ಆಂಧ್ರಪ್ರದೇಶದಲ್ಲಿರುವ ತುಂಗಭದ್ರಾ ಬೋರ್ಡ್ ಕರ್ನಾಟಕದಲ್ಲಿ ಮಾಡಿ: ವೀರನಗೌಡ ಮಾಲಿಪಾಟೀಲ್

| Published : Nov 20 2024, 12:33 AM IST

ಆಂಧ್ರಪ್ರದೇಶದಲ್ಲಿರುವ ತುಂಗಭದ್ರಾ ಬೋರ್ಡ್ ಕರ್ನಾಟಕದಲ್ಲಿ ಮಾಡಿ: ವೀರನಗೌಡ ಮಾಲಿಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಆಂಧ್ರಪ್ರದೇಶದಲ್ಲಿರುವ ತುಂಗಭದ್ರಾ ಬೋರ್ಡ್ ಕರ್ನಾಟಕದಲ್ಲಿ ಮಾಡಬೇಕು.

ಕೊಪ್ಪಳ ಏತ ನೀರಾವರಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗಲಿ । ಕರ್ನಾಟಕ ರೈತ ಜನ ಸಂಘ, ಹಸಿರುಸೇನೆ ರಾಜ್ಯಾಧ್ಯಕ್ಷ ಆಗ್ರಹ

ಕನ್ನಡಪ್ರಭ ವಾರ್ತೆ ಕೊಪ್ಪಳ

ಆಂಧ್ರಪ್ರದೇಶದಲ್ಲಿರುವ ತುಂಗಭದ್ರಾ ಬೋರ್ಡ್ ಕರ್ನಾಟಕದಲ್ಲಿ ಮಾಡಬೇಕು. ಕೊಪ್ಪಳ ಏತ ನೀರಾವರಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗಲಿ ಎಂದು ಕರ್ನಾಟಕ ರೈತ ಜನ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ವೀರನಗೌಡ ಮಾಲಿಪಾಟೀಲ್ ಆಗ್ರಹಿಸಿದರು.

ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ದೊಡ್ಡ ನದಿಗಳಲ್ಲೊಂದಾದ ವಿಜಯನಗರ ಜಿಲ್ಲೆಯ ತುಂಗಭದ್ರಾ ನದಿಗೆ ಒಟ್ಟು 33 ಗೇಟ್‌ಗಳಿರುತ್ತವೆ. 1ರಿಂದ 16ನೇ ಗೇಟಿನವರೆಗೆ ತುಂಗಭದ್ರಾ ಬೋರ್ಡ್ ಕಾರ್ಯನಿರ್ವಹಣೆ ಮಾಡುತ್ತದೆ. 15ರಿಂದ 33ರವರೆಗಿನ ಗೇಟ್‌ಗಳನ್ನು ತುಂಗಭದ್ರಾ ಕಾಡಾ ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ. 2024ನೇ ಆಗಸ್ಟ್ ಮೊದಲನೇ ವಾರದಲ್ಲಿ 19ನೇ ಗೇಟ್ ಕಿತ್ತುಹೋಗಿ ಸುಮಾರು 40ರಿಂದ 50 ಟಿಎಂಸಿ ನೀರು ಪೋಲಾಗಿರುತ್ತದೆ. ಸ್ಟಾಪ್ ಲಾಗ್ ಗೇಟ್ ಅಳವಡಿಸಲು ತುಂಗಭದ್ರಾ ಬೋರ್ಡ್‌ನವರಿಗೆ ಅನುಮತಿ ಕೇಳಿಕೊಂಡರೆ ಸುಮಾರು 15 ದಿನಗಳ ಕಾಲ ಸಮಯ ಬೇಕಾಗುತ್ತದೆ ಎಂದು ಹೇಳಿದರು. ಅಷ್ಟರೊಳಗಾಗಿ ಡ್ಯಾಂನಲ್ಲಿ ಇರುವಂತಹ ನೀರು ಪೋಲಾಗಿ ರೈತರು ಬೆಳೆದ ಬೆಳೆ ರೈತರ ಕೈ ಸೇರುವುದಿಲ್ಲ. ಹಾಗಾಗಿ ಆಂಧ್ರಪ್ರದೇಶದಲ್ಲಿರುವ ತುಂಗಭದ್ರಾ ಬೋರ್ಡನ್ನು ಕರ್ನಾಟಕದಲ್ಲಿ ಮಾಡಬೇಕು.

ಕೊಪ್ಪಳ ಜಿಲ್ಲೆ ಒಣಬೇಸಾಯ ಭೂಮಿ ಆಗಿದ್ದು, ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಇದರಿಂದ ರೈತ ವರ್ಗಕ್ಕೆ ಅನುಕೂಲ ಆಗಲಿದೆ. ಜನಪ್ರತಿನಿಧಿಗಳು, ಅಧಿಕಾರಿ ವರ್ಗವದರು ಇದರ ಬಗ್ಗೆ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ದೊಡ್ಡನಗೌಡ, ಬಸವರಾಜ, ಮಲ್ಲಿಕಾರ್ಜುನ, ಭೀಮಪ್ಪ, ರಾಮಣ್ಣ ಇದ್ದರು.