ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಮೊದಲ ಪ್ರಯತ್ನ ವಿಫಲ- 2ನೇ ಪ್ರಯತ್ನ ಇಂದು

| Published : Aug 16 2024, 12:53 AM IST / Updated: Aug 16 2024, 08:31 AM IST

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಮೊದಲ ಪ್ರಯತ್ನ ವಿಫಲ- 2ನೇ ಪ್ರಯತ್ನ ಇಂದು
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದಲ್ಲಿ ಮುರಿದಿರುವ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಮೊದಲ ಪ್ರಯತ್ನ ವಿಫಲವಾಗಿರುವ ಬೆನ್ನಲ್ಲೇ ಮೊದಲೇ ಸಿದ್ಧ ಮಾಡಿಕೊಂಡಿದ್ದ ಎರಡನೇ ಪ್ರಯತ್ನವನ್ನು ಆ. 16ರಂದು ಅನುಷ್ಠಾನ ಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 

  ಕೊಪ್ಪಳ :  ತುಂಗಭದ್ರಾ ಜಲಾಶಯದಲ್ಲಿ ಮುರಿದಿರುವ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಮೊದಲ ಪ್ರಯತ್ನ ವಿಫಲವಾಗಿರುವ ಬೆನ್ನಲ್ಲೇ ಮೊದಲೇ ಸಿದ್ಧ ಮಾಡಿಕೊಂಡಿದ್ದ ಎರಡನೇ ಪ್ರಯತ್ನವನ್ನು ಆ. 16ರಂದು ಅನುಷ್ಠಾನ ಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈಗಾಗಲೇ ಎರಡನೇ ಪ್ಲಾನ್‌ ಪ್ರಕಾರ ಗೇಟ್‌ನ್ನು ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿರುವ ಹಿಂದೂಸ್ಥಾನ ಎಂಜನಿಯರಿಂಗ್‌ ಕಂಪನಿ ಸಿದ್ಧ ಮಾಡಿರುವ ಗೇಟ್‌ನ್ನು ಲೋಡ್ ಮಾಡಿಕೊಂಡು, ಜಲಾಶಯದ ಕ್ರಸ್ಟ್ ಗೇಟ್ ಬಳಿ ಇರಿಸಲಾಗಿದೆ.

ಏನಿದು ಎರಡನೇ ಪ್ರಯತ್ನ:

ತುಂಗಭದ್ರಾ ಜಲಾಶಯದ ಮುರಿದಿರುವ ಕ್ರಸ್ಟ್ ಗೇಟ್ ಅಳಡಿಸಲು ಜಿಂದಾಲ್‌ನಲ್ಲಿ ತಯಾರಿಸಿ ತಂದಿದ್ದ ಎಲಿಮೆಂಟ್ ಸ್ಟಾಪ್ ಲಾಗ್ ಗೇಟ್ ಐದನೇ ಒಂದು ಭಾಗ ಪೂರ್ಣವಾಗಿತ್ತು. 4 ಅಡಿ ಎತ್ತರದ 64 ಅಡಿ ಉದ್ದದ ಎಲಿಮೆಂಟ್ ಗೇಟ್ ಅಳವಡಿಸಲು ಮುಂದಾದಾಗ ಗ್ರೂಗೆ ಗೇಟ್ ಕೂಡಿಸುವ ಯತ್ನ ಯಶ ಕಾಣಲಿಲ್ಲ. ಗ್ರೂಗೆ ಕೂಡಿಸದೆ ಗೇಟ್ ಅಳಡಿಸಲು ಸಾಧ್ಯವಿಲ್ಲ. 64 ಅಡಿಯೂ ಪೂರ್ಣ ಉದ್ಧವಾಗಿಯೇ ಇರುವುದರಿಂದ ಗ್ರೂಗೆ ಹಾಕುವ ಪ್ರಯತ್ನ ವಿಫಲವಾಯಿತು ಎನ್ನಲಾಗಿದೆ.

ಹೀಗಾಗಿ, ಈಗ ಎರಡನೇ ಪ್ರಯತ್ನದ ಭಾಗವಾಗಿ ಹಿಂದೂಸ್ಥಾನ ಎಂಜಿನಿಯರಿಂಗ್‌ ಕಂಪನಿ ಸಿದ್ಧ ಮಾಡಿರುವ ಎಲಿಮೆಂಟ್ ಗೇಟ್ 4 ಅಡಿ ಎತ್ತರ ಹೊಂದಿದ್ದು, 40 ಅಡಿ ಮತ್ತು 20 ಅಡಿ ಅಗಲದ ಎರಡು ಪ್ರತ್ಯೇಕ ಪಿಸ್‌ಗಳು ಇವೆ.

ಈ ಎರಡೂ ಪೀಸ್‌ಗಳನ್ನು ಪ್ರತ್ಯೇಕವಾಗಿ ಎರಡು ಬದಿಯ ಗ್ರೂನಲ್ಲಿ ಸೇರಿಸಲಾಗುತ್ತದೆ. ಹೀಗೆ ಸೇರಿಸಿದ ಮೇಲೆ ಅದನ್ನು ಮಧ್ಯದಲ್ಲಿ ಅಲ್ಲಿಯ ಮತ್ತೊಂದು ಕ್ರೇನ್ ಸಹಾಯದಿಂದ ಬೇಸ್ (ಜೋಡಿಸಿಕೊಂಡು) ಮಾಡಿಕೊಂಡು ಎರಡನ್ನು ನಟ್ ಬೋಲ್ಟ್ ಹಾಕಿ ಜೋಡಿಸಿ, ವೆಲ್ಡಿಂಗ್ ಮಾಡಲಾಗುತ್ತದೆ. ಹೀಗೆ ಗ್ರೂನಲ್ಲಿ ಹಾಕಿಕೊಂಡ ಮೇಲೆ ಎರಡು ಪೀಸ್ ಗಳನ್ನು ಜೋಡಿಸಿ, ಎಲಿಮೆಂಟ್ ಗೇಟ್ ನ ಮೊದಲ ಭಾಗವನ್ನು ಹಾಕುವ ಪ್ರಯತ್ನ ಆ. 16ರಂದು ಬೆಳಗ್ಗೆ ನಡೆಯಲಿದೆ.

ವೀಡಿಯೋ ಚಿತ್ರೀಕರಣಕ್ಕೆ ಆಕ್ಷೇಪ:

ತುಂಗಭದ್ರಾ ಜಲಾಶಯದ ಕ್ರಸ್ಟ್ ಅಳವಡಿಸುವ ವೇಳೆಯಲ್ಲಿ ವೀಡಿಯೋ ಚಿತ್ರೀಕರಣ ಮಾಡುವುದು ಕೇಂದ್ರ ಜಲ ಆಯೋಗದ ನಿಯಮಾನುಸಾರ ನಿಷಿದ್ಧ. ಇದು ಅಂತಾರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿರುವುದರಿಂದ ನಿಷೇಧಿಸಲಾಗಿದೆಯಾದರೂ ಗೇಟ್ ಅಳವಡಿಸುತ್ತಿರುವ ವೀಡಿಯೋ ಚಿತ್ರೀಕರಣವನ್ನು ಡ್ರೋಣ್‌ ಮೂಲಕ ಮಾಡಿರುವುದಕ್ಕೆ ಬಗ್ಗೆ ತುಂಗಭದ್ರಾ ಬೋರ್ಡ್ ಆತಂಕ ವ್ಯಕ್ತಪಡಿಸಿದೆ.

ವೀಡಿಯೋ ಸೇರಿದಂತೆ ಫೋಟೋಗಳನ್ನು ನಾವೇ ತೆಗೆದು ಕೊಡುತ್ತೇವೆ, ಇಡೀ ಜಲಾಶಯವನ್ನು ಚಿತ್ರೀಕರಣ ಮಾಡುವುದು, ಸೇರಿದಂತೆ ಡಿಸೈನ್ ಸಮೇತ ವೀಡಿಯೋ ಚಿತ್ರೀಕರಣ ಮಾಡದಿರುವಂತೆ ಮನವಿ ಮಾಡಲಾಗಿದೆ.