ಬುದ್ಧ ಭಾರತ ಫೌಂಡೇಷನ್ ವತಿಯಿಂದ ವಿ.ಶ್ರೀನಿವಾಸ್ ಪ್ರಸಾದ್‌ಗೆ ಶ್ರದ್ಧಾಂಜಲಿ

| Published : May 02 2024, 12:15 AM IST

ಬುದ್ಧ ಭಾರತ ಫೌಂಡೇಷನ್ ವತಿಯಿಂದ ವಿ.ಶ್ರೀನಿವಾಸ್ ಪ್ರಸಾದ್‌ಗೆ ಶ್ರದ್ಧಾಂಜಲಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಾದ್ ತಂದೆ ಒಂದು ಪ್ರಿಂಟಿಂಗ್ ಮಿಷನ್ ಇಟ್ಟಿದ್ದರು. ಅಲ್ಲಿ ಪ್ರಸಾದ್ ಕೆಲಸ ಮಾಡುತ್ತಿರಲಿಲ್ಲ, 1974ರಲ್ಲಿ ಚುನಾವಣೆ ಬಂತು, ಮಂಡ್ಯದವರು ಒಂದು ಒಕ್ಕೂಟ ಮಾಡಿಕೊಂಡಿದ್ವಿ. ನಾವೇಲ್ಲ ಸೇರಿ ಪ್ರಸಾದ್ ಅವರನ್ನು ಒಪ್ಪಿಸಿ ಸ್ವತಂತ್ರ ಅಭ್ಯರ್ಥಿಯಾಗಿ ರಾಜಕಾರಣ ಪ್ರವೇಶಿಸಿಸಲು ಪ್ರೇರಣೆ ನೀಡಿ, ಠೇವಣಿ ಹಣವನ್ನು ನಾವೇ ಕಟ್ಟಿ ಪ್ರಚಾರ ಮಾಡಿ, ಚುಣಾವಣೆಯಲ್ಲಿ 11 ಸಾವಿರ ಮತ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ನಗರದ ಬುದ್ಧ ಭಾರತ ಫೌಂಡೇಶನ್ ಕಚೇರಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ಬಿ.ಬಸವರಾಜು, 1973ರಲ್ಲಿ ನಾನು ಮತ್ತು ಪ್ರಸಾದ್ ಅವರು ಕಾಲೇಜು ಗೆಳಯರಾಗಿದ್ದೇವು. ವಿದ್ಯಾರ್ಥಿ ದಿನಗಳಲ್ಲಿ ಬಾರಿ ಉತ್ಸುಕ ಯುವಕರಾಗಿದ್ದರು ಎಂದು ಸ್ಮರಿಸಿದರು.

ಪ್ರಸಾದ್ ತಂದೆ ಒಂದು ಪ್ರಿಂಟಿಂಗ್ ಮಿಷನ್ ಇಟ್ಟಿದ್ದರು. ಅಲ್ಲಿ ಪ್ರಸಾದ್ ಕೆಲಸ ಮಾಡುತ್ತಿರಲಿಲ್ಲ, 1974ರಲ್ಲಿ ಚುನಾವಣೆ ಬಂತು, ಮಂಡ್ಯದವರು ಒಂದು ಒಕ್ಕೂಟ ಮಾಡಿಕೊಂಡಿದ್ವಿ. ನಾವೇಲ್ಲ ಸೇರಿ ಪ್ರಸಾದ್ ಅವರನ್ನು ಒಪ್ಪಿಸಿ ಸ್ವತಂತ್ರ ಅಭ್ಯರ್ಥಿಯಾಗಿ ರಾಜಕಾರಣ ಪ್ರವೇಶಿಸಿಸಲು ಪ್ರೇರಣೆ ನೀಡಿ, ಠೇವಣಿ ಹಣವನ್ನು ನಾವೇ ಕಟ್ಟಿ ಪ್ರಚಾರ ಮಾಡಿ, ಚುಣಾವಣೆಯಲ್ಲಿ 11 ಸಾವಿರ ಮತ ಪಡೆದುಕೊಂಡರು ಎಂದರು.

ಮುಂದಿನ ದಿನಗಳಲ್ಲಿ ಅವರ ರಾಜಕಾರಣ ಅದೃಷ್ಟವೇ ಬದಲಿಸಿತು, ಶಾಸಕರಾಗಿ, ಸಚಿವರಾಗಿ, ಸಂಸದರಾಗಿ, ಮುತ್ಸದಿ ನಾಯಕರಾಗಿ ಬಳೆದು, ರಾಜ್ಯ, ರಾಷ್ಟ್ರದಲ್ಲಿ ತಮದೇ ಆದ ಕೊಡುಗೆ ನೀಡಿದರು ಎಂದು ಸ್ಮರಿಸಿದರು.

ಬುದ್ಧ ಭಾರತ ಫೌಂಡೇಶನ್ ಅಧ್ಯಕ್ಷ ವಕೀಲ ಜೆ.ರಾಮಯ್ಯ ಮಾತನಾಡಿದರು. ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಭಾವಚಿತ್ರಕ್ಕೆ ವಿವಿಧ ಸಂಘಟನೆಗಳ ಚಿಂತಕರು ದೀಪ-ಪುಷ್ಪನಮನ ಸಲ್ಲಿಸಿ, ಸಂತಾಪ ಸೂಚಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಅಭಿಯಂತರ ಮಹಾದೇವಸ್ವಾಮಿ, ಕರವೇ ಅಶೋಕ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿಎಲ್ ಶಿವಕುಮಾರ್, ಕುಮಾರ್, ಮುಸ್ಲಿಂ ಮುಖಂಡ ಅಮ್ಜದ್ ಪಾಸ, ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ವಕೀಲ ಅನಿಲ್ ಕುಮಾರ್, ದ್ರಾವಿಡ ಚಳವಳಿಯ ಮುಖ್ಯಸ್ಥ ಅಭಿಗೌಡ, ವಕೀಲ ಬೊಮ್ಮಯ್ಯ , ಮೋಹನ್ ಕುಮಾರ್, ಎಸ್ಸಿಎಸ್ಟಿ ಸರ್ಕಾರಿ ನೌಕರರ ಸಂಘದ ಮುಖಂಡ ನಾಗರಾಜ್ ಅಂಬೇಡ್ಕರ್, ಪ್ರಸೂತಿ ತಜ್ಞ ಡಾ.ಯೋಗೇಂದ್ರ ಕುಮಾರ್, ಹನಕೆರೆ ಗಂಗರಾಜ್, ವೇಣುಗೋಪಾಲ್, ಥಾಮಸ್ ಬೆಂಜಮಿನ್, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ ಪ್ರಕಾಶ್ ಮತ್ತಿತರರಿದ್ದರು.