ತುಳುವಿಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಏಪ್ರಿಲ್‌ 7 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು 18 ತುಳು ಸಂಘಟನೆಗಳು ಒಟ್ಟು ಸೇರಿ ಅಖಿಲ ಅಮೆರಿಕ ತುಳುವರ ಅಂಗಣದ ಪ್ರಮುಖರು ನಿರ್ಧರಿಸಿದ್ದಾರೆ.

 ಮಂಗಳೂರು : ತುಳುವಿಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಏಪ್ರಿಲ್‌ 7 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು 18 ತುಳು ಸಂಘಟನೆಗಳು ಒಟ್ಟು ಸೇರಿ ಅಖಿಲ ಅಮೆರಿಕ ತುಳುವರ ಅಂಗಣದ ಪ್ರಮುಖರು ನಿರ್ಧರಿಸಿದ್ದಾರೆ.

ಇದಕ್ಕೂ ಮೊದಲು ಮುಂಬಯಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭಾಸ್ಕರ ಶೇರಿಗಾರ್‌ ಅವರು ಭೇಟಿ ಮಾಡಲಿದ್ದು, ಸಾಧ್ಯವಾದರೆ ಅಲ್ಲಿಯೇ ಮನವಿ ಸಲ್ಲಿಸಲಾಗುವುದು. 

ಬೆಂಗಳೂರಿನಲ್ಲಿ ಭಾಸ್ಕರ್‌ ಶೇರಿಗಾರ್‌ ಮತ್ತು ಶಾಂತಾರಾಮ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು, ಬೆಂಗಳೂರಿನಲ್ಲಿರುವ ಪ್ರಮುಖರು ಇವರ ಜತೆ ಸೇರಿಕೊಳ್ಳಬಹುದು ಎಂದು ಸರ್ವೋತ್ತಮ ಶೆಟ್ಟಿ ತಿಳಿಸಿದ್ದಾರೆ.ಮನವಿ ಸಲ್ಲಿಸಿದ ಬಳಿಕ ಯಾವ ರೀತಿ ಹೋರಾಟ ಮಾಡಬೇಕು ಎಂಬ ಬಗ್ಗೆ ಪ್ರಮುಖರು ಚಿಂತಿಸಿ ಮಾಹಿತಿ ಹಂಚಿಕೊಳ್ಳಬೇಕು. ನಾವು ನಮ್ಮ ಗುರಿಯನ್ನು ಮುಟ್ಟುವ ವರೆಗೆ ವಿರಮಿಸಬಾರದು ಎಂದು ಸರ್ವೋತ್ತಮ ಶೆಟ್ಟಿ ಅಬುದಾಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪೀಕರ್‌ ಖಾದರ್‌ಗೆ ಮನವಿ:

ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿ 27 ದೇಶಗಳ ತುಳು ಸಂಘಟನೆಗಳ ಪ್ರತಿನಿಧಿಗಳು ಅಖಿಲ ಅಮೆರಿಕ ತುಳುವರ ಅಂಗಣ ಇದರ ಅಧ್ಯಕ್ಷೆ ಶ್ರೀವಲ್ಲಿ ರೈ ಮತ್ತು ಭಾಸ್ಕರ ಶೇರಿಗಾರ್‌, ಸರ್ವೋತ್ತಮ ಶೆಟ್ಟಿ ಅಬುದಾಬಿ ಅವರ ನೇತೃತ್ವದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಖಾದರ್ ಅವರು ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿದರು.