ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ನಿಟ್ಟೆ ಪರಿಗಣಿತ ವಿವಿ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಬೈಕಂಪಾಡಿ ಕೈಗಾರಿಕಾ ವಸಾಹತಿನಲ್ಲಿರುವ ಲೆಮಿನಾ ಕಂಪೆನಿಯಲ್ಲಿ ಶನಿವಾರ ನಡೆಯಿತು.

ಮಂಗಳೂರು: ಲೆಮಿನಾ ಸಮೂಹ ಸಂಸ್ಥೆಗಳ ಸಂಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು, ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ನಿಟ್ಟೆ ಪರಿಗಣಿತ ವಿವಿ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಬೈಕಂಪಾಡಿ ಕೈಗಾರಿಕಾ ವಸಾಹತಿನಲ್ಲಿರುವ ಲೆಮಿನಾ ಕಂಪೆನಿಯಲ್ಲಿ ಶನಿವಾರ ನಡೆಯಿತು.ಲೆಮಿನಾ ಸಮೂಹ ಸಂಸ್ಥೆಗಳ ನಿರ್ದೇಶಕ ಎಂ. ರಾಜೇಂದ್ರ ನುಡಿನಮನ ಸಲ್ಲಿಸಿ, ವಿನಯ ಹೆಗ್ಡೆ ಅವರು 50 ಕಾರ್ಮಿಕ ಸಿಬ್ಬಂದಿಯಿಂದ 1975-76ರಲ್ಲಿ ಆರಂಭಿಸಿದ ಕೈಗಾರಿಕಾ ಕ್ಷೇತ್ರದ ಆಟೋಮೊಬೈಲ್ ಬಿಡಿ ಭಾಗಗಳ ತಯಾರಿಕಾ ಲೆಮಿನಾ ಕಂಪೆನಿ ಇಂದಿಗೆ 50 ವರ್ಷಗಳನ್ನು ಪೂರೈಸಿದ್ದು, ಒಂದೂವರೆ ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಿದೆ. ಶಿಕ್ಷಣ ಕ್ಷೇತ್ರದ ನಿಟ್ಟೆ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗಾವಕಾಶ ದೊರೆತಿದೆ. ಕಾರ್ಮಿಕ ಸಿಬ್ಬಂದಿಗಳನ್ನು ಕುಟುಂಬದಂತೆ ನೋಡಿಕೊಂಡು ಅವರ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡಿ, ಸಹಾಯ ಹಸ್ತ ನೀಡಿ, ಆರೋಗ್ಯ ರಕ್ಷಣೆ ಕೂಡ ಒದಗಿಸಿದ ಮೇರು ವ್ಯಕ್ತಿತ್ವ ವಿನಯ ಹೆಗ್ಡೆ ಅವರದು ಎಂದು ಹೇಳಿದರು.ಲೆಮಿನಾ ಸಂಸ್ಥೆಯ ನಿರ್ದೇಶಕ ಬಿ.ಎಸ್. ಬಾಳಿಗ ಮಾತನಾಡಿ ನುಡಿನಮನ ಸಲ್ಲಿಸಿದರು. ಲೆಮಿನಾ ಸಂಸ್ಥೆಯ ಕಾರ್ಮಿಕ ಸಿಬ್ಬಂದಿಗಳ ಪ್ರತಿನಿಧಿ ರವೀಂದ್ರ ಟಿ. ಮಾತನಾಡಿದರು.

ವಿನಯ ಹೆಗ್ಡೆ ಅವರ ಪುತ್ರ ಹಾಗೂ ನಿರ್ದೇಶಕ ವಿಶಾಲ್ ಹೆಗ್ಡೆ, ಮೊಮ್ಮಗ ವಿರೇನ್ ಹೆಗ್ಡೆ, ಕುಟುಂಬ ಸದಸ್ಯರು, ನಿರ್ದೇಶಕರಾದ ಅವಿನಾಶ್ ಶೆಣೈ, ಸಿಇಒ ರೋಶನ್ ಪಿಂಟೊ, ಲೆಮಿನಾ ಸಂಸ್ಥೆಯ ಅಧಿಕಾರಿಗಳಾದ ಅಜಿತ್ ಆಳ್ವ, ಚಂದ್ರಶೇಖರ ಸಾಲಿಯಾನ್, ಸುಧಾಕರ ಶೆಟ್ಟಿ, ಶ್ರೀಧರ ಮೆಲಾಂಟ, ಸಪ್ನಾ ಕೆ., ಬಿ.ಆರ್. ಬಾಳಿಗ, ಎ.ಆರ್. ಭಾಂಡಗೆ, ಸದಾನಂದ ಸಾಲಿಯಾನ್,‌ ಮೋಹನ್ ಹೆಗ್ಡೆ, ಎಲೋಶಿಯಸ್ ಸಿಕ್ವೆರಾ, ವಿಟ್ಠಲ್ ಭಟ್, ರವಿ ಶೆಟ್ಟಿ, ಶಾಂತೇರಿ ಬಾಳಿಗ, ರಮೇಶ್ ಶೆಟ್ಟಿ, ವಿಶುಕುಮಾರ್, ಪ್ರಕಾಶ್ ಕುಡ್ವ, ಕೃಷ್ಣ ಅಂಚನ್, ಪುನೀತ್ ಭಟ್ ಹಾಗೂ ನೂರಾರು ಕಾರ್ಮಿಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದು ವಿನಯ ಹೆಗ್ಡೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.

ಸುರೇಶ್ ರಾವ್ ಪ್ರಸ್ತಾವಿಸಿ, ನಿರೂಪಿಸಿದರು.