ಆಪರೇಶನ್ ಸಿಂದೂರದ ವೀರ ಯೋಧ ಚರಣ್ ಪೂಜಾರಿಗೆ ಸನ್ಮಾನ

| Published : May 25 2025, 01:42 AM IST

ಆಪರೇಶನ್ ಸಿಂದೂರದ ವೀರ ಯೋಧ ಚರಣ್ ಪೂಜಾರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಆಪರೇಷನ್ ಸಿಂದೂರ ಕಾರ್ಯಾಚರಣೆ ಸಂದರ್ಭ ಜಮ್ಮು ಕಾಶ್ಮೀರದ ಪೂಂಛ್ ಪ್ರಾಂತ್ಯದ ಸೇನಾ ಕ್ಯಾಂಪ್‌ನಲ್ಲಿ ಕರ್ತವ್ಯದಲ್ಲಿದ್ದ ಉಡುಪಿ ವಿಧಾನಸಭಾ ಕ್ಷೇತ್ರದ ಮಟಪಾಡಿ ಗ್ರಾಮದ ವೀರ ಯೋಧ ಚರಣ್ ಪೂಜಾರಿ ಅವರು ಸ್ವಗ್ರಾಮಕ್ಕೆ ಆಗಮಿಸಿದ್ದು, ಈ ವೇಳೆ ಉಡುಪಿ ಗ್ರಾಮಾಂತರ ಬಿಜೆಪಿ ವತಿಯಿಂದ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಆಪರೇಷನ್ ಸಿಂದೂರ ಕಾರ್ಯಾಚರಣೆ ಸಂದರ್ಭ ಜಮ್ಮು ಕಾಶ್ಮೀರದ ಪೂಂಛ್ ಪ್ರಾಂತ್ಯದ ಸೇನಾ ಕ್ಯಾಂಪ್‌ನಲ್ಲಿ ಕರ್ತವ್ಯದಲ್ಲಿದ್ದ ಉಡುಪಿ ವಿಧಾನಸಭಾ ಕ್ಷೇತ್ರದ ಮಟಪಾಡಿ ಗ್ರಾಮದ ವೀರ ಯೋಧ ಚರಣ್ ಪೂಜಾರಿ ಅವರು ಸ್ವಗ್ರಾಮಕ್ಕೆ ಆಗಮಿಸಿದ್ದು, ಈ ವೇಳೆ ಉಡುಪಿ ಗ್ರಾಮಾಂತರ ಬಿಜೆಪಿ ವತಿಯಿಂದ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ನಮ್ಮ ಊರಿನ ವೀರ ಯೋಧ ಚರಣ್ ಪೂಜಾರಿ ಆಪರೇಷನ್ ಸಿಂದೂರ ಕಾರ್ಯಾಚರಣೆ ಸಂದರ್ಭ ಕರ್ತವ್ಯ ನಿರ್ವಹಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಚರಣ್ ಪೂಜಾರಿಯವರ ಸೇವೆ ದೇಶ ಭಕ್ತ ಯುವ ಜನತೆಗೆ ಸ್ಪೂರ್ತಿ ನೀಡಲಿದ್ದು, ಇಂತಹ ವೀರ ಯೋಧನನ್ನು ದೇಶ ಸೇವೆಗೆ ನೀಡಿದ ಚರಣ್ ಪೂಜಾರಿಯವರ ತಂದೆ ತಾಯಿಗೆ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.ಈ ಸಂದರ್ಭ ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ ಕುಲಾಲ್, ಪಕ್ಷದ ಪ್ರಮುಖರಾದ ರಾಜೇಶ್ ಶೆಟ್ಟಿ ಬಿರ್ತಿ, ಬಾಲಕೃಷ್ಣ ಶೆಟ್ಟಿ ಕರ್ಜೆ, ಉದಯ ಪೂಜಾರಿ, ರಘುಪತಿ ಬ್ರಹ್ಮಾವರ, ನಿತ್ಯಾನಂದ ಪೂಜಾರಿ ಚಾಂತಾರು, ವಿಶ್ವನಾಥ್ ಶೆಟ್ಟಿ, ಸೂರ್ಯ ನಾರಾಯಣ ಗಾಣಿಗ, ಅಶೋಕ್ ಪೂಜಾರಿ, ಶೋಭಾ ಪೂಜಾರಿ, ಪವಿತ್ರ ನಾಯಕ್, ರಮ್ಯಾ, ಪದ್ಮಾವತಿ, ಸುಮತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.