ಅಂಧ, ಅನಾಥ ಮಕ್ಕಳ ಕಲ್ಯಾಣಕ್ಕಾಗಿ ತುಲಾಭಾರ:ಶ್ರೀಕಲ್ಲಯ್ಯಜ್ಜನವರು

| Published : Sep 25 2024, 12:55 AM IST

ಅಂಧ, ಅನಾಥ ಮಕ್ಕಳ ಕಲ್ಯಾಣಕ್ಕಾಗಿ ತುಲಾಭಾರ:ಶ್ರೀಕಲ್ಲಯ್ಯಜ್ಜನವರು
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ ಶಿವಕುಮಾರ ಸ್ವಾಮಿಗಳು ಮಾಡಿದ ಸಮಾಜಮುಖಿ ಕಾರ್ಯಗಳಿಂದ ಇಂದು ಅಂಧ ಮತ್ತು ಅನಾಥ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯ

ಗಜೇಂದ್ರಗಡ: ಗುರು ಪುಟ್ಟರಾಜ ಆಶ್ರಮದ ಅಂಧ ಮತ್ತು ಅನಾಥ ಮಕ್ಕಳ ಕಲ್ಯಾಣದ ಸಲುವಾಗಿ ಈ ತುಲಾಭಾರ ನಡೆಯುತ್ತಿವೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.

ಅವರು ಸಮೀಪದ ಮುಶಿಗೇರಿ ಗ್ರಾಮದಲ್ಲಿ ಇತ್ತೀಚೆಗೆ ಗುರು ಪುಟ್ಟರಾಜ ಗೆಳೆಯರ ಬಳಗದ ವತಿಯಿಂದ ನಡೆದ ಪಂ. ಪುಟ್ಟರಾಜ ಗವಾಯಿಗಳವರ 14ನೇ ಪುಣ್ಯಸ್ಮರಣೆ ಹಾಗೂ 2521ನೇ ತುಲಾಭಾರ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿ ಮಾತನಾಡಿದರು.

ಧರ್ಮ ಅಂದರೆ ಜಾತಿಯಲ್ಲ ಮಾನವೀಯತೆ, ಮನುಷ್ಯತ್ವವಾಗಿದೆ. ಗ್ರಾಮದಲ್ಲಿ ಸರ್ವಧರ್ಮದವರು ಕೂಡಿಕೊಂಡು ಪುಟ್ಟರಾಜ ಪುಜ್ಯರ ಪುತ್ಥಳಿ ಸ್ಥಾಪಿಸಿ ಪ್ರತಿವರ್ಷ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಹಾನಗಲ್ ಶಿವಕುಮಾರ ಸ್ವಾಮಿಗಳು ಮಾಡಿದ ಸಮಾಜಮುಖಿ ಕಾರ್ಯಗಳಿಂದ ಇಂದು ಅಂಧ ಮತ್ತು ಅನಾಥ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಶಿವಮೊಗ್ಗ, ದಾವಣಗೇರಿ ಮತ್ತು ಗದಗ ಪುಣ್ಯಾಶ್ರಮಗಳಲ್ಲಿ ಇಂತಹ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಪ್ಯಾಟಿಯ ಸಕ್ರಪ್ಪಜ್ಜನವರು ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಗ್ರಾಪಂ ಅಧ್ಯಕ್ಷ ರಾಜಶೇಖರ ಮಾಲಗಿತ್ತಿ, ಹುಲ್ಲಪ್ಪ ಗೂಡದೂರ, ಗ್ರಾಪಂ ಮಾಜಿ ಉಪಾಧ್ಯಕ್ಷ ಚಂದಪ್ಪ ಗೂಡದರ, ಮೌನೇಶ ಅಕ್ಕಸಾಲಿಗರ ಮಾತನಾಡಿದರು.

ನಿವೃತ್ತ ಶಿಕ್ಷಕ ಪಿ.ಎಂ. ಹಾದಿ, ಮಹಾಂತೇಶ ಸೋಮನಕಟ್ಟಿ, ಬಿ.ಬಿ. ಅಂಗಡಿ, ಹನಮಂತ ಬೇವಿನಮರದ, ಶಂಕ್ರಪ್ಪ ನಾಯಕರ, ರಾಘು ಪತ್ತಾರ, ಈರಣ್ಣ ಸೂಡಿ, ವಸಂತ ಕರ್ಣಿ, ವೀರಯ್ಯ ವಸ್ತ್ರದ, ಮಾರುತಿ ನಾಯಕರ, ಮುತ್ತಪ್ಪ ಅಕ್ಕಸಾಲಿಗರ, ಈರಣ್ಣ ಮುದೇನೂರ, ವಸಂತ ಬೇವಿನಗಿಡದ, ಬಸವರಾಜ ಕುಂಬಾರ, ಅಂದಪ್ಪ ಹಾಳಕೇರಿ ಇದ್ದರು. ಶಿಕ್ಷಕ ಬಸವರಾಜ ಗುಡದೂರ ನಿರೂಪಿಸಿದರು. ಮಲ್ಲು ಗೌಡರ ವಂದಿಸಿದರು.