ಕಲಬುರಗಿಯ ಚಿತ್ರಕಲಾವಿದ ಜೆಎಸ್ ಖಂಡೇರಾವ್ ಅವರಿಗೆ ಇದೀಗ 87 ವಸಂತ ತುಂಬಿದ ಪ್ರಯುಕ್ತ ಅಭಿಮಾನಿಗಳು ಅವರಿಗೆ ಅ. 24 ರಂದು ಅಮೂರ್ತ ಧ್ಯಾನ ಎಂಬ ಹೆಸರಿನ ಗ್ರಂಥ ಅರ್ಪಿಸುವ ಮೂಲಕ ಕಾರ್ಯಕ್ರಮ ನಡೆಯಲಿದ್ದು, ಬಿಸಿಲೂರಲ್ಲಿ ಈ ಕಲಾವಿದನ ಕಲಾ ಸೇವೆಯನ್ನು ಸ್ಮರಿಸಿ ಗೌರವಿಸಲು ಮುಂದಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿಯ ಚಿತ್ರಕಲಾವಿದ ಜೆಎಸ್ ಖಂಡೇರಾವ್ ಅವರಿಗೆ ಇದೀಗ 87 ವಸಂತ ತುಂಬಿದ ಪ್ರಯುಕ್ತ ಅಭಿಮಾನಿಗಳು ಅವರಿಗೆ ಅ. 24 ರಂದು ಅಮೂರ್ತ ಧ್ಯಾನ ಎಂಬ ಹೆಸರಿನ ಗ್ರಂಥ ಅರ್ಪಿಸುವ ಮೂಲಕ ಕಾರ್ಯಕ್ರಮ ನಡೆಯಲಿದ್ದು, ಬಿಸಿಲೂರಲ್ಲಿ ಈ ಕಲಾವಿದನ ಕಲಾ ಸೇವೆಯನ್ನು ಸ್ಮರಿಸಿ ಗೌರವಿಸಲು ಮುಂದಾಗಿದ್ದಾರೆ.ಕಲಾವಿದರಾಗಿ ಸಮಾಜದಲ್ಲಿ ಹೆಸರು ಮಾಡಿರುವ ಖಂಡೇರಾವ್ ಅವರ ಕಲಾ ಸೇವೆ ಕಲಬುರಗಿಯನ್ನು ಉತ್ತುಂಗಕ್ಕೆ ಏರಿಸಿರುವುದು ಅವರ ಅಭಿಮಾನಿಗಳು ಮರೆತಿಲ್ಲ. ಅವರನ್ನ ಈ ಇಳಿ ವಯಸ್ಸಿನಲ್ಲಿ ಸನ್ಮಾನಿಸಿ ಅಭಿನಂದಿಸಲು ಖಂಡೇರಾವ್ ಪ್ರತಿಷ್ಠಾನದಡಿಯಲ್ಲಿಯೇ ಸಮಾರಂಭಕ್ಕೆ ಸಿದ್ದತೆಗಳು ನಡೆದಿವೆ.ಅ. 24 ರಂದು ಖಂಡೇರಾವ್ ಅಭಿನಂದನೆ ಸಮಾರಂಭ ಎಂಆರ್ಎಂಸಿ ಮೆಡಿಕಲ್ ಕಾಲೇಜಿನ ಸ್ಯಾಕ್ ಬಿಲ್ಡಿಂಗ್ನಲ್ಲಿ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ನಾಡಿನ ಹರಗುರುಚರ ಮೂರ್ತಿಗಳು, ಗಣ್ಯರು ಪಾಲ್ಗೊಂಡು ಅವರನ್ನು ಅಭಿನಂದಿಸಲಿದ್ದಾರೆಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಪ್ರಭುರಾಜ ಕಾಂತಾ, ಕಾರ್ಯದರ್ಶಿ ಬಸವರಾಜ ಖಂಡೇರಾವ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಧಾನ ಆಶ್ರಮದ ಮೌನ ತಪಸ್ವಿ ಜಡೆಯ ಶಾಂತಲಿಂಗ ಶ್ರೀಗಳು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಸಾನಿಧ್ಯದಲ್ಲಿ ನಡೆಯುವ ಸಮಾರಂಭವನ್ನು ಹಿರಿಯ ಕಲಾವಿದ ಡಾ. ಮೂರ್ತಿ ಸಮಾರಂಭ ಉದ್ಘಾಟಿಸಲಿದ್ದಾರೆ. ಸಂಸದ ರಾಧಾಕೃಷ್ಣ ದೊಡ್ಮನಿ ಗ್ರಂಥ ಬಿಡುಗಡೆಗೊಳಿಸಲಿದ್ದು, ಚಿತ್ರ ಕಲಾವಿದ ಡಾ. ಚಂದ್ರಶೇಖರ್, ಆರ್ಕೆ ಹುಡಗಿ, ಪ್ರೊ. ವಿಕ್ರಮ್ ವಿಸಾಜಿ, ಡಾ. ಪಿಎಸ್ ಶಂಕರ್, ವೆಂಕಟಾಚಲಪತಿ, ವಿಜಿ ಅಂದಾನಿ ಸಹಿತ ಮುಂಬೈನ ಚಿತ್ರ ಕಲಾವಿದರು, ಕಲಾಪೋಷಕರು, ಖಂಡೇರಾವ್ ಅವರ ಹಿತೈಷಿಗಳು ಭಾಗವಹಿಸುವರು ಎಂದು ವಿವರಿಸಿದರು.ಡಾ. ಅಶೋಕ ಶೆಟ್ಕಾರ್ ಅವರ ಲೇಖನದಲ್ಲಿ ಮೂಡಿ ಬಂದಿರುವ ಅಮೂರ್ತ್ ಧ್ಯಾನ ಕೃತಿಯಲ್ಲಿ ಚರಂಜೀವಿ ಸಿಂಗ್, ಜಸ್ಟಿಸ್ ಶಿವರಾಜ ಪಾಟೀಲ್, ಪಸ ಕುಮಾರ್, ಡಾ. ಸಂಜೀವ್, ಪದ್ಮಶ್ರೀ ಅದ್ವೈತ ಚರಣ ಸಹಿತ ಹಲವರು ಖ್ಯಾತ ಕಲಾವಿದರು, ಸಮಾಜ ಚಿಂತಕರು, ಪತ್ರಕರ್ತರು ಲೇಖನ ಬರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಲೇಖಕ ಡಾ. ಅಶೋಕ ಶೆಟ್ಕಾರ್, ಛಾಯಾಚಿತ್ರಗಾರ ನಾರಾಯಣ ಜೋಶಿ, ಕಲಾವಿದ ಪರಶುರಾಮ ಪಿ, ಹಿರಿಯ ಚಿತ್ರ ಕಲಾವಿದ ಮೋಹನ ಸೀತನೂರ್ ಉಪಸ್ಥಿತರಿದ್ದರು.
ಅಭಿಜಾತ ಚಿತ್ರ ಕಲಾವಿದ ಖಂಡೇರಾವ್: 1940 ರಲ್ಲಿ ಕಲಬುರಗಿಯಲ್ಲಿ ಜನಿಸಿರುವ ಖಂಡೇರಾವ ಅಭಿಜಾತ ಚಿತ್ರ ಕಲಾವಿದರು. ಮುಂಬೈನಲ್ಲಿ ಶಿಕ್ಷಣ ಮುಗಿಸಿ ಕಲಬುರಗಿಗೆ ಬಂದವರು. 1963- 65 ರಲ್ಲಿ ಕಲಬುರಗಿಯಲ್ಲಿ ಐಡಿಯಲ್ ಫೈನ್ ಆರ್ಟ್ ಕಾಲೇಜು ಸ್ಥಾಪಿಸಿ ತಮ್ಮೂರಲ್ಲೇ ಕಲಾವಿದರ ಬೆಳೆಸಿದ ಕೀರ್ತಿವಂತರು. ಶರಣಬಸವ ದೃಶ್ಯ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರ ಒಡೆದ ಗಾಜಿನ ಸರಣಿ, ಅನುಭವ ಮಂಟಪ ಕೃತಿ, ಜಾನಪದ ಕಲೆಗಳು ಮುಖ್ಯವಾಗಿವೆ. ಖಂಡೇರಾವ ಅವರಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ರಾಜ್ಯೋತ್ಸವ ಪುರಸ್ಕಾರ, ವರ್ಣಶಿಲ್ಪಿ ವೆಂಕಟಪ್ಪ ಪುರಸ್ಕಾರ, ನಾಡೋಜ ಗೌರವ ದೊರಕಿವೆ. ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿಯೂ ಖಂಡೇರಾವ್ ಸೇವೆ ಸಲ್ಲಿಸಿರುವುದು ವಿಶೇಷ. ಅವರ ಅನುಭವ ಮಂಟಪದ ಮೂಲ ತೈಲವರ್ಣ ಚಿತ್ರವನ್ನೇ ಆಧಾರವಾಗಿಟ್ಟುಕೊಂಡು ಬೆಳಗಾವಿ ಸುವರ್ಣ ವಿಧಾನ ಸೌಧಧಲ್ಲಿನ ಮೊಗಸಾಲೆಯಲ್ಲಿ ಅನುಭವ ಮಂಟಪ ಚಿತ್ರ ಬಿಡಿಸಿರೋದು ಖಂಡೇರಾವ್ ಅವರ ಕಲಾಕೃತಿಗೆ ಸಂದ ಬಹುದೊಡ್ಡ ಗೌರವ.