ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್
ಹುನಗುಂದ ಮತಕ್ಷೇತ್ರದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಆಡಳಿತದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಶಾಸಕರು ಕ್ಷೇತ್ರದ ಅಭಿವೃದ್ಧಿಗಿಂತ ಸ್ವ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಕಿಡಿಕಾರಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಳಕಲ್ ನಗರದಲ್ಲಿ 22ಕ್ಕೂ ಹೆಚ್ಚು ವಾರ್ಡ್‌ಗಳಿಗೆ ಕುಡಿಯುವ ನೀರಿನ ಯೋಜನೆ ಸಲುವಾಗಿ ಮೂರು ಕೋಟಿ ಎಪ್ಪತ್ತೊಂದು ಲಕ್ಷ ರುಪಾಯಿ ನೀರಿನ ಟ್ಯಾಂಕ್ ಕಟ್ಟಲು ನಮ್ಮ ಅವಧಿಯಲ್ಲಿ ಭೂಮಿ ಪೂಜೆ ಮಾಡಿ ಪಿಂಜ್ ಲೆವೆಲ್‌ಗೆ ಬಂದಂತಹ ಕಾಮಗಾರಿಯನ್ನು ಬಂದ್ ಮಾಡಿ, ಕ್ರೀಡಾಂಗಣ ಮಾಡಲು ಹೊರಟಿದ್ದಾರೆ.ಯಾವ ಪುರುಷಾರ್ಥಕ್ಕಾಗಿ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ಬಂದ್ ಮಾಡಿಸಿದ್ದಾರೆ. ಈ ನೀರಿನ ಟ್ಯಾಂಕ್ ದುರುದ್ದೇಶದಿಂದ ಬಂದ್ ಮಾಡಿಸಿದ್ದಾದೆ. ಹೀಗಾಗಿ ಇದರ ಕುರಿತು ಜಿಲ್ಲಾಧಿಕಾರಿಗೆ ಈಗಾಗಲೇ ಮನವಿ ಕೊಟ್ಟಿದ್ದೇವೆ. ಹೀಗಾಗಿ ಈ ದುರಾಡಳಿತದ ವಿರುದ್ಧ ಜು.19ರಂದು ಇಳಕಲ್ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಬೇರೆ ಕಾಮಗಾರಿಗೆ ಹಣ ವ್ಯಯ:ನನ್ನ ಅವಧಿಯಲ್ಲಿ ನಮ್ಮ ಸರ್ಕಾರದಿಂದ ಮುಖ್ಯಮಂತ್ರಿಗಳ ಅಮೃತ ನಗರ ಯೋಜನೆ ಅಡಿಯಲ್ಲಿ ಇಲಕಲ್ ನಗರದ ಕುಡಿಯುವ ನೀರು ಹಾಗೂ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ₹13.5 ಕೋಟಿ ಟೆಂಡರ್ ಕರೆದು ಮಂಜೂರು ಮಾಡಿದ್ದೀವಿ. ಚುನಾವಣೆಯ ನಂತರ ಶಾಸಕರು ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಕಾಮಗಾರಿ ಬದಲಾವಣೆ ಮಾಡಿ ತಮಗೆ ಬೇಕಾದ ಯೋಜನೆಗೆ ಬಳಕೆ ಮಾಡಿಕೊಂಡಿದ್ದಾರೆ ಎಂದರು.
ಕ್ರೀಡಾ ಇಲಾಖೆಯ ಬಳಸಿ:ಶಾಸಕರೇ ಆರೋಪ ಮಾಡಿದಂತೆ ನೀರಿನ ಟ್ಯಾಂಕ್ ಕ್ರೀಡಾಂಗಣ ಜಾಗದಲ್ಲಿ ಇಲ್ಲ ಎಂದು ಹೇಳುತ್ತಾರೆ. ಆದರೆ ತಾವು ಮಾಡುತ್ತಿರುವ ಇಂದಿರಾ ಕ್ಯಾಂಟೀನ್ ಜಾಗ ಯಾವ ಇಲಾಖೆಯದು, ತಾವು ಮಾಡಲು ಹೊರಟಿರುವ ಈಜುಕೊಳ ಯಾವ ಇಲಾಖೆದು, ನೀವು ಈ ಕಾಮಗಾರಿಗೆ ಕ್ರೀಡಾ ಇಲಾಖೆಯಿಂದ ಅನುದಾನವನ್ನು ತೆಗೆದುಕೊಳ್ಳಬೇಕೆ ವಿನಃ ನಗರ ಅಭಿವೃದ್ಧಿಗೆ ತಂದಂತಹ ಹಣವನ್ನು ಯಾಕೆ ನಿರ್ಮಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಕಳ್ಳತನ ಹೆಚ್ಚಳ:ಇಳಕಲ್ ನಗರದಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೇ ನಗರದ ಮುಖ್ಯರಸ್ತೆಯಲ್ಲಿ ಕಳ್ಳತನ ಪ್ರಕರಣಗಳು ನಡೆದರೂ ಇದರ ಬಗ್ಗೆ ಶಾಸಕರು ಮಾತನಾಡುವುದಿಲ್ಲ. ಪೊಲೀಸ್ ಇಲಾಖೆಯಂತೂ ಇದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಮುಖಂಡರುಗಳು ಹಾಗೂ ನಗರಸಭೆಯ ಸದಸ್ಯರು ಉಪಸ್ಥಿತರಿದ್ದರು.---
ಕೋಟ್ಶಾಸಕರ ದುರಾಡಳಿತದ ವಿರುದ್ಧ, ರಾಜಕೀಯ ದುರುದ್ದೇಶದಿಂದ ಜನರ ಜೀವನದ ಜೊತೆ ಆಟ ಆಡುತ್ತಿರುವ ಶಾಸಕರ ವಿರುದ್ಧ, ಯೋಜನೆಗಳನ್ನು ಬದಲಾವಣೆ ಮಾಡಿ ಕಾಮಗಾರಿಗಳನ್ನು ಮಾಡುತ್ತಿರುವ ಶಾಸಕರ ವಿರುದ್ಧ ನಗರದ ಎಲ್ಲ ಜನರ ಸಹಕಾರದೊಂದಿಗೆ ಪಟಣ್ಣದಲ್ಲಿ ಜು.19ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
-ದೊಡ್ಡನಗೌಡ ಪಾಟೀಲ ಮಾಜಿ ಶಾಸಕರು