ಸಾರಾಂಶ
ನೀರು ಆಹಾರವಿಲ್ಲದೇ ಯಾವ ಜೀವ ಸಂಕುಲವು ಬದುಕಲು ಸಾಧ್ಯವಿಲ್ಲ. ನೀರು, ಅನ್ನಕ್ಕೆ ಸಮಾನ. ತಾಲೂಕಿನ ಜನತೆಗೆ ಶಾಶ್ವತ ಅನ್ನ ಕಲ್ಪಿಸಿಕೊಟ್ಟ ಪುಣ್ಯ ಇಲ್ಲಿನ ರೈತ ಹಾಗೂ ವಿವಿಧ ಸಂಘಸಂಸ್ಥೆಯ ಹೋರಾಟಗಾರರಿಗೆ ಸಲ್ಲಬೇಕೆಂದು ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಪಾವಗಡ
ನೀರು ಆಹಾರವಿಲ್ಲದೇ ಯಾವ ಜೀವ ಸಂಕುಲವು ಬದುಕಲು ಸಾಧ್ಯವಿಲ್ಲ. ನೀರು, ಅನ್ನಕ್ಕೆ ಸಮಾನ. ತಾಲೂಕಿನ ಜನತೆಗೆ ಶಾಶ್ವತ ಅನ್ನ ಕಲ್ಪಿಸಿಕೊಟ್ಟ ಪುಣ್ಯ ಇಲ್ಲಿನ ರೈತ ಹಾಗೂ ವಿವಿಧ ಸಂಘಸಂಸ್ಥೆಯ ಹೋರಾಟಗಾರರಿಗೆ ಸಲ್ಲಬೇಕೆಂದು ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಮಗ್ರ ನೀರು ಹೋರಾಟ ವೇದಿಕೆ ವತಿಯಿಂದ ಸೋಮವಾರ ಪಟ್ಟಣದ ಎಸ್‌ಎಸ್‌ಕೆ ಸಮುದಾಯದ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕಿಗೆ ತುಂಗಭದ್ರಾ ಕುಡಿಯುವ ನೀರು ಸರಬರಾಜಿಗೆ ಶ್ರಮವಹಿಸಿದ್ದ ಹೋರಾಟಗಾರರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.
ನೀರು ಅನ್ನಕ್ಕೆ ಸಮಾನ. ಪಕ್ಷತೀತಾವಾಗಿ ಅನೇಕ ಮಂದಿ ಮಾಜಿ ಹಾಲಿ ಜನಪ್ರತಿನಿಧಿಗಳು ಹಾಗೂ ರೈತ ಸಂಘಟನೆಯ ಮುಖಂಡರು ಸೇರಿ ಅನೇಕ ವರ್ಷದ ಕಾಲ ಜನಾಂದೋಲನ ನಡೆಸಿದ ಪರಿಣಾಮ ಪಾವಗಡಕ್ಕೆ ತುಂಗಭದ್ರಾ ಯೋಜನೆಯ ಶುದ್ದ ನೀರು ಪೂರೈಕೆ ಸಾಧ್ಯವಾಗಿದೆ. ಇದೇ ರೀತಿ ನೀರಾವರಿ ಪ್ರಗತಿಗೆ ಕೆರೆಗಳಿಗೆ ನೀರು ತುಂಬಿಸಲು ಭದ್ರಾಮೇಲ್ದಂಡೆ ಯೋಜನೆ ಸಹ ಜಾರಿಯಾಗಿದ್ದು ಸಂತಸ ತಂದಿದೆ. ನೀರಿಗಾಗಿ ಮುಷ್ಕರ ನಡೆಸಿದ ಹೋರಾಟಗಾರರನ್ನು ಗುರ್ತಿಸಿ ಸನ್ಮಾನಕ್ಕೆ ಮುಂದಾದ ಇಲ್ಲಿನ ತಾಲೂಕು ಸಮಗ್ರ ನೀರು ಹೋರಾಟ ವೇದಿಕೆಯ ಕಾರ್ಯ ಅಭಿನಂದನೀಯವಾಗಿದೆ ಎಂದರು.ತಾಲೂಕು ಹಸಿರು ಸೇನೆಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಅಂದಿನ ಸಿಎಂ ಸಿದ್ದರಾಮಯ್ಯ ಪಾವಗಡಕ್ಕೆ ನೀರು ಕಲ್ಪಿಸುವುದಾಗಿ ಆದೇಶಿಸಿ ಬಜೆಟ್‌ನಲ್ಲಿ 2,352 ಕೋಟಿ ಮೀಸಲಿರಿಸಿದ ಪರಿಣಾಮ ಪೈಪ್ ಲೈನ್ ಕಾಮಗಾರಿ ಪೂರ್ಣವಾಗಿ ಪಾವಗಡ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕರೆ ಮೊಳಕಾಲ್ಮೂರು ಇತರೆ ಬಯಲು ಸೀಮೆ ಪ್ರದೇಶಗಳಿಗೆ ವಿಜಯನಗರ ಜಿಲ್ಲೆಯ ತುಂಗಭದ್ರಾ ಡ್ಯಾಂನಿಂದ ನೀರು ಸರಬರಾಜಾಗಲು ಸಾಧ್ಯವಾಗಿದೆ ಎಂದರು.ಮಾಜಿ ಸಂಸದ ಜನಾರ್ಧನಸ್ವಾಮಿ ಮಾತನಾಡಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಕಾಲದಲ್ಲಿ ಭದ್ರಾಮೇಲ್ದಂಡೆ ಯೋಜನೆ ಜಾರಿಗೆ ಬಂದಿದ್ದು ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ತಿಮ್ಮರಾಯಪ್ಪ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಶಾಸಕರು ನಿಯೋಗ ತೆರಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಪರಿಣಾಮ ಭದ್ರಾ ಹಾಗೂ ತುಂಗಭದ್ರಾ ಎತ್ತಿನ ಹೊಳೆ ಯೋಜನೆ ಜಾರಿ ಸಾಧ್ಯವಾಗಿದೆ. ಹೋರಾಟಗಾರನ್ನು ಗುರ್ತಿಸಿದ ವೇದಿಕೆ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಸಮಗ್ರ ನೀರು ಹೋರಾಟ ವೇದಿಕೆಯ ಅಧ್ಯಕ್ಷ ಎಸ್.ಶಿವಪ್ರಸಾದ್ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ ಕಾರ್ಯದರ್ಶಿ ಸೊಗಡು ವೆಂಕಟೇಶ್ , ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಹಿರಿಯ ಮುಖಂಡರಾದ ಎನ್.ತಿಮ್ಮಾರೆಡ್ಡಿ,ವಕೀಲ ನರಸಿಂಹರೆಡ್ಡಿ, ಪುರುಷೋತಮರೆಡ್ಡಿ, ವೀರಪ್ಪರೆಡ್ಡಿ, ಕೃಷ್ಣಗಿರಿ ತಿಪ್ಪೇಸ್ವಾಮಿ ಆರ್.ಪಿ.ಸಾಂಬಸದಾಶಿವರೆಡ್ಡಿ, ಬಲರಾಮರೆಡ್ಡಿ, ಕೊತ್ತೂರು ಕೆ.ಆರ್.ನಾಗೇಶ್ ಶ್ರೀರಾಮಗುಪ್ತ, ರಾಜಶೇಖರಪ್ಪ, ಪ್ರೆಸ್ ಬಸವರಾಜಪ್ಪ, ಕೋರ್ಟ್ ನರಸಪ್ಪ ವಕ್ಕಲಿಗರ ಸಂಘದ ಅಧ್ಯಕ್ಷ ತಿಪ್ಪೇವೀರಣ್ಣ, ಎನ್.ಎ.ಈರಣ್ಣ, ಜಿ.ಟಿ.ಗಿರೀಶ್, ಕಡಪಲಕರೆ ಹನುಮಂತರಾಯಪ್ಪ, ವಿಜೇಂದ್ರರಾವ್ ಕೆ.ಎಂ.ಪ್ರಭಾಕರ್, ಉಗ್ರಪ್ಪ, ಶಿವಕುಮಾರ್ ಸಾಕೇಲ್, ಪಿ.ಅಮೀರ್,ಗಂಗಾಧರ್ ನಾಯ್ಡು, ಹನುಮಂತರಾಯಪ್ಪ, ಮನುಮಹೇಶ್, ಕನ್ನಮೇಡಿ ಕೃಷ್ಣಮೂರ್ತಿ,ವಳ್ಳೂರು ನಾಗೇಶ್, ಕರವೇ ಲಕ್ಷ್ಮೀನಾರಾಯಣ್, ಲೋಕೇಶ್ ಪಾಳೇಗಾರ, ಮಂಜುನಾಥ್, ಗೋಪಾಲ್, ಜಾನಕಿರಾಮ್ ತಾಳೇ ಮರದಹಳ್ಳಿ ಗೋವಿಂದಪ್ಪ, ಮಹಿಳಾ ಘಟಕದ ಜ್ಯೋತಿ, ಗಾಯಿತ್ರಮ್ಮ, ಸುಶೀಲಮ್ಮ ಹಾಗೂ ಇತರೆ ಅನೇಕ ಮಂದಿ ಗಣ್ಯರು ಭಾಗವಹಿಸಿದ್ದರು.