 2024, 12:31 AM IST

ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ಜಯಣ್ಣಗೆ ಶ್ರದ್ಧಾಂಜಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲ ಮಾಜಿ ಶಾಸಕ ಎಸ್. ಜಯಣ್ಣ ಅವರ ನಿಧನದ ಗೌರವಾರ್ಥ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಯಣ್ಣ ಅವರಿಗೆ ಚಾಮರಾಜನಗರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಚಾಮರಾಜನಗರ: ಕೊಳ್ಳೇಗಾಲ ಮಾಜಿ ಶಾಸಕ ಎಸ್. ಜಯಣ್ಣ ಅವರ ನಿಧನದ ಗೌರವಾರ್ಥ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಯಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದೇ ವೇಳೆ ಕಾಡಾ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಎಸ್. ಜಯಣ್ಣ ೨ ಬಾರಿ ಕೊಳ್ಳೇಗಾಲ ಕ್ಷೇತ್ರದ ಶಾಸಕರಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಅವರು ಸಜ್ಜನ ರಾಜಕಾರಣಿಯಾಗಿದ್ದರು. ಪಕ್ಷ ಸಂಘಟನೆ ಕುರಿತು ಅನೇಕ ಮಾರ್ಗದರ್ಶನ ನೀಡುತ್ತಿದ್ದರು. ಅವರ ನಿಧನದಿಂದ ಪಕ್ಷ ಹಾಗೂ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಈ ವೇಳೆ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ನಂಜೇದೇವನಪುರ ಗ್ರಾಪಂ ಅಧ್ಯಕ್ಷ ಶೇಖರಪ್ಪ, ನಗರಸಭೆ ಮಾಜಿ ಸದಸ್ಯ ಪುಟ್ಟಸ್ವಾಮಿ, ನಾಗರಾಜು, ನಾಗವಳ್ಳಿ ನಾಗಯ್ಯ, ಕರಿನಂಜನಪುರಸ್ವಾಮಿ, ಬಸವರಾಜು, ಎ.ಎಚ್. ನಸ್ರುಲ್ಲಾಖಾನ್, ಮೋಹನ್‌ನಗು, ವಕೀಲ ನಾಗಾರ್ಜುನ್ (ಪೃಥ್ವಿ), ಪರ್ವಿಜ್ ಪಿಎಸಿಸಿ ನಿರ್ದೇಶಕ ಗುರುಸ್ವಾಮಿ, ಅಪ್ಸರ್ ಅಹಮದ್, ನಾಗಬಸವಣ್ಣ, ಸಿದ್ದರಾಜು ಮುತ್ತುರಾಜು ಹಾಜರಿದ್ದರು.