25ಕ್ಕೆ ತುಮಕೂರು ಬಂದ್‌: ಜಿಲ್ಲೆಯ ಎಲ್ಲರೂ ಭಾಗವಹಿಸಿ

| Published : Jun 22 2024, 12:47 AM IST

ಸಾರಾಂಶ

ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸಿ ಹಮ್ಮಿಕೊಂಡಿರುವ ತುಮಕೂರು ಬಂದ್‌ಗೆ ನಗರದ ವರ್ತಕರು, ಆಟೋ, ಬಸ್, ಕ್ಯಾಬ್, ಗೂಡ್ಸ್ ಇತರೆ ಮಾಹನ ಮಾಲೀಕರು ಮತ್ತು ಚಾಲಕರು ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯರಾಧ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸಿ ಹಮ್ಮಿಕೊಂಡಿರುವ ತುಮಕೂರು ಬಂದ್‌ಗೆ ನಗರದ ವರ್ತಕರು, ಆಟೋ, ಬಸ್, ಕ್ಯಾಬ್, ಗೂಡ್ಸ್ ಇತರೆ ಮಾಹನ ಮಾಲೀಕರು ಮತ್ತು ಚಾಲಕರು ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯರಾಧ್ಯ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರಾಮನಗರ ಜಿಲ್ಲೆ, ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಕೆನಾಲ್ ಯೋಜನೆ ರದ್ದು ಪಡಿಸಲು ಒತ್ತಾಯಿಸಿ ಜೂ.25ರ ಮಂಗಳವಾರದಂದು ತುಮಕೂರು ಬಂದ್‌ಗೆ ಕರೆ ನೀಡಲಾಗಿದೆ.

ತುಮಕೂರು ಜಿಲ್ಲೆಗೆ 25.3 ಟಿ.ಎಂ.ಸಿ. ಹೇಮಾವತಿ ನೀರು ಮೀಸಲಿಟ್ಟಿದ್ದು, ಇದುವರೆವಿಗೂ ಕೇವಲ 17 ರಿಂದ 18 ಟಿ.ಎಂ.ಸಿ. ನೀರು ಮಾತ್ರ ನಾಲೆಯಲ್ಲಿ ಹರಿಯುತ್ತಿದೆ. ನೀರಿನ ಲಭ್ಯತೆಯನ್ನು ಗಮನಿಸದೆ ಲಿಂಕ್ ಕೆನಾಲ್ ಯೋಜನೆಯಿಂದ ತುಮಕೂರು ಜಿಲ್ಲೆಯ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಕೊರತೆ ಉಂಟಾಗುತ್ತದೆ ಎಂದರು.ಬಿಎಸ್ಪಿ ಜಿಲ್ಲಾಧ್ಯಕ್ಷ ಜೆ.ಎನ್.ರಾಜಸಿಂಹ ಮಾತನಾಡಿ, ಈ ಯೋಜನೆಗೆ ಸುಮಾರು ಒಂದು ಸಾವಿರ ಕೋಟಿ ರು. ಮೀಸಲಿರಿಸಿದೆ. ಕೆನಾಲ್ ಯೋಜನೆಗೆ ರೈತರಿಂದ ಭೂಮಿ ಪಡೆಯುವುದಾಗಲಿ, ಪರಿಹಾರ ನೀಡುವುದಾಗಲಿ ಮಾಡಿಲ್ಲ. ಬೃಹತ್ ಗಾತ್ರದ ಪೈಪ್ಗಳನ್ನು ಸುಮಾರು ಇಪ್ಪತ್ತು ಅಡಿ ಆಳದಲ್ಲಿ ತೆಗೆದುಕೊಂಡು ಹೋಗುತ್ತಿದ್ದು, ಯೋಜನೆ ಪೂರ್ಣಗೊಂಡರೆ ತುಮಕೂರು ಜಿಲ್ಲೆಗೆ ಕುಡಿಯುವ ನೀರಿಗೆ ಮತ್ತು ಕೃಷಿ ಚಟುವಟಿಕೆಗೆ ತುಂಬಾ ಅನಾನುಕೂಲ ಉಂಟಾಗುತ್ತದೆ.

ಸಣ್ಣದ್ಯಾಮೇಗೌಡ, ನಾದೂರು ಕೆಂಚಪ್ಪ, ಡಾ.ರಘುರಾಮ್, ಡಿ.ಎಸ್.ಕೃಷ್ಣಮೂರ್ತಿ, ರಮೇಶ್, ಗೋಪಾಲ, ಲಕ್ಷ್ಮಣ್, ಚಂದ್ರಶೇಖರ್, ಹನುಮಂತರಾಯಪ್ಪ, ರೇಣುಕಾ ಪ್ರಸಾದ್, ಜಯಪ್ರಕಾಶ್, ಜಗದೀಶ್, ನಾರಾಯಣಪ್ಪ, ಜಯಣ್ಣ, ಕೃಷ್ಣಪ್ಪ ಇದ್ದರು.