ಜಾನಪದ ಕಲೆ ಉಳಿಸಿ ಬೆಳೆಸಲು ಪ್ರಯತ್ನಿಸಿ: ಚೆನ್ನವೀರ ಶಿವಾಚಾರ್ಯರು

| Published : Jan 14 2024, 01:31 AM IST

ಜಾನಪದ ಕಲೆ ಉಳಿಸಿ ಬೆಳೆಸಲು ಪ್ರಯತ್ನಿಸಿ: ಚೆನ್ನವೀರ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನಲ್ಲಿನ ಜನಪದ ಕಲೆ ಸಾಹಿತ್ಯವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಒಲಿಸಿಕೊಳ್ಳಬೇಕಾದರೆ ಬಹಳ ಪ್ರಯತ್ನ ಪಡಬೇಕಾಗಿದೆ ಎಂದು ಶ್ರೀಗಳು ಹೇಳಿದರು. ಬಸವಕಲ್ಯಾಣ ತಾಲೂಕಿನ ಪಂಡರಗೇರಾ ಗ್ರಾಮದಲ್ಲಿ ದಮ್ಮದೀಪ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಸಂಗೀತ, ಜನಪದ ಕಲೆಯು ಜೀವನದ ಶಕ್ತಿಯಾಗಿದೆ. ಅದರಿಂದ ನಾವೆಲ್ಲರೂ ಸಂಗೀತ ಕೇಳುವುದು ಹಾಡುವುದನ್ನು ಕಲಿತರೆ ಅದರಲ್ಲಿ ಸಿಗುವ ಆನಂದ ಮಂತ್ತೊಂದಿಲ್ಲ ಎಂದು ಯರಬಾಗನ ಚೆನ್ನವೀರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ತಾಲೂಕಿನ ಪಂಡರಗೇರಾ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ್‌ ಮತ್ತು ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಟ್ರಸ್ಟ್‌ ಸಹಯೋಗದಲ್ಲಿ 75ನೇ ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ದಮ್ಮ ದೀಪ ಕಾರ್ಯಕ್ರಮ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯನಲ್ಲಿನ ಜನಪದ ಕಲೆ ಸಾಹಿತ್ಯವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಒಲಿಸಿಕೊಳ್ಳಬೇಕಾದರೆ ಬಹಳ ಪ್ರಯತ್ನ ಪಡಬೇಕಾಗಿದೆ ಎಂದರು. ಅನೇಕ ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಕುಟ್ಟುವದು, ಬೀಸುವುದು, ತೊಟ್ಟಿಲ ಹಂತಿ ಪದ ಮೋಹರಂ, ಜೋಗುಳ ಹೀಗೆ ಮುಂತಾದ ಜಾನಪದ ಹಾಡುಗಳು ಇಂದು ಮರೆಯಾಗುತ್ತಿವೆ. ಇಂತಹ ಕಾರ್ಯಕ್ರಮ ನಡೆಸುವುದರಿಂದ ಸಂಗೀತ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸ್ವಲ್ಪವಾದರು ಉಳಿಸಬಹುದಾಗಿದೆ ಎಂದು ಹೇಳಿದರು.

ಕಲ್ಯಾಣರಾವ್‌ ಮದರಗಾಂವಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸದಲಾಪೂರ ಹಿರೇಮಠ ಸಂಸ್ಥಾನ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ ಆಶೀವರ್ಚನ ನೀಡಿದರು. ಮಲ್ಲಯ್ಯ ಸ್ವಾಮಿ ಹಿರೇಮಠ, ಅನೀಲಕುಮಾರ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದರು. ಯರಬಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಖಾ ಬಸವರಾಜ ಬಾಜಿಗಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ರೆಡ್ಡಿ ಪಂಡರಗೇರಾ, ಎಂ.ಸುಧಾಕರ್‌, ಗ್ರಾಪಂ ಸದಸ್ಯ ಚೆನ್ನಮ್ಮ ಚಿಂಚೋಳಿ, ಜೈತುನಬಿ ಹೈದರಸಾಬ್‌, ನ್ಯಾಯವಾದಿ ವೆಂಕಟ ಪೋಶೆಟ್ಟಿ, ನಾಗಣ್ಣ ಬಿರಾದಾರ ನಿರೂಪಿಸಿ ವಂದಿಸಿದರು.