Tribute to the police who participated in 'Operation Bihar'

- ತೆರೆದ ಜೀಪಿನಲ್ಲಿ ಮೆರವಣಿಗೆ, ಜೆಸಿಪಿಯಿಂದ ಪುಷ್ಪಾರ್ಚನೆಕನ್ನಡಪ್ರಭ ವಾರ್ತೆ ಔರಾದ್

ಬೀದರ್ ನಗರದಲ್ಲಿ ಎಟಿಎಂ ದರೋಡೆ ಶೂಟ್ ಔಟ್ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಔರಾದ್ ಪೊಲೀಸ್ ಠಾಣೆ ಪಿಎಸ್ಐ ವಸಿಂ ಪಟೇಲ್ ಹಾಗೂ ಕ್ರೈಂ ತಂಡದ ಸಿಬ್ಬಂದಿ ಅರುಣ್ ಸಿಂಧೆ, ಸಂಜು, ವಿನೋದ್ ರೆಡ್ಡಿ, ಜ್ಞಾನದೇವ, ಅವರನ್ನು ಶುಕ್ರವಾರ ಔರಾದ್ ಪಟ್ಟಣದ ಕನ್ನಡದ ವೃತದಲ್ಲಿ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.

ಮುಖಂಡರಾದ ಸುಧಾಕರ್ ಕೊಳ್ಳುರ ಅವರ ನೇತೃತ್ವದಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿ ಜೆಸಿಪಿ ಮುಖಾಂತರ ಪುಷ್ಪಾರ್ಚನೆ ಮಾಡಿ, ಜಿಲ್ಲಾ ಪೊಲೀಸ್‌ ರಿಗೆ ಜೈ... ಕರ್ನಾಟಕ ರಾಜ್ಯ ಪೊಲೀಸರಿಗೆ ಜೈ.. ಎಂಬ ಜೈಕಾರ ಹಾಕಲಾಯಿತು. ಪ್ರಮುಖರಾದ ಅಶೋಕ ಶೆಂಬೆಳಿ, ಶಿವಶಂಕರ ಏಕಲಾರ, ಆನಂದ್ ಗಲಗಾಲೆ, ಶಿವಶಂಕರ ನಿಸ್ಪತೆ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಹೆಡೆ, ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ರಾಜು ಮುದ್ದಾಳೆ ಸೇರಿದಂತೆ ತಾಲೂಕಿನ ವಿವಿಧ ಜನಪರ ಸಂಘಟನೆಗಳ ಮುಖಂಡರು ಕನ್ನಡಪರ ಹೋರಾಟಗಾರರು ವಿದ್ಯಾರ್ಥಿಗಳು ಶಾಲಾ-ಕಾಲೇಜು ಸಂಸ್ಥೆ ಪದಾಧಿಕಾರಿಗಳು ಮುಂತಾದವರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಗೌರವಿಸಲಾಯಿತು.

ಮುಖಂಡ ಸುಧಾಕರ ಕೊಳ್ಳುರ ಮಾತನಾಡಿ, ಅಪರಾಧ ಎಸಗುವವರು ಎಷ್ಟೇ ಪ್ರಭಾವಿಗಳಾದರೂ ಎಲ್ಲೇ ಅಡಗಿ ಕುಳಿತರೂ ಕಾನೂನಿನ ಕಣ್ಣಿನಿಂದ ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ ಎಂದು ನಮ್ಮ ಬೀದರ್ ಜಿಲ್ಲಾ ಪೊಲೀಸರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬೀದರ್ ಜಿಲ್ಲಾ ಪೊಲೀಸರ ಈ ಶೌರ್ಯ ಕಾರ್ಯ ಇತಿಹಾಸ ಪುಟದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಸಾಹಸವಾಗಿದೆ ಎಂದು ಸುಧಾಕರ್ ಕೊಳ್ಳುರ ತಿಳಿಸಿದರು.

ಈ ಸಂದರ್ಭದಲ್ಲಿ ಸಿ.ಪಿ.ಐ ರಘುವೀರ್ ಸಿಂಗ್ ಠಾಕೂರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಓಂಪ್ರಕಾಶ್ ಧಡ್ಡೆ, ಪಿಎಸ್ಐ ರೇಣುಕಾ, ಎ ಎಸ್ ಐ ದಿಲೀಪ್, ಪೊಲೀಸ್ ಸಿಬ್ಬಂದಿಗಳಾದ ಅರುಣ್ ಸಿಂಧೆ, ಸಂಜು ಕುಮಾರ, ಕೊಟ್ರೇಶ್, ವಿನೋದ ರೆಡ್ಡಿ, ಜ್ಞಾನದೇವ್, ಹರೀಶ್, ಶಿವ ಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು.

--

ಚಿತ್ರ 14ಬಿಡಿಆರ್50:

ಅಪರೇಷನ್‌ ಬಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಔರಾದ್ ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

--