ಮಡಿಕೇರಿ: ಭಗತ್ ಸಿಂಗ್, ರಾಜಗುರು, ಸುಖದೇವ್ ಗೌರವ ನಮನ

| Published : Mar 29 2025, 12:36 AM IST

ಸಾರಾಂಶ

ಮಹಾನ್‌ ಕ್ರಾಂತಿಕಾರಿಗಳಾದ ಭಗತ್‌ಸಿಂಗ್‌, ರಾಜಗುರು, ಸುಖದೇವ್‌ ಅವರ ಬಲಿದಾನ ದಿನದ ಅಂಗವಾಗಿ ಪುಷ್ಪ ನಮನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಡಿಕೇರಿ ಘಟಕವು ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಬಲಿದಾನ ದಿನದ ಅಂಗವಾಗಿ ನಗರದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಮೌನಾಚರಣೆ ಮತ್ತು ಪುಷ್ಪ ನಮನ ಕಾರ್ಯಕ್ರಮವನ್ನು ಆಯೋಜಿಸಿತ್ತು.

ವಿದ್ಯಾರ್ಥಿಗಳು ಮಹಾನ್ ಕ್ರಾಂತಿಕಾರಿಗಳ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು. ನಂತರ, ನಗರದ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಅಲ್ಲಿಯೂ ಪುಷ್ಪ ನಮನ ಸಲ್ಲಿಸುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಿದರು.

ಎಬಿವಿಪಿ ಸದಸ್ಯ ಪ್ರಮೋದ್ ಮಾತನಾಡಿ, ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಜೀವನ ಮತ್ತು ಹೋರಾಟದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮಡಿಕೇರಿ ತಾಲೂಕು ಸಂಚಾಲಕ ಮಂಜು, ನಗರ ಕಾರ್ಯದರ್ಶಿ ಸಂತೋಷ್, ನಗರ ಸಹ ಕಾರ್ಯದರ್ಶಿ ಸೌಜನ್ಯ ಮತ್ತು ಇತರ ಎಬಿವಿಪಿ ಸದಸ್ಯರು ಇದ್ದರು.