ಸರ್ಕಾರಗಳ ಯೋಜನೆ ತಲುಪಿಸುವಲ್ಲಿ ಪಂಚಾಯ್ತಿ ಪ್ರತಿನಿಧಿಗಳ ಪಾತ್ರ ಮಹತ್ವದ್ದು

| Published : Mar 03 2024, 01:36 AM IST

ಸರ್ಕಾರಗಳ ಯೋಜನೆ ತಲುಪಿಸುವಲ್ಲಿ ಪಂಚಾಯ್ತಿ ಪ್ರತಿನಿಧಿಗಳ ಪಾತ್ರ ಮಹತ್ವದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ಸ್ವರಾಜ್ಯ ಪ್ರತಿಷ್ಠಾನದ ಉದ್ಘಾಟನೆ ನೆರವೇರಿಸಲಾಯಿತು. ಮೂರಕ್ಕಿಂತ ಅಧಿಕ ಬಾರಿ ಜಿ.ಪಂ. ಹಾಗೂ ತಾಲೂಕು ಪಂಚಾಯತ್‌ ಸದಸ್ಯರಾಗಿ ಆಯ್ಕೆಯಾದವರು, ಆರು ಹಾಗೂ ಅದಕ್ಕಿಂತ ಹೆಚ್ಚು ಬಾರಿ ಚುನಾಯಿತರಾದ ಗ್ರಾ.ಪಂ. ಸದಸ್ಯರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ತಳಹಂತದಲ್ಲಿ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಗ್ರಾಮ ಪಂಚಾಯತ್‌ಗಳ ಸದಸ್ಯರು ಹಾಗೂ ಪ್ರತಿನಿಧಿಗಳ ಪಾತ್ರ ಮಹತ್ತರವಾದ್ದು ಎಂದು ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ. ಅಡ್ಯಾರ್‌ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಗ್ರಾಮ ಸ್ವರಾಜ್‌ ಪ್ರತಿಷ್ಟಾನ ಹಾಗೂ ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ ಕ್ರೀಡೋತ್ಸವ- ಸಾಂಸ್ಕೃತಿಕ ಸ್ಪರ್ಧೆಗಳ ‘ಹೊಂಬೆಳಕು -2024’ ಕಾರ್ಯಕ್ರಮವನ್ನು ಶನಿವಾರ ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು.ಕ್ರೀಡಾಜ್ಯೋತಿ ಬೆಳಗುವ ಮೂಲಕ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ರಾಜಕೀಯ ಏನೇ ಇದ್ದರೂ ಜನ ಸೇವೆ, ಅಭಿವೃದ್ಧಿ ಕಾರ್ಯಗಳು ಜನಪ್ರತಿನಿಧಿಗಳಿಗೆ ಬಹುಮುಖ್ಯ ಆಗಿರಬೇಕು ಎಂದರು.

ಗ್ರಾಮ ಸ್ವರಾಜ್ಯ ಪ್ರತಿಷ್ಠಾನದ ಉದ್ಘಾಟನೆ ನೆರವೇರಿಸಲಾಯಿತು. ಮೂರಕ್ಕಿಂತ ಅಧಿಕ ಬಾರಿ ಜಿ.ಪಂ. ಹಾಗೂ ತಾಲೂಕು ಪಂಚಾಯತ್‌ ಸದಸ್ಯರಾಗಿ ಆಯ್ಕೆಯಾದವರು, ಆರು ಹಾಗೂ ಅದಕ್ಕಿಂತ ಹೆಚ್ಚು ಬಾರಿ ಚುನಾಯಿತರಾದ ಗ್ರಾ.ಪಂ. ಸದಸ್ಯರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು.ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಅಶೋಕ್‌ ರೈ, ನರೇಂದ್ರ ಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಕಾರ್ಯಕ್ರಮ ಸಂಘಟಕ ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ.ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್‌, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಕುದ್ರೋಳಿ ಗೋಕರ್ಣ ಕ್ಷೇತ್ರದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್‌, ಕೆಸಿಸಿಸಿ ಕಾರ್ಯದರ್ಶಿ ರಕ್ಷಿತ್‌ ಶಿವರಾಂ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ ಚಂದ್ರ ಆಳ್ವ, ದೇವಿಪ್ರಸಾದ್‌ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್‌ ಕುಮಾರ್‌, ಪಾಲಿಕೆ ಆಯುಕ್ತ ಆನಂದ್‌, ಸಹಾಯಕ ಕಮಿಷನರ್‌ ಹರ್ಷವರ್ಧನ್‌ ಮತ್ತಿತರರಿದ್ದರು. ಗ್ರಾಮ ಸ್ವರಾಜ್ಯ ಪ್ರತಿಷ್ಟಾನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಲಾರೆನ್ಸ್‌ ಡಿಸೋಜಾ ವಂದಿಸಿದರು.ದ.ಕ. ಹಾಗೂ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಸದಸ್ಯರು 25ಕ್ಕೂ ಅಧಿಕ ತಂಡಗಳೊಂದಿಗೆ ಗ್ರಾಮ ಸ್ವರಾಜ್ಯದ ಆಶಯಗಳನ್ನು ಎತ್ತಿಹಿಡಿಯುವ ವಿವಿಧ ಸ್ತಬ್ಧಚಿತ್ರ, ವೇಷಭೂಷಣಗಳೊಂದಿಗೆ ಪಥ ಸಂಚಲನದಲ್ಲಿ ವಿಶೇಷ ಗಮನ ಸೆಳೆದರು.ಮಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು, ಬೆಳ್ತಂಗಡಿಯ ನಾರಾವಿ ಗ್ರಾ.ಪಂ.ನ ಸದಸ್ಯರು ಡಾ. ಅಂಬೇಡ್ಕರ್‌, ಪೊಲೀಸ್‌, ಪವರ್‌ಮ್ಯಾನ್‌, ನ್ಯಾಯಾಧೀಶರ ವೇಷಭೂಷಣಗಳ ಮೂಲಕ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಉಪ್ಪಿನಂಗಡಿ ಗ್ರಾ.ಪಂ.ನ ಸದಸ್ಯರ ತಂಡ ಭಾರತ ಮಾತೆ, ಮಹಾತ್ಮ ಗಾಂಧೀಜಿ, ಕಂಬಳ, ತುಳುನಾಡಿನ ಪಾಡ್ದನದೊಂದಿಗೆ ಭತ್ತ ನಾಟಿಯ ಮಹಿಳೆಯರ ವೇಷ ಭೂಷಣದೊಂದಿಗೆ ಪಥ ಸಂಚಲನದಲ್ಲಿ ಛಾಪು ಮೂಡಿಸಿದರೆ, ಕುತ್ತಾರು ಗ್ರಾ.ಪಂ.ನ ಸದಸ್ಯರು, ಭಾರತ ಮಾತೆ, ಭಾರತೀಯ ಸೇನೆಯ ಜತೆಗೆ ಮಹಾತ್ಮ ಗಾಂಧಿಯವರ ದಂಡಿಯಾತ್ರೆಯನ್ನು ನೆನಪಿಸುವ ಆಕರ್ಷಕ ಛದ್ಮವೇಷದ ಮೂಲಕ ಮನಸೆಳೆದರು. ಯಡ್ತಾಡಿ ಗ್ರಾ.ಪಂ. ಸದಸ್ಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಹೋಲುವ ಛದ್ಮವೇಷದೊಂದಿಗೆ ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದರೆ, ಬೆಳುವಾಯಿ ಗ್ರಾ.ಪಂ. ಸದಸ್ಯರು ಸಾಲುಮರದ ತಿಮ್ಮಕ್ಕನ ಸ್ತಬ್ಧಚಿತ್ರದೊಂದಿಗೆ ಭಾಗವಹಿಸಿದ್ದರು.