2026ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ತುಮಕೂರು ಶೈಕ್ಷಣಿಕ ಜಿಲ್ಲೆಯು ಶೇ.92.20 ರಷ್ಟು ಫಲಿತಾಂಶ ಗಳಿಸಿದೆ. ಕಳೆದ ಸಾಲಿನಲ್ಲಿ ಶೇ.69.30ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಶೇ. 24.90ರಷ್ಟು ಹೆಚ್ಚು ಫಲಿತಾಂಶ ಲಭಿಸಿದೆ.
ಕನ್ನಡಪ್ರಭ ವಾರ್ತೆ ತುಮಕೂರು
2026ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ತುಮಕೂರು ಶೈಕ್ಷಣಿಕ ಜಿಲ್ಲೆಯು ಶೇ.92.20 ರಷ್ಟು ಫಲಿತಾಂಶ ಗಳಿಸಿದೆ. ಕಳೆದ ಸಾಲಿನಲ್ಲಿ ಶೇ.69.30ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಶೇ. 24.90ರಷ್ಟು ಹೆಚ್ಚು ಫಲಿತಾಂಶ ಲಭಿಸಿದೆ.ಪರೀಕ್ಷೆಯಲ್ಲಿ ಒಟ್ಟು ಬಾಲಕರು 10,708, ಬಾಲಕಿಯರು 9,758 ಸೇರಿ ಒಟ್ಟು 20,466 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಈ ಪೈಕಿ ಬಾಲಕರು 9,655 ಹಾಗೂ ಬಾಲಕಿಯರು 9,214 ಮಂದಿ ಸೇರಿ ಒಟ್ಟು 18,869 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ತುಮಕೂರು ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ತಿಪಟೂರು ತಾಲೂಕಿಗೆ ಶೇ. 97.29 ಫಲಿತಾಂಶ ಬಂದಿದ್ದು, ಅಗ್ರ ಸ್ಥಾನದಲ್ಲಿದೆ. ಇಲ್ಲಿ 1,144 ಬಾಲಕರು, 1,107 ಬಾಲಕಿಯರು ಸೇರಿ 2,251 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1,107 ಬಾಲಕರು ಹಾಗೂ 1,083 ಬಾಲಕಿಯರು ಉತ್ತೀರ್ಣರಾಗಿದ್ದಾರೆ.ಇನ್ನು ಎರಡನೇ ಸ್ಥಾನದಲ್ಲಿ ತುರುವೇಕೆರೆ ಇದ್ದು ಶೇ. 95.19 ಫಲಿತಾಂಶ ಲಭಿಸಿದೆ. ಈ ಪೈಕಿ ಬಾಲಕರು 901, ಬಾಲಕಿಯರು 951 ಸೇರಿ 1,852 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಈ ಪೈಕಿ 840 ಬಾಲಕರು ಹಾಗೂ 923 ಬಾಲಕಿಯರು ಸೇರಿ 1,763 ಮಂದಿ ಉತ್ತೀರ್ಣರಾಗಿದ್ದಾರೆ.
ಶೇ. 94.29 ಫಲಿತಾಂಶದೊಂದಿಗೆ ಚಿಕ್ಕನಾಯಕನಹಳ್ಳಿ ಮೂರನೇ ಸ್ಥಾನದಲ್ಲಿದ್ದು, ಇಲ್ಲಿ 1,121 ಬಾಲಕರು, 1,209 ಬಾಲಕಿಯರು ಸೇರಿ 2,330 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಈ ಪೈಕಿ 1,037 ಬಾಲಕರು ಹಾಗೂ 1,160 ಬಾಲಕಿಯರು ಸೇರಿ 2,197 ಮಂದಿ ಉತ್ತೀರ್ಣರಾಗಿದ್ದಾರೆ.ಶೇ. 93.69 ಫಲಿತಾಂಶದೊಂದಿಗೆ ಕುಣಿಗಲ್ ತಾಲೂಕು ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ 1,511 ಬಾಲಕರು, 1,185 ಬಾಲಕಿಯರು ಸೇರಿ 2,696 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಇವರ ಪೈಕಿ 1,395 ಬಾಲಕರು ಹಾಗೂ 1,131 ಬಾಲಕಿಯರು ಸೇರಿ 2,526 ಮಂದಿ ತೇರ್ಗಡೆಯಾಗಿದ್ದಾರೆ.
ಶೇ. 81.79 ಫಲಿತಾಂಶದೊಂದಿಗೆ ಗುಬ್ಬಿ ಐದನೇ ಸ್ಥಾನದಲ್ಲಿದೆ. 1,446 ಮಂದಿ ಬಾಲಕರು, 1,550 ಮಂದಿ ಬಾಲಕಿಯರು ಸೇರಿ 2,996 ಮಂದಿ ಪರೀಕ್ಷೆಗೆ ಕುಳಿತಿದ್ದು, ಈ ಪೈಕಿ 1,277 ಬಾಲಕರು ಹಾಗೂ 1,473 ಬಾಲಕಿಯರು ಸೇರಿ 2,750 ಮಂದಿ ಉತ್ತೀರ್ಣರಾಗಿದ್ದಾರೆ.ಇನ್ನು 79. 23 ಫಲಿತಾಂಶದೊಂದಿಗೆ ತುಮಕೂರು 6ನೇ ಸ್ಥಾನದಲ್ಲಿದೆ. 4,585 ಮಂದಿ ಬಾಲಕರು ಹಾಗೂ 3,756 ಮಂದಿ ಬಾಲಕಿಯರು ಸೇರಿ 8,341 ಮಂದಿ ಪರೀಕ್ಷೆಗೆ ಕುಳಿತಿದ್ದರು. ಈ ಪೈಕಿ 3,999 ಮಂದಿ ಬಾಲಕರು 3,444 ಮಂದಿ ಬಾಲಕಿಯರು ಸೇರಿ 7,443 ಮಂದಿ ತೇರ್ಗಡೆಯಾಗಿದ್ದಾರೆ.
ಎ ಪ್ಲಸ್ ನಲ್ಲಿ 1,386 ಮಂದಿ ತೇರ್ಗಡೆಯಾಗಿದ್ದರೆ, ಎ ನಲ್ಲಿ 3,061, ಬಿ ಪ್ಲಸ್ 3,646, ಬಿ- 3,941, ಸಿ ಪ್ಲಸ್- 3,614, ಸಿ- 3,221 ಮಂದಿ ತೇರ್ಗಡೆಯಾಗಿದ್ದಾರೆ. ಶೇ. 92.48 ಸರ್ಕಾರಿ, 89.95 ಅನುದಾನಿತ ಹಾಗೂ ಶೇ. 94.82 ಅನುದಾನ ರಹಿತ ಶಾಲೆಯಲ್ಲಿ ಫಲಿತಾಂಶ ಬಂದಿದೆ.ಹಾಗೆಯೇ ಶೇ. 100 ರಷ್ಟು ಫಲಿತಾಂಶ 73 ಸರ್ಕಾರಿ ಶಾಲೆಗಳಿಗೆ, 29 ಅನುದಾನಿತ ಹಾಗೂ 54 ಅನುದಾನ ರಹಿತ ಶಾಲೆಗಳಿಗೆ ಲಭಿಸಿದೆ. ಗ್ರಾಮೀಣ ವಿದ್ಯಾರ್ಥಿಗಳು ಶೇ. 94.01 ರಷ್ಟು ಸಾಧನೆ ಮಾಡಿದ್ದರೆ ನಗರ ವಿದ್ಯಾರ್ಥಿಗಳು 89.02 ರಷ್ಟು ಸಾಧನೆ ಮಾಡಿದ್ದಾರೆ.
ತುಮಕೂರಿನ ಶ್ರೀದೇವಿ ವಿದ್ಯಾಮಂದಿರ ಪ್ರೌಢಶಾಲೆಯ ಸಾದಿಯಾ ಬಾನು 624 ಅಂಕ ಗಳಿಸಿದ್ದರೆ, ಕುಣಿಗಲ್ ನ ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆಯ ಭೈರವಿ ಜಿ.ವಿ ಹಾಗೂ ಚಂದನ ಬಿ.ಜಿ. 622 ಅಂಕ ಗಳಿಸಿದರೆ ಚಿಕ್ಕನಾಯಕನಹಳ್ಳಿ ಮೊರಾರ್ಜಿ ಶಾಲೆಯ ಯಶ್ವಂತ್ 622 ಅಂಕ ಗಳಿಸಿದ್ದಾರೆ.