ಸಾರಾಂಶ
ಪಟ್ಟಣದ ಬೆಣ್ಣೆ ಪೇಟೆಯ ನಿವಾಸಿ ಭೀಮಣ್ಣ ಗೋಡಿ ಅವರ ಮನೆಯ ಕೀಲಿ ಮುರಿದು ಬಂಗಾರ ಹಾಗೂ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಲಕ್ಷ್ಮೇಶ್ವರ: ಪಟ್ಟಣದ ಬೆಣ್ಣೆ ಪೇಟೆಯ ನಿವಾಸಿ ಭೀಮಣ್ಣ ಗೋಡಿ ಅವರ ಮನೆಯ ಕೀಲಿ ಮುರಿದು ಬಂಗಾರ ಹಾಗೂ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಪಟ್ಟಣದಲ್ಲಿನ ಜನನಿಬಿಡ ಪ್ರದೇಶವಾದ ಹಾವಳಿ ಹನಮಪ್ಪನ ಗುಡಿಯ ಹತ್ತಿರ ಇರುವ ಗೋಡಿ ಅವರ ಮನೆಯ ಬಾಗಿಲ ಕೀಲಿ ಮುರಿದ ಕಳ್ಳರು, ಮನೆಯಲ್ಲಿದ್ದ ಮೂರುವರೆ ತೊಲೆ ಬಂಗಾರದ ಪದಕ, 1 ಜೊತೆ ಕಿವಿಯೋಲೆ ಹಾಗೂ ಆರು ಸಾವಿರ ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಪಟ್ಟಣದಲ್ಲಿ ಮನೆ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಭಯ ಭೀತರಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು.
ಭೀಮಣ್ಣ ಗೋಡಿ ಅವರು ಶುಕ್ರವಾರ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರಿಂದ ಆತನ ಪತ್ನಿಯು ಪಟ್ಟಣದಲ್ಲಿಯೇ ಇರುವ ಮಗಳ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಅರಿತಿದ್ದ ಕಳ್ಳರು ಕಳ್ಳತನ ಮಾಡಿದ್ದಾರೆ. ಪಟ್ಟಣದ ಪೊಲೀಸರು ಕಳ್ಳತನ ನಡೆದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.