ಬಜೆಟ್‌ನಲ್ಲಿ ತುಮಕೂರಿಗೆ ನಿರೀಕ್ಷಿಸಿದ್ದಷ್ಟು ಸಿಗಲಿಲ್ಲ

| Published : Feb 17 2024, 01:15 AM IST

ಬಜೆಟ್‌ನಲ್ಲಿ ತುಮಕೂರಿಗೆ ನಿರೀಕ್ಷಿಸಿದ್ದಷ್ಟು ಸಿಗಲಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ತುಮಕೂರು ಜಿಲ್ಲೆಗೆ ನಿರೀಕ್ಷಿಸಿದ್ದಷ್ಟು ಸಿಗಲಿಲ್ಲ. 7 ಮಂದಿ ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದು ಜೊತೆಗೆ ಪ್ರಭಾವಿ ಸಚಿವರು ಇವರು ಕಾರಣಕ್ಕೆ ನಿರೀಕ್ಷೆ ದೊಡ್ಡದಿತ್ತು. ಆದರೆ ಜಿಲ್ಲೆಗೆ ನೇರವಾಗಿ ಅನುಕೂಲವಾಗಿರುವುದು ಕಡಿಮೆಯೇ.

ಉಗಮ ಶ್ರೀನಿವಾಸ್

ಕನ್ನಡಪ್ರಭ ವಾರ್ತೆ ತುಮಕೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ತುಮಕೂರು ಜಿಲ್ಲೆಗೆ ನಿರೀಕ್ಷಿಸಿದ್ದಷ್ಟು ಸಿಗಲಿಲ್ಲ. 7 ಮಂದಿ ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದು ಜೊತೆಗೆ ಪ್ರಭಾವಿ ಸಚಿವರು ಇವರು ಕಾರಣಕ್ಕೆ ನಿರೀಕ್ಷೆ ದೊಡ್ಡದಿತ್ತು. ಆದರೆ ಜಿಲ್ಲೆಗೆ ನೇರವಾಗಿ ಅನುಕೂಲವಾಗಿರುವುದು ಕಡಿಮೆಯೇ.

ಬಹುನಿರೀಕ್ಷಿತ ಮೆಟ್ರೋ ರೈಲನ್ನು ತುಮಕೂರಿನವರೆಗೂ ವಿಸ್ತರಿಸಿರುವುದು ಹಾಗೂ ಏಷ್ಯಾದಲ್ಲಿಯೇ ಅತಿ ದೊಡ್ಡ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣಕ್ಕೆ ಜಾಗ ಕೊಟ್ಟಿರುವುದು ಖುಷಿಯ ವಿಚಾರ.

ಇನ್ನು ನೋಂದಣಿ ಪ್ರಕ್ರಿಯೆಯಲ್ಲಿ ನಾಗರಿಕ ಸ್ನೇಹ ಸುಧಾರಣೆಗಳನ್ನು ತರಲು ಪ್ರಮುಖವಾಗಿ ನಾಗರಿಕರ ಅನುಕೂಲಕ್ಕಾಗಿ ಭಾನುವಾರ ಸಹ ಆಯ್ದ ಉಪನಂದಾಣಾಧಿಕಾರಿ ಕಚೇರಿಯನ್ನು ತೆರೆಯುತ್ತಿರುವುದು ಖುಷಿಯ ವಿಚಾರ. ಹಾಗೆಯೇ ಬೆಂಗಳೂರು ಮತ್ತು 10 ಮಹಾನಗರಗಳಲ್ಲಿ ರಾತ್ರಿ 1 ಗಂಟೆ ವರೆಗೂ ವ್ಯಾಪಾರ ವ್ಯವಹಾರ ನಡೆಸಲು ಅನುಮತಿ ನೀಡಿರುವುದು ಅದರಲ್ಲಿ ತುಮಕೂರು ಜಿಲ್ಲೆಯು ಸಹ ಸೇರಿಕೊಂಡಿದೆ.

ಆದರೆ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ಘೋಷಣೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಹಾಗೆಯೇ ಮೆಡಿಕಲ್ ಕಾಲೇಜು ಘೋಷಣೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅದ್ಯಾವುದಕ್ಕೂ ಬಜೆಟ್‌ನಲ್ಲಿ ಜಾಗ ಮಾಡಿಕೊಟ್ಟಿಲ್ಲ.

ಇನ್ನು ಏಷ್ಯಾದಲ್ಲೇ ಅತ್ಯಂತ ವಿಶಿಷ್ಟ ಏಕಶಿಲಾ ಬೆಟ್ಟ ಹೊಂದಿರುವ ಮಧುಗಿರಿಗೆ ರೋಪ್ ವೇ ಹಾಕಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಜೆಟ್‌ನಲ್ಲಿ ರೋಪ್ ವೇಗೆ ಅವಕಾಶ ಕಲ್ಪಿಸದೇ ಇರುವುದು ನಿರಾಶೆ ಮೂಡಿಸಿದೆ. 2008 ರಿಂದಲೂ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಹಾಕುವ ಪ್ರಸ್ತಾಪ ಇತ್ತು. 2024 ರಲ್ಲಾದರೂ ನೆರವೇರುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಈ ಬಾರಿಯೂ ರೋಪ್ ವೇ ಗೆ ಜಾಗ ಸಿಕ್ಕಿಲ್ಲ.

ಇನ್ನು ಪಾವಗಡದ ಸೋಲಾರ್ ಪಾರ್ಕ್‌ನ ವಿದ್ಯುತ್ ಘಟಕವನ್ನು ವಿಸ್ತರಿಸುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಬಜೆಟ್‌ನಲ್ಲಿ ಅದಕ್ಕೂ ಆಸ್ಪದ ನೀಡಿಲ್ಲ.