ನಂಬಿಕೆ, ಪ್ರಾಮಾಣಿಕತೆಯಿಂದ ಸಹಕಾರಿ ಸಂಘದ ಏಳ್ಗೆ: ಪಾಲಬಾವಿ

| Published : Aug 09 2024, 12:49 AM IST

ನಂಬಿಕೆ, ಪ್ರಾಮಾಣಿಕತೆಯಿಂದ ಸಹಕಾರಿ ಸಂಘದ ಏಳ್ಗೆ: ಪಾಲಬಾವಿ
Share this Article
  • FB
  • TW
  • Linkdin
  • Email

ಸಾರಾಂಶ

ಸದಸ್ಯರ ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಸಹಕಾರಿ ಸಂಘಗಳು ಏಳ್ಗೆ ಹೊಂದಲು ಸಾಧ್ಯ ಎಂದು ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಂ. ಪಾಲಬಾವಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಸದಸ್ಯರ ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಸಹಕಾರಿ ಸಂಘಗಳು ಏಳ್ಗೆ ಹೊಂದಲು ಸಾಧ್ಯ ಎಂದು ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಂ. ಪಾಲಬಾವಿ ಹೇಳಿದರು.

ಪಟ್ಟಣದ ಎ.ಕೆ. ಪ್ರೌಢಶಾಲೆ ಸಭಾಂಗಣದಲ್ಲಿ ಅಥಣಿ ತಾಲೂಕು ಅನುದಾನಿತ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ 38ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಸಂಘದ ವರದಿ ವಾಚನ ಮಂಡಿಸಿ ಮಾತನಾಡಿದರು. ಪರಸ್ಪರ ನಂಬಿಕೆ, ಸೌಹಾರ್ದತೆ ಮತ್ತು ವಿಶ್ವಾಸ ಎಂಬುದು ಸಹಕಾರಿ ತತ್ವದ ಪ್ರಮುಖ ಉದ್ದೇಶ. ನಮ್ಮ ನಮ್ಮ ಆರ್ಥಿಕ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಮಗೆ ನಾವೇ ಸ್ಪಂದಿಸಬೇಕೆನ್ನುವ ಉದ್ದೇಶದಿಂದ ಪ್ರಾರಂಭವಾದ ಅನುದಾನಿತ ಶಾಲಾ ನೌಕರರ ಪತ್ತಿನ ಸಹಕರಿ ಸಂಘ ಯಶಸ್ವಿಯಾಗಿ 38ನೇ ವರ್ಷ ಪೂರೈಸಿ ಪ್ರಗತಿಯೆಡೆಗೆ ಸಾಗುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದು ಹೇಳಿದ ಅವರು, 300ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಸಂಘ ₹10 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸಂಘದ ಸದಸ್ಯರಿಗೆ ಶೇ.11ರ ಬಡ್ಡಿ ದರದಲ್ಲಿ ಗರಿಷ್ಠ 16 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗಿದೆ. ಸಂಘವು 2023 -24ನೇ ಸಾಲಿನಲ್ಲಿ ₹7,85,655 ನಿವ್ವಳ ಲಾಭ ಹೊಂದಿದೆ. ಕಳೆದ 37 ವರ್ಷಗಳಿಂದ ಸತತ ಲಾಭದಲ್ಲಿರುವ ನಮ್ಮ ಸಂಘ ಸದಸ್ಯರ ಪಾಲಿನ ಸಂಜೀವಿನಿಯಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಹೆಚ್ಚಿನ ಸಾಲ ಸೌಲಭ್ಯ ನೀಡಲಾಗಿದ್ದು, ನಮ್ಮ ಸಂಘದ ಹಿರಿಯ ಸದಸ್ಯರು ಕಟ್ಟಿದ ಈ ಸಂಘವನ್ನು ನಾವೆಲ್ಲರೂ ಇನ್ನಷ್ಟು ಉತ್ತಮ ರೀತಿಯಲ್ಲಿ ಮುನ್ನಡಿಸೋಣ. ಸಂಘದ ಪ್ರಗತಿಯಲ್ಲಿ ಎಲ್ಲರೂ ಸಹಾಯ, ಸಹಕಾರ, ಸಲಹೆ ನೀಡಬೇಕು ಎಂದು ಮನವಿ ಮಾಡಿದರು.

ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಎಂ.ಜಿ. ದೇವಮಾನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿ ಹಿರಿಯ ಸದಸ್ಯ ಆರ್.ಎನ್. ಮುರಾರಿ ನಿರೂಪಿಸಿದರು. ಕಾರ್ಯದರ್ಶಿ ಜಿ.ಎಸ್. ತೋಡಕರ ವಂದಿಸಿದರು.

ಫೋಟೋ ಶೀರ್ಷಿಕೆ : ಅಥಣಿ 1