ಸಾರಾಂಶ
ಹಗರಿಬೊಮ್ಮನಹಳ್ಳಿ: ಬಳ್ಳಾರಿ ಲೋಕಸಭೆ ಚುನಾವಣೆ ಪಾಂಡವರ ಕೌರವರ ನಡುವಿನ ಯುದ್ಧವಾಗಿದೆ. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಧರ್ಮರಾಯ ಇದ್ದಂತೆ. ಅವರನ್ನು ಗೆಲ್ಲಿಸೋಣ ಎಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಬಣ್ಣಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಅಶೋಕ ಫಾರಂಹೌಸ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.ಕ್ಷೇತ್ರದ ಜೆಡಿಎಸ್ ಶಾಸಕರು ಲೋಕಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಿದ್ದರೆ ಎಷ್ಟು ಮತಗಳನ್ನು ಹಾಕಿಸುತ್ತಿದ್ದರು ಎಂಬುದನ್ನು ಕಾಯುತ್ತಿದ್ದೆ. ಆದರೆ ಎರಡು ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಕೇವಲ ಮೂರು ಕಡೆ ಸ್ಪರ್ಧೆಗೆ ಜೆಡಿಎಸ್ ಪಕ್ಷ ಅವಕಾಶ ಪಡೆದು ತನ್ನ ವೈಫಲ್ಯ ಒಪ್ಪಿಕೊಂಡಿದೆ. ನಾನು ಅಧಿಕಾರದಲ್ಲಿದ್ದಾಗ ನೀಚ ರಾಜಕಾರಣ ಮಾಡಿಲ್ಲ. ಇಲ್ಲಿಯ ಶಾಸಕರು ಬಿಜೆಪಿ ಅಧಿಕಾರದಲ್ಲಿದ್ದಾಗ ನನಗೆ ಜೊಲ್ಲೆ, ಆನಂದ್‌ಸಿಂಗ್ ಗೊತ್ತು ಎಂದು ಅಧಿಕಾರ ದರ್ಪ ಮೆರೆದಿದ್ದಾರೆ. ನನಗೆ ಸಿಎಂ ಸಿದ್ದರಾಮಯ್ಯ ಅತ್ಯಾಪ್ತರಾದರೂ ನಾನೆಂದೂ ನೀಚ ರಾಜಕಾರಣಕ್ಕೆ ಮುಂದಾಗಿಲ್ಲ ಎಂದರು.
೫೦ ಪೈಸೆ ಕೊಟ್ಟಿಲ್ಲ:ಮಾಜಿ ಸಂಸದ ದೇವೇಂದ್ರಪ್ಪ ೫ ವರ್ಷ ಪೂರ್ತಿ ನಾಟಕದ ಡೈಲಾಗ್ ಹೇಳುತ್ತಾ ಕಾಲಹರಣ ಮಾಡಿದರು. ಮರಿಯಮ್ಮನಹಳ್ಳಿ ವಾಲ್ಮೀಕಿ ಭವನಕ್ಕೆ ₹೫೦ಲಕ್ಷ ಅನುದಾನ ಕೊಡಿಸುತ್ತೇನೆ ಎಂದವರು ೫೦ ಪೈಸೆ ಅನುದಾನ ಕೊಡಿಸಿಲ್ಲ. ನನ್ನ ಅವಧಿಯಲ್ಲಿ ವಾಲ್ಮೀಕಿ ಭವನಕ್ಕೆ ₹೫೦ ಲಕ್ಷ ಅನುದಾನ ನೀಡಿ ನಿರ್ಮಾಣ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ೩೭೧ಜೆ ನೀಡಿದ್ದನ್ನು ಬಿಜೆಪಿಯ ಹಿರಿಯ ಮುಖಂಡರು ವಿರೋಧ ಮಾಡಿದ್ದನ್ನು ರಾಜ್ಯದ ಜನತೆ ಮರೆತಿಲ್ಲ ಎಂದರು.
ವಿಜಯನಗರ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶಾಹಿರಾಬಾನು ಮಾತನಾಡಿದರು. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಗ್ಯಾರಂಟಿ ಅನುಷ್ಠಾನಗಳ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ದಾರುಕೇಶ, ಪ್ರಚಾರ ಸಮಿತಿ ಅಧ್ಯಕ್ಷ ಉಪ್ಪಾರ ಸೋಮಣ್ಣ, ಪುರಸಭೆ ಸದಸ್ಯ ಪವಾಡಿ ಹನುಮಂತಪ್ಪ ಮಾತನಾಡಿದರು.ಪುರಸಭೆ ಸದಸ್ಯರಾದ ಮರಿರಾಮಪ್ಪ, ಸೆರೆಗಾರ ಹುಚ್ಚಪ್ಪ, ಅಲ್ಲಾಭಕ್ಷಿ, ರಾಜೇಶ್ ಬ್ಯಾಡಗಿ, ಜಿಪಂ ಮಾಜಿ ಸದಸ್ಯರಾದ ರೋಗಾಣಿ ಹುಲುಗಪ್ಪ, ಹೆಗ್ಡಾಳ್ ರಾಮಣ್ಣ, ಬೀಮಜ್ಜ, ಮುಖಂಡರಾದ ನೆಲ್ಕುದ್ರಿ ಚಂದ್ರಪ್ಪ, ಹುಡೇದ ಗುರುಬಸವರಾಜ, ವಕೀಲ ಶಿವಯೋಗಿ, ಚಿಂತ್ರಪಳ್ಳಿ ದೇವೆಂದ್ರಪ್ಪ, ಸಿ.ಎ.ಗಾಳೆಪ್ಪ, ರೋಗಾಣಿ ಪ್ರಕಾಶ್, ಸತ್ಯಣ್ಣ, ಮೈಲಾರಪ್ಪ, ಡಿಶ್ ಮಂಜುನಾಥ, ಬಾಳಪ್ಪ, ಕೆಜಿಎನ್ ದಾದು, ತ್ಯಾವಣಗಿ ಕೊಟ್ರೇಶ, ಆನಂದರೆಡ್ಡಿ ಇತರರಿದ್ದರು.