ಮೀಸಲು ಹೋರಾಟಕ್ಕೆ ಕೊಡುಗೆ ನೀಡಿದ ವಿಶ್ವನಾಥ್‌ಗೆ ಸನ್ಮಾನ

| Published : Aug 22 2024, 12:52 AM IST

ಮೀಸಲು ಹೋರಾಟಕ್ಕೆ ಕೊಡುಗೆ ನೀಡಿದ ವಿಶ್ವನಾಥ್‌ಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾದಿಗ ಜನಾಂಗದ ಹಿತಕ್ಕಾಗಿ ಒಳಮೀಸಲಾತಿ ಜಾರಿಗೆ ಮನವಿ ಸಲ್ಲಿಸುವ ಮೂಲಕ ಸಹಕಾರ ನೀಡಿದ್ದ ಶಾಸಕ ಎಸ್‌.ಆರ್‌. ವಿಶ್ವನಾಥ್ ಅವರನ್ನು ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಲಿಂಗನಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ಮಾದಿಗ ಜನಾಂಗದ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಯಲಹಂಕ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪು ಸ್ವಾಗತಿಸಿರುವ ಯಲಹಂಕ ಕ್ಷೇತ್ರದ ಮಾದಿಗ ಜನಾಂಗದ ಮುಖಂಡರು, ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾದಿಗ ಜನಾಂಗದ ಹಿತಕ್ಕಾಗಿ ಒಳಮೀಸಲಾತಿ ಜಾರಿಗೆ ಮನವಿ ಸಲ್ಲಿಸುವ ಮೂಲಕ ಸಹಕಾರ ನೀಡಿದ್ದ ಶಾಸಕ ಎಸ್‌.ಆರ್‌. ವಿಶ್ವನಾಥ್ ಅವರನ್ನು ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಲಿಂಗನಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ಮಾದಿಗ ಜನಾಂಗದ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.ಈ ವೇಳೆ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಲಿಂಗನಹಳ್ಳಿ ವೆಂಕಟೇಶ್ ಮಾತನಾಡಿ, ಜನಸಂಖ್ಯೆ ಆಧಾರಿತ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನ ಮೂಲಕ ಸೂಚಿಸಿರುವುದು ಸ್ವಾಗತಾರ್ಹವಾದ ಬೆಳವಣಿಗೆ. ಸುಪ್ರೀಂ ಕೋರ್ಟ್ ಗೆ ಅಂದಿನ ಬಿಜೆಪಿ ಸರ್ಕಾರದ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಳ ಮೀಸಲಾತಿ ಜಾರಿ ಕುರಿತು ಅರ್ಜಿ ಸಲ್ಲಿಸಲಾಗಿತ್ತು. ಇದೀಗ ತೀರ್ಪು ಹೊರಬಿದ್ದಿದ್ದು, ಒಳ ಮೀಸಲಾತಿ ಜಾರಿಗಾಗಿ ಅಂದು ಮಾಧುಸ್ವಾಮಿ ನೇತೃತ್ವದಲ್ಲಿ ರಚಿಸಲಾಗಿದ್ದ ಉಪಸಮಿತಿಗೆ ಒಳ ಮೀಸಲಾತಿ ಜಾರಿಗೆ ಶಿಫಾರಸ್ಸು ಮಾಡುವಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಯಲಹಂಕ ಶಾಸಕ ಎಸ್.ಆರ್‌.ವಿಶ್ವನಾಥ್‌ ಅವರು ಮಾದಿಗ ಜನಾಂಗದ ಪರವಾಗಿ ಪ್ರತ್ಯೇಕವಾಗಿ ಮನವಿ ಸಲ್ಲಿಸುವ ಮೂಲಕ ಮಾದಿಗ ಜನಾಂಗದ ಹಿತಕ್ಕಾಗಿ ಸಹಕಾರ ನೀಡಿದ್ದರು ಈ ಹಿನ್ನೆಲೆ ಇಂದು ವಿಶ್ವನಾಥ್ ಅವರಿಗೆ ಯಲಹಂಕ ತಾಲೂಕು ವ್ಯಾಪ್ತಿಯ ಮಾದಿಗ ಜನಾಂಗದ ಪರವಾಗಿ ಸನ್ಮಾನಿಸಲಾಗುತ್ತಿದೆ.ಒಳ ಮೀಸಲಾತಿ ಜಾರಿ ಕುರಿತಂತೆ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಇತ್ತೀಚೆಗೆ ನಿಧನರಾದ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಜಗದೀಶ್ ಅವರ ಕೊಡುಗೆ ಸ್ಮರಣೀಯ, ಈ ವೇಳೆ ಅವರಿಗೂ ಸಹ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನ ತೀರ್ಪಿನ ಮೇರೆಗೆ ಕೂಡಲೇ ಜನಸಂಖ್ಯೆ ಆಧಾರಿತ ಒಳಮೀಸಲಾತಿ ಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಮಾದಿಗ ಸಮಯದಾಯದ ಮುಖಂಡರಾದ ಆವಲಹಳ್ಳಿ ಸುರೇಶ್, ವೀರಸಾಗರ ನಾಗೇಶ್, ದೇವಿಕುಮಾರ್ ಸೇರಿ ಹಲವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡರಾದ ಕುಂಬಾರಹಳ್ಳಿ ಶ್ರೀನಿವಾಸ್, ಮುತ್ತುಗದಹಳ್ಳಿ ಮುನಿರಾಜು, ಮಾರಸಂದ್ರ ಮುನಿದಾಸಪ್ಪ, ರಾಮಕೃಷ್ಣಪ್ಪ, ಮೈಲಾರಪ್ಪ, ಸೀತಕೆಂಪನಹಳ್ಳಿ ಚಂದ್ರಶೇಖರ್, ಸಿಂಗನಾಯಕನಹಳ್ಳಿ ಮಲ್ಲೇಶ್, ಮುನಿಕೃಷ್ಣ, ಮಾದಪ್ಪನಹಳ್ಳಿ ನರಸಿಂಹಯ್ಯ, ವೆಂಕಟಾಲ ಮುನಿರಾಜು, ಯಲಹಂಕ ಜಯಣ್ಣ, ಅಟ್ಟೂರು ವಿಶ್ವ, ಡಿ.ಕುಮಾರ್, ನಾಗದಾಸನಹಳ್ಳಿ ಚಂದ್ರು, ಜೈಲಿಂಗಯ್ಯ, ಮಾರಸಂದ್ರ ಅಶೋಕ್, ಮಾಕಳಿ ರವಿಚಂದ್ರ, ಮಾಚೋಹಳ್ಳಿ ಹನುಮಂತರಾಜು, ಪಿಳ್ಳಹಳ್ಳಿ ಚಂದ್ರಶೇಖರ್, ಮಾದಪ್ಪನಹಳ್ಳಿ ರಾಜಶೇಖರ್ ಸೇರಿದಂತೆ ಇನ್ನಿತರರಿದ್ದರು.