ಉಡುಪಿ ಜಿಲ್ಲೆಯ ಹಿರಿಯ ಔಷಧಿ ತಜ್ಞರಿಗೆ ಸನ್ಮಾನ

| Published : Feb 04 2024, 01:30 AM IST

ಸಾರಾಂಶ

52 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ವೆಂಕಟರಮಣ ಪರವಾಗಿ ನಿತಿನ್ ಬಿ. ಶೆಟ್ಟಿ, ಕೆನರಾ ಮೆಡಿಕಲ್ಸ್ ಉಡುಪಿಯ ಕೆ.ವಾಸುದೇವ್ ಅವಧಾನಿ, 40 ವರ್ಷಕ್ಕೂ ಮೇಲ್ಪಟ್ಟು ಸೇವೆ ನೀಡಿದ ಮೈಸೂರು ಮೆಡಿಕಲ್‌ನ ರಿಚರ್ಡ್ ಅರುಣ ಡೇಸ್, ಮಣಿಪಾಲ್ ಡ್ರಗ್ ಹೌಸ್‌ನ ಪ್ರೇಮ್ ಚಂದ್ರ ಪೈ, ಅಲ್ಲದೆ ಜಿಲ್ಲೆಯ ವಿವಿಧ ಭಾಗದ 27ಮಿಕ್ಕಿ ಹಿರಿಯ ಔಷಧಿ ತಜ್ಞರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸುವರ್ಣ ಎಂಟರ್‌ಪ್ರೈಸಸ್ ಬ್ರಹ್ಮಾವರದ ವತಿಯಿಂದ ಜಿಲ್ಲೆಯ ಹಿರಿಯ ಔಷಧ ತಜ್ಞರಿಗೆ ಸನ್ಮಾನ ಕಾರ್ಯಕ್ರಮ ಉಡುಪಿಯ ಪುರಭವನದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕ ಶಂಕರ್ ನಾಯಕ್‌, ಆರೋಗ್ಯ ಸುರಕ್ಷತೆ ದೃಷ್ಟಿಯಲ್ಲಿ ಔಷಧ ತಜ್ಞರ ಕೊಡುಗೆ ಅಪಾರವಿದೆ. ಅವರನ್ನು ಗುರುತಿಸುವುದು ಸಮಾಜದ ಕರ್ತವ್ಯ. ಈ ನಿಟ್ಟಿನಲ್ಲಿ ಸುವರ್ಣ ಎಂಟರ್‌ಪ್ರೈಸಸ್ ಬ್ರಹ್ಮಾವರ ಇವರು ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ 30 ಔಷಧಿ ತಜ್ಞರನ್ನು ಸನ್ಮಾನಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಉಡುಪಿ ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಸಂಘ ಅಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್ ಮಾತನಾಡಿ, ಔಷಧಿ ತಜ್ಞರು ಜಿಲ್ಲೆಯ ಮೂಲೆ ಮೂಲೆಗಳಲ್ಲಿನ ರೋಗಿಗಳಿಗೆ ಸಮರ್ಪಕವಾದ ಔಷಧಿ ಕ್ಲಪ್ತ ಸಮಯದಲ್ಲಿ ದೊರಕಿಸುವ ಜವಾಬ್ದಾರಿ ಇರುವುದರಿಂದ ಅವರು ದೇಶದ ಸೈನಿಕರಂತೆ ಎಂದು ತಿಳಿಸಿದರು.

ಇನ್ನೋರ್ವ ಅತಿಥಿ ಕೊಡಗು ವೈದ್ಯಕೀಯ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಶುಭ ಹಾರೈಸಿದರು.

ಈ ಸಂದರ್ಭ 52 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ವೆಂಕಟರಮಣ ಪರವಾಗಿ ನಿತಿನ್ ಬಿ. ಶೆಟ್ಟಿ, ಕೆನರಾ ಮೆಡಿಕಲ್ಸ್ ಉಡುಪಿಯ ಕೆ.ವಾಸುದೇವ್ ಅವಧಾನಿ, 40 ವರ್ಷಕ್ಕೂ ಮೇಲ್ಪಟ್ಟು ಸೇವೆ ನೀಡಿದ ಮೈಸೂರು ಮೆಡಿಕಲ್‌ನ ರಿಚರ್ಡ್ ಅರುಣ ಡೇಸ್, ಮಣಿಪಾಲ್ ಡ್ರಗ್ ಹೌಸ್‌ನ ಪ್ರೇಮ್ ಚಂದ್ರ ಪೈ, ಅಲ್ಲದೆ ಜಿಲ್ಲೆಯ ವಿವಿಧ ಭಾಗದ 27ಮಿಕ್ಕಿ ಹಿರಿಯ ಔಷಧಿ ತಜ್ಞರನ್ನು ಸನ್ಮಾನಿಸಲಾಯಿತು.

ಆಲ್ಕೇಮ್ ಲ್ಯಾಬ್ ಕಂಪೆನಿಯ ವ್ಯವಸ್ಥಾಪಕರಾದ ಪಂಕಜ್ ಹಾಗೂ ಖಾಜಾ ಮ್ಯೊನುದ್ದೀನ್ ಉಪಸ್ಥಿತರಿದ್ದರು. ಸುವರ್ಣ ಎಂಟರ್‌ಪ್ರೈಸಸ್ಸಿನ ಮಧುಸೂದನ ಹೇರೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುನಿತಾ ಮಧುಸೂದನ್ ವಂದಿಸಿದರು.

****