ಯಕ್ಷಗಾನ ಭಾಗವತ ರತ್ನಾಕರ ಶೆಣೈ ಶಿವಪುರಗೆ ಗೌರವಾರ್ಪಣೆ

| Published : Oct 16 2024, 12:40 AM IST

ಸಾರಾಂಶ

ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸಂಪನ್ನಗೊಂಡ ವೈಭವದ ನವರಾತ್ರಿ- ಶ್ರೀ ಶಾರದಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಪುರದ ಶಿವಪ್ರಭಾ ಯಕ್ಷ ವಿಶ್ವ ಬಳಗ ಇದರ ವಿದ್ಯಾರ್ಥಿಗಳಿಂದ ಕೊಂಕಣಿ ಯಕ್ಷಗಾನ ‘ಶ್ರೀ ಕೃಷ್ಣ ಪುಷ್ಪ ವಿಲಾಸ’ ಪ್ರದರ್ಶನಗೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸಂಪನ್ನಗೊಂಡ ವೈಭವದ ನವರಾತ್ರಿ- ಶ್ರೀ ಶಾರದಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಪುರದ ಶಿವಪ್ರಭಾ ಯಕ್ಷ ವಿಶ್ವ ಬಳಗ ಇದರ ವಿದ್ಯಾರ್ಥಿಗಳಿಂದ ಕೊಂಕಣಿ ಯಕ್ಷಗಾನ ‘ಶ್ರೀ ಕೃಷ್ಣ ಪುಷ್ಪ ವಿಲಾಸ’ ಪ್ರದರ್ಶನಗೊಂಡಿತು.

ಈ ಪ್ರಸಂಗವನ್ನು ನಿರ್ದೇಶಿಸಿ, ಭಾಗವತರಾಗಿ ರತ್ನಾಕರ ಶೆಣೈ ಶಿವಪುರ, ಮದ್ದಲೆಯಲ್ಲಿ ಆನಂದ್ ಭಟ್ ಮತ್ತು ಪ್ರದೀಪ್ ಭಟ್, ಚೆಂಡೆಯಲ್ಲಿ ಗಣೇಶ್ ಶೆಣೈ ಮತ್ತು ಮಾಸ್ಟರ್ ಸಂದೇಶ್ ಸಹಕರಿಸಿದರು.ಇದೇ ಸಂದರ್ಭ ದೇವಳದ ವತಿಯಿಂದ ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದು ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ, ಯಕ್ಷ ಗುರುಗಳಾಗಿ ಉಚಿತವಾಗಿ ಯಕ್ಷಗಾನ ತರಬೇತಿ ನೀಡುವುದರ ಜೊತೆಗೆ 100ಕ್ಕೂ ಹೆಚ್ಚು ಕಡೆಗಳಲ್ಲಿ ಕನ್ನಡ, ಕೊಂಕಣಿ, ತುಳು ಭಾಷೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆ ಪಡೆದ ಭಾಗವತ ರತ್ನಾಕರ ಶೆಣೈ ಶಿವಪುರ ಅವರನ್ನು ದೇವಳದ ಮೊಕ್ತೇಸರ ಪಿ.ವಿ. ಶೆಣೈ ಗೌರವಿಸಿದರು.ಈ ಕಾರ್ಯಕ್ರಮದಲ್ಲಿ ಜಿಎಸ್ ಬಿ ಯುವಕ ಮಂಡಳಿ ಅಧ್ಯಕ್ಷ ನಿತೇಶ್ ಶೆಣೈ, ಸಂಘದ ಪದಾಧಿಕಾರಿಗಳು ಮತ್ತು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.