ಶಾಮನೂರು ಶಿವಶಂಕರಪ್ಪ ಉದ್ಯಮಿಯಾಗಿ, ಸಾಮಾಜಿ, ಆರ್ಥಿಕ, ಶಿಕ್ಷಣ, ರಾಜಕೀಯ, ವೈದ್ಯಕೀಯಕ್ಷೇತ್ರ ತಮ್ಮದೇ ಆದ ಕೊಡುವೆ ನೀಡಿದ್ದಾರೆ

ಕಂಪ್ಲಿ/ ಕುರುಗೋಡು: ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ದೇವರು ಗುರುಮಹಾಂತರ ಮಠದಲ್ಲಿ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿಧನ ಹೊಂದಿದ ಹಿನ್ನೆಲೆಯಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಸೇರಿದ್ದ ಅಭಿಮಾನಿಗಳು ಒಂದು ನಿಮಿಷ ಮೌನಾಚರಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ಗುರುಮಹಾಂತರ ಹಂಪಿ ಸಾವಿರ ದೇವರು ಗುರುಮಹಾಂತ ಶ್ರೀಮಠದ ಪೀಠಾಧಿಪತಿ ವಾಮದೇವ ಶಿವಾಚಾರ್ಯ ಶ್ರೀಗಳು ಮಾತನಾಡಿ, ಶಾಮನೂರು ಶಿವಶಂಕರಪ್ಪ ಉದ್ಯಮಿಯಾಗಿ, ಸಾಮಾಜಿ, ಆರ್ಥಿಕ, ಶಿಕ್ಷಣ, ರಾಜಕೀಯ, ವೈದ್ಯಕೀಯಕ್ಷೇತ್ರ ತಮ್ಮದೇ ಆದ ಕೊಡುವೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಕೊಡುಗಯ ದಾನಿ ಎನಿಸಿಕೊಂಡಿದ್ದ ಅವರು ರಾಜಕೀಯ ಕ್ಷೇತ್ರದಲ್ಲಿ ಅಜಾತ ಶತೃವಾಗಿ ಜೀವನ ಸಾಗಿಸಿದರು. ವೀರಶೈವ ಧರ್ಮದಲ್ಲಿ ಜನಿಸಿದರೂ ಅನ್ಯ ಜನಾಂಗದವರ ಬಗ್ಗೆ ಅಪಾರ ಗೌರವಹೊಂದಿದ್ದರಿಂದ ರಾಜಕೀಯ ಕ್ಷೇತ್ರದಲ್ಲಿ ಸದಾ ಯಶಸ್ಸು ಸಾಧಿಸಲು ಸಾಧ್ಯವಾಯಿತು. ಸಾಮಾಜಿಕ ಕಳಕಳಿಯ ಅವರ ಜೀವನ ಶೈಲಿ ಅನುಕರಣೀಯವಾದುದು ಎಂದರು.

ಅವರು ನಮ್ಮನ್ನು ದೈಹಿಕವಾಗಿ ಮಾತ್ರ ಅಗಲಿದ್ದಾರೆ. ಜೀವಿತಾವಧಿಯಲ್ಲಿ ಅವರು ಮಾಡಿದ ಸೇವೆ. ಸಾಧನೆ, ಸಹಾಯಗಳ ಮೂಲಕ ಸದಾ ಜೀವಂತವಾಗಿರುತ್ತಾರ ಎಂದರು.

ಮಸ್ಕಿಯ ರುದ್ರಮುನಿ ಶಿವಾಚಾರ್ಯ ಶ್ರೀ, ಪ್ರಮುಖರಾದ ಎಚ್.ಎಂ. ಮಂಜುನಾಥಸ್ವಾಮಿ, ಬರ್ಗಿ ಮಹೇಶ್ ಗೌಡ, ಹಂಪಿ ಜಡೇಮೂರ್ತಿ, ಪಿಗ್ಮಿ ಶರಣಬಸವನ ಗೌಡ, ಘನಮಠಯ್ಯ ಸ್ವಾಮಿ, ಬಿ,ಜಡಿಮೂರ್ತಿ, ಬಜಾರ್ ಬಸವರಾಜ, ಚನ್ನಪಟ್ಟಣ ಬಸವನ ಗೌಡ, ಎಸ್.ರಾಮಪ್ಪ, ವೀರೇಶಪ್ಪ ಮತ್ತು ಲೋಕೇಶ್ ಇದ್ದರು.

ಕುರುಗೋಡು ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಜರುಗಿದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀಮಠದ ಪೀಠಾಧಿಪತಿ ವಾಮದೇವ ಶಿವಾಚಾರ್ಯ ಶ್ರೀಗಳು ಮಾತನಾಡಿದರು