ಸಾರಾಂಶ
-ಚಳ್ಳಕೆರೆಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಕಾಶ್ಮೀರದ ಪಹಲ್ಗಾಮ್ ಘಟನೆಗೆ ಖಂಡನೆ । ಪಾಕಿಸ್ತಾನಕ್ಕೆ ತಿರುಗೇಟಿಗೆ ಒತ್ತಾಯ
----ಕನ್ನಡಪ್ರಭವಾರ್ತೆ ಚಳ್ಳಕೆರೆ
ವಿಶ್ವಮಟ್ಟದಲ್ಲಿ ಭಾರತ ಶಾಂತಿ ರಾಷ್ಟ್ರವೆಂಬ ಖ್ಯಾತಿ ಇದ್ದು, ಇಂದಿಗೂ ಭಾರತದಲ್ಲಿ ಯಾವುದೇ ಸಮುದಾಯಗಳ ಬಗ್ಗೆ ದೌರ್ಜನ್ಯ ಹಾಗೂ ಅವಮಾನ ಘಟನೆಗಳು ನಡೆದಿಲ್ಲ. ಕೆಲವೆಡೆ ಮಾತ್ರ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಅಖಂಡ ಭಾರತದಲ್ಲಿ ಶಾಂತಿ ಪ್ರಿಯರು ಹೆಚ್ಚಾಗಿದ್ದಾರೆ. ದೇವರು ಮತ್ತು ಧರ್ಮದ ಬಗ್ಗೆ ಅಘಾದ ವಿಶ್ವಾಸ ಹೊಂದಿದ ಭಾರತೀಯರ ವೈಭವದ ಬದುಕಿನ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಕುಟುಂಬದೊಡನೆ ಪ್ರವಾಸಕ್ಕೆ ತೆರಳಿದ ವೇಳೆ ಪಾಕಿಸ್ತಾನದಲ್ಲಿ ತರಬೇತಿ ಪಡೆದ ಉಗ್ರರು
ನಿರ್ಧಾಕ್ಷಿಣ್ಯವಾಗಿ ಅವರ ಮೇಲೆ ಗುಂಡು ಹಾರಿಸಿ ಸಾವಿಗೆ ಕಾರಣರಾದ ಪಾಕಿಸ್ತಾನ ಪ್ರೇರಿತ ಭಯೋತ್ಪಾದನ ಚಟುವಟಿಕೆ ಎಲ್ಲರೂ ಖಂಡಿಸಬೇಕು. ಮುಂಬರುವ ದಿನಗಳಲ್ಲಿ ಪಾಕಿಸ್ತಾನ ತಾನು ಪ್ರೇರೇಪಿಸಿದ ಹೀನಕೃತ್ಯಕ್ಕೆ ಪಶ್ಚಾತಾಪ ಪಡೆಬೇಕಾಗುತ್ತದೆ ಎಂದು ವಿಶ್ವಹಿಂದೂಪರಿಷತ್ ಜಿಲ್ಲಾ ಉಪಾಧ್ಯಕ್ಷ ಡಾ.ಡಿ.ಎನ್.ಮಂಜುನಾಥ ತಿಳಿಸಿದರು.ಪಹಲ್ಗಾಮ್ ನಲ್ಲಿ ಮಡಿದ ಭಾರತೀಯರಿಗೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ನೇತಾರರು, ಮಹಿಳಾ ಸಂಘಟನೆ ಶ್ರದ್ದಾಂಜಲಿ ಹಾಗೂ ಉಗ್ರಗಾಮಿ ಚಟುವಟಿಕೆ ವಿರೋಧಿಸಿ ಶಾಂತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ವಾಲ್ಮೀಕಿ ವೃತ್ತದಿಂದ ಅಂಬೇಡ್ಕರ್, ನೆಹರೂ ವೃತ್ತಕ್ಕೆ ಆಗಮಿಸಿದ ಹಿಂದೂಬಂಧುಗಳು ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರಲ್ಲದೆ, ಉಗ್ರಗಾಮಿಗಳ ಗುಂಡಿಗೆ ಬಲಿಯಾದವರಿಗೆ ದೀಪ ಹಚ್ಚಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಮೆರವಣಿಯುದ್ದಕ್ಕೂ ಉಗ್ರಗಾಮಿಗಳ ವಿರುದ್ಧ ಘೋಷಣೆಗಳು ಕೂಗಿದರು.ಬಿಜೆಪಿ ಯುವ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಕಾಲುವೇಹಳ್ಳಿ ಪಾಲಯ್ಯ, ಏ.೨೨ರಂದು ನಡೆದ ಉಗ್ರಗಾಮಿಗಳ ದಾಳಿಗೆ ಪ್ರಧಾನಿ ಶೀಘ್ರದಲ್ಲೇ ಉತ್ತರ ನೀಡುತ್ತಾರೆ ಎಂದರು.
ಖ್ಯಾತ ಜ್ಯೋತಿಷಿ ಡಾ.ಅನಂತರಾಮ್ ಗೌತಮ್, ಭಯೋತ್ಪಾದನೆ ಎಂಬುದು ಭಾರತಕ್ಕೆ ಶಾಪವಾಗಿದೆ ಎಂದರು.ಉಗ್ರಗಾಮಿ ಚಟುವಟಿಕೆಗೆ ಕೇಂದ್ರ ಸರ್ಕಾರ ಸಂಪೂರ್ಣ ನಾಶಪಡಿಸುವ ಕಾರ್ಯಕ್ಕೆ ಮುಂದಾಗಬೇಕೆಂದರು.
ವಿಶ್ವಹಿಂದೂಪರಿಷತ್, ಬಜರಂಗದಳ ಮತ್ತು ಹಿಂದೂಪರ ಸಂಘಟನೆಗಳು ನೀಡಿದ ಕರೆಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಯಿತು.ಈಗಾಗಲೇ ಪ್ರಧಾನಿ ಮೋದಿ ತುರ್ತು ಸಭೆ ನಡೆಸಿ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದ್ಧಾರೆ. ತಪ್ಪಿಸಿಕೊಂಡಿರುವ ಉಗ್ರಗಾಮಿಗಳನ್ನು ಕೂಡಲೇ ಹುಡುಕಿ ಶಿಕ್ಷೆ ಕೊಡಲು ಕೇಂದ್ರ ಸರ್ಕಾರ ಮುಂದಾಗಬೇಕು.
ಬಾಳೆಮಂಡಿರಾಮದಾಸ್, ಡಿ.ಎಂ.ತಿಪ್ಪೇಸ್ವಾಮಿ, ಡಾ.ಕೆ.ಎಂ.ಜಯಕುಮಾರ್, ಡಾ.ಎಲ್.ಎಸ್.ವೀರೇಶ್, ಪಿ.ತಿಪ್ಪೇಸ್ವಾಮಿ(ಪಿಟಿ), ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ಡಾ.ನಾಗರಾಜು, ಬಜರಂಗದಳದ ಉಮೇಶ್, ಮಹಂತೇಶ್, ಟಿ.ಮಂಜುನಾಥ, ಬೇಕರಿಮಂಜುನಾಥ, ಈಶ್ವರನಾಯಕ, ಕೆ.ಎಂ.ಯತೀಶ್, ಎಂ.ಸತ್ಯನಾರಾಯಣರಾವ್, ಡಿ.ಜಿ.ಪ್ರಕಾಶ್, ಕೆ.ಪಿ.ನಾಗಭೂಷಣ್, ಎಸ್.ಎಂ.ಗಂಗಾಧರಯ್ಯ, ಆರ್.ಜಗದೀಶ್, ಸಿ.ಎಸ್.ಗೋಪಿನಾಥ, ಮಧುಮತಿ, ಶುಭಾ, ಜಗದಾಂಭ, ಶಾಂತಲಾ ಪಾಲ್ಗೊಂಡಿದ್ದರು. ಡಿವೈಎಸ್ಪಿ ಟಿ.ಬಿ.ರಾಜಣ್ಣ, ಠಾಣಾ ಇನ್ಸ್‌ಪೆಕ್ಟರ್ ರಾಜಫಕೃದ್ದೀನ್ ದೇಸಾಯಿ, ಪಿಎಸ್‌ಐ ಧರೆಪ್ಪಬಾಳಪ್ಪದೊಡ್ಡಮನಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.----
ಪೋಟೋ: ಚಳ್ಳಕೆರೆ ನಗರದ ವಿಶ್ವಹಿಂದೂಪರಿಷತ್, ಬಜರಂಗದಳ, ವಿವಿಧ ಸಂಘ ಸಂಸ್ಥೆಗಳು ಕಾಶ್ಮೀರದ ಪಹಲ್ಗಾಮ್ ಘಟನೆಯನ್ನು ಖಂಡಿಸಿ ಪ್ರತಿಭಟನೆ ಮೆರವಣಿಗೆ ನಡೆಸಿದರು.------
೨೫ಸಿಎಲ್ಕೆ೧ಪೋಟೋ: ಚಳ್ಳಕೆರೆ ನಗರದ ವಿಶ್ವಹಿಂದೂಪರಿಷತ್, ಬಜರಂಗದಳ, ವಿವಿಧ ಸಂಘ ಸಂಸ್ಥೆಗಳು ನೆಹರೂ ವೃತ್ತದಲ್ಲಿ ಕಾಶ್ಮೀರದ ಪಹಲ್ಗಾಮ್ ಘಟನೆಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
೨೫ಸಿಎಲ್‌ಕೆ೦೧