ತುಮಕೂರು: ಕೆಆರ್‌ಎಸ್‌ ಪಕ್ಷದಿಂದ ಪ್ರದೀಪ್ ದೊಡ್ಡ ಮುದ್ದೇಗೌಡ ಸ್ಪರ್ಧೆ

| Published : Mar 28 2024, 12:45 AM IST

ಸಾರಾಂಶ

ತುಮಕೂರು ಲೋಕಸಭಾ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಪಕ್ಷದ ಕಾರ್ಯಕರ್ತರು, ಮುಖಂಡರು ಗೆಲುವಿಗೆ ಶ್ರಮಿಸಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕೆಂದು ಅಭ್ಯರ್ಥಿ ಪ್ರದೀಪ್ ದೊಡ್ಡ ಮುದ್ದೇಗೌಡ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ತಿಪಟೂರುತುಮಕೂರು ಲೋಕಸಭಾ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಪಕ್ಷದ ಕಾರ್ಯಕರ್ತರು, ಮುಖಂಡರು ಗೆಲುವಿಗೆ ಶ್ರಮಿಸಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕೆಂದು ಅಭ್ಯರ್ಥಿ ಪ್ರದೀಪ್ ದೊಡ್ಡ ಮುದ್ದೇಗೌಡ ಮನವಿ ಮಾಡಿದರು. ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಾದ ರವಿಕೃಷ್ಣರೆಡ್ಡಿಯವರಿಂದ ಬಳಿ ಬಿ ಫಾರ್ಮ್‌ ಪಡೆದ ನಂತರ ತಿಪಟೂರಿನಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ದುರಾಡಳಿತದಿಂದ ಜನತೆ ರೋಸಿಹೋಗಿದ್ದು ಹಣ ಸಂಪಾದನೆ ಮಾಡುವುದನ್ನೇ ರಾಜಕೀಯವನ್ನಾಗಿ ಮಾಡಿಕೊಂಡಿರುವುದರಿಂದ ಜನರ ಕಷ್ಟಗಳು ರಾಜಕಾರಣಿಗಳಿಗೆ ತಿಳಿಯುತ್ತಿಲ್ಲ.

ಈ ಪಕ್ಷಗಳದ್ದು ಕೇವಲ ಇನ್ವೆಸ್ಟ್‌ಮೆಂಟ್ ರಾಜಕೀಯವಾಗಿದ್ದು, ಪಾರದರ್ಶಕ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಜನರಿಗೆ ಪಾರದರ್ಶಕ ಆಡಳಿತದ ಅವಶ್ಯಕತೆ ಇದ್ದು, ನಮ್ಮ ಪಕ್ಷದ ತತ್ವ ಸಿದ್ಧಾಂತವೂ ಇದೇ ಆಗಿದೆ. ಚುನಾವಣೆಗಳಲ್ಲಿ ಹಣ, ಹೆಂಡದ ಆಸೆ ಆಮಿಷವೊಡ್ಡದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ನಮ್ಮ ಪಕ್ಷ ಮಾಡಲಿದೆ. ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಈಡೇರಿಸಲು ನಮ್ಮ ಪಕ್ಷವು ಪಣ ತೊಟ್ಟಿದ್ದು ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಸ್ಪರ್ಧೆ ನಡೆಸುತ್ತಿದ್ದು ತುಮಕೂರು ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿದ್ದು ಪಕ್ಷದ ಕಾರ್ಯಕರ್ತರು, ಮುಖಂಡರು ಹೆಚ್ಚು ಶ್ರಮವಹಿಸುವ ಮೂಲಕ ನನ್ನ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಶ್ರೀನಿವಾಸ್ ಸಬ್ಬೇನಹಳ್ಳಿ ಮಾತನಾಡಿ, ಅಭ್ಯರ್ಥಿ ಪ್ರದೀಪ್ ದೊಡ್ಡ ಮುದ್ದೇಗೌಡರು, ತುಮಕೂರು ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ. ನಾಡಿನ ನೆಲ, ಜಲ, ಮೂಲಭೂತ ಸೌಲಭ್ಯಗಳ ವಿಚಾರವಾಗಿ ಮೊದಲಿನಿಂದಲೂ ದ್ವನಿ ಎತ್ತಿ ಹೋರಾಡುತ್ತಾ ಬಂದಿರುವ ವ್ಯಕ್ತಿ. ಕೆ.ಆರ್.ಎಸ್ ಪಕ್ಷದಲ್ಲಿ ಕಳೆದ ಮೂರು ವರ್ಷಗಳಿಂದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪ್ರಾಮಾಣಿಕ, ಪಾರದರ್ಶಕ ನಡೆಯುಳ್ಳ ಪ್ರದೀಪ್‌ ಈ ಬಾರಿ ತುಮಕೂರಿನ ಜನಾಶೀರ್ವಾದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ. ತಿಪಟೂರು ತಾಲೂಕಿನ ಕೆಆರ್‌ಎಸ್ ಪಕ್ಷ ಕಾರ್ಯಕರ್ತರು ಹಣ, ಹೆಂಡ ಹಂಚದೆ ಮತದಾರರಿಗೆ ಯಾವುದೇ ಆಮಿಷವೊಡ್ಡದೆ ಪ್ರಾಮಾಣಿಕವಾಗಿ ಪಕ್ಷದ ಅಭ್ಯರ್ಥಿ ಪರವಾಗಿ ಮನೆ ಮನೆ ಪ್ರಚಾರ ಮಾಡುವ ಮೂಲಕ ಪ್ರದೀಪ್‌ರನ್ನು ಗೆಲ್ಲುವ ಅಭ್ಯರ್ಥಿಯನ್ನಾಗಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.