ನಾಲೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ: ಪೀಹಳ್ಳಿ ರಮೇಶ್ ಎಚ್ಚರಿಕೆ

| Published : Mar 28 2024, 12:45 AM IST

ನಾಲೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ: ಪೀಹಳ್ಳಿ ರಮೇಶ್ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಭೀಕರ ಬರಗಾಲದಿಂದಾಗಿ ನೀರಿಲ್ಲದೆ ಜನರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ ಮಳೆ ಹಾಗೂ ನಾಲೆಗಳಲ್ಲಿ ನೀರಿಲ್ಲದೆ ಬಹುತೇಕ ಬೆಳೆಗಳು ಒಣಗಿವೆ. ಸದ್ಯ ಬೆಳೆದು ನಿಂತಿರುವ ರೈತರ ಬೆಳಗಳು ಸಹ ಕೈ ತಪ್ಪಿ ಹೋಗುವಂತಹ ಪರಿಸ್ಥತಿ ನಿರ್ಮಾಣವಾಗಿದೆ. ಕೂಡಲೇ ನಾಲೆಗಳ ಮೂಲಕ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಜನ-ಜಾನುವಾರು ಹಾಗೂ ಬೆಳೆದು ನಿಂತಿರುವ ರೈತರ ಬೆಳೆ ಉಳಿಸಿಕೊಳ್ಳಲು ಕೆಆರ್‌ಎಸ್ ಅಣೆಕಟ್ಟೆಯಿಂದ ಒಂದೆರಡು ದಿನಗಳಲ್ಲಿ ರಾಜ್ಯ ಸರ್ಕಾರ ನೀರು ಹರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ಎಚ್ಚರಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ಭೀಕರ ಬರಗಾಲದಿಂದಾಗಿ ನೀರಿಲ್ಲದೆ ಜನರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ ಮಳೆ ಹಾಗೂ ನಾಲೆಗಳಲ್ಲಿ ನೀರಿಲ್ಲದೆ ಬಹುತೇಕ ಬೆಳೆಗಳು ಒಣಗಿವೆ. ಸದ್ಯ ಬೆಳೆದು ನಿಂತಿರುವ ರೈತರ ಬೆಳಗಳು ಸಹ ಕೈ ತಪ್ಪಿ ಹೋಗುವಂತಹ ಪರಿಸ್ಥತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಆರ್‌ಎಸ್ ಅಣೆಕಟ್ಟೆಯಲ್ಲಿ 86 ಅಡಿ ನೀರು ಸಂಗ್ರಹವಾಗಿದ್ದರೂ ಸಹ ಸರ್ಕಾರ ಕುಡಿಯುವ ಬಳಕೆಗೆ ಎಂದು ನೆಪಹೇಳಿ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುವ ಮೂಲಕ ಸ್ಥಳೀಯ ರೈತರ ಹಿತಕಾಯದೆ ವಂಚನೆ ಮಾಡಿದೆ ಎಂದು ದೂರಿದ್ದಾರೆ.

ಅಣೆಕಟ್ಟೆಯಲ್ಲಿ 75 ಅಡಿ ವರೆವಿಗೂ ಬೆಳೆಗಳಿಗೆ ನೀರು ಹರಿಸಬಹುದು ಎಂಬ ಕಾನೂನು ಇದೆ. ಈ ಹಿಂದೆ ಹಲವು ಸರ್ಕಾರಗಳು 75 ಅಡಿ ವರೆವಿಗೂ ಬೆಳೆಗಳಿಗೆ ನೀರು ಕೊಟ್ಟಿರುವ ನಿದರ್ಶಗಳಿವೆ. ಆದರೆ. ಕಾಂಗ್ರೆಸ್ ಸರ್ಕಾರ ಇದನ್ನ ಕಡೆಗಣಿಸಿ ಸ್ಥಳೀಯ ರೈತರ ಹಿತಕಾಯದೆ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ತಾಲೂಕಿನಾದ್ಯಂತ ರೈತರು ತಮ್ಮ ಬೆಳೆ ನಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಬರಪರಿಹಾರ ಎಕರೆಗೆ 2 ಸಾವಿರ ರು. ನೀಡಿರುವುದಾಗಿ ಹೇಳುತ್ತಿದೆ. ಆದರೆ, ಯಾವೊಬ್ಬ ರೈತರಿಗೂ ಸಹ ಬರಪರಿಹಾರದ ಹಣ ತಲುಪಿಲ್ಲ. ಸರ್ಕಾರ ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದೆ. ಕೂಡಲೇ ನಾಲೆಗಳ ಮೂಲಕ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.