ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಿ

| Published : Jun 27 2024, 01:15 AM IST

ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಸರ್ಕಾರದ ಸವಲತ್ತುಗಳನ್ನು ಪಡೆದು ಉತ್ತಮ ಬೆಳೆ ಬೆಳೆದು ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಬೇಕು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ರೈತರು ಸರ್ಕಾರದ ಸವಲತ್ತುಗಳನ್ನು ಪಡೆದು ಉತ್ತಮ ಬೆಳೆ ಬೆಳೆದು ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಬೇಕು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಮರಡಿನಾಗಲಾಪುರ, ಕಲ್ಲೂರ, ದೇವಲಾಪುರ, ಬೈಲವಾಡ ಹಾಗೂ ನಯಾನಗರ ಗ್ರಾಮಗಳ ವಿವಿಧ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ, ಬೆಳೆ ಪ್ರಾತ್ಯಕ್ಷಿತೆಗಳ ಪರಿಶೀಲನೆ ನಡೆಸಿ, ಆಧುನಿಕ ಯಂತ್ರೋಪರಕರಣಗಳ ಸಿಂಪರಣಾ ಸಾಧನಗಳ ಸ್ವಯಂ ಚಾಲನೆ ಮಾಡಿ, ಪ್ರಾತ್ಯಕ್ಷತೆ ನಡೆಸಿ, ಬೈಲವಾಡ ಗ್ರಾಮದಲ್ಲಿ ಮಾತನಾಡಿದ ಅವರು, ಕೃಷಿ ಆಧುನಿಕ ಸಾಧನಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆ ಮಾಡಲು ಸಾಧ್ಯ. ಈ ಭಾಗದಲ್ಲಿ ಮುಂಗಾರು ಆಶಾದಾಯಕವಾಗಿದ್ದು, ಸಂತಸ ಮೂಡಿಸಿದೆ. ರೈತರ ಯಾವುದೇ ಸಮಸ್ಯೆಗಳನ್ನು ಸದಾ ಬಗೆ ಹರಿಸಲು ಕೃಷಿ ಸಚಿವನಾಗಿ ನಾನು ಸದಾ ಸಿದ್ಧನಿದ್ದೇನೆ. ಸರ್ಕಾರದ ಮಟ್ಟದಲ್ಲಿ ನೇರ ನೇಮಕಾತಿ ಮೂಲಕ ಕೃಷಿ ಇಲಾಖೆಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದೆ ಎಂದರು.

ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜತೆಗೆ ಹೊಸ ಆವಿಷ್ಕಾರ, ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಬೇಕು. ಬೆಳೆ ವಿಮೆ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ, ನೋಂದಣಿ ಜಾಸ್ತಿ ಮಾಡಬೇಕು. ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಗಮನ ಹರಿಸಬೇಕು ಎಂದರು.ಬೈಲಹೊಂಗಲ ಎಪಿಎಂಸಿ ಅಭಿವೃದ್ಧಿಗೆ ಶ್ರಮಿಸಲಾಗುವುದು. ಪರತಂತ್ರ ಜೀವಿ ಪ್ರಯೋಗಾಲಯ ಉನ್ನತ್ತಿಕರಣಕ್ಕೆ ಕ್ರಮ ಜರುಗಿಲಾಗುವುದು. ಕೃಷಿ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಬಿತ್ತನೆ ಬೀಜ, ರಸಗೊಬ್ಬರಗಳನ್ನು ಬೇಡಿಕೆಗಿಂತಲೂ ಹೆಚ್ಚು ಸರಬರಾಜು ಮಾಡಲಾಗಿದೆ. ಗೊಂದಲ ಇಲ್ಲದಂತೆ ವಿತರಣೆ ಮಾಡಲು ಸೂಚಿಸಿದರು.ಸಾಮೂಹಿಕ ತೊಗರಿ ಬಿತ್ತನೆಗೆ ಚಾಲನೆ, ಯಾಂತ್ರಿಕೃತ ಕೀಟನಾಶಕ ಸಿಂಪರಣಾ ಪ್ರಾತ್ಯಕ್ಷಿತೆ ಹಾಗೂ ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಪ್ರಚಾರ ವಾಹನಗಳಿಗೆ ಕೃಷಿ ಸಚಿವರು ಚಾಲನೆ ನೀಡಿದರು. ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಜಿಪಂ ಮಾಜಿ ಸದಸ್ಯರಾದ ರೋಹಿಣಿ ಪಾಟೀಲ, ಈಶ್ವರ ಉಳ್ಳೆಗಡ್ಡಿ, ಕೃಷಿ ಆಯುಕ್ತ ವೈ.ಎಸ್.ಪಾಟೀಲ, ಕೃಷಿ ನಿರ್ದೇಶಕ ಜಿ.ಟಿ.ಪುತ್ರಾ, ಹೆಚ್ಚುವರಿ ಕೃಷಿ ನಿರ್ದೇಶಕ ವೆಂಕಟರಮಣ ರೆಡ್ಡಿಪಾಟೀಲ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಉಪನಿರ್ದೇಶಕರಾದ ಎಸ್.ಬಿ.ಕೊಂಗವಾಡ, ಎಚ್.ಡಿ.ಕೊಳೇಕರ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ರೈತರಾದ ಶಿವಪುತ್ರ ತಟವಾಟಿ, ರಾಜು ನದಾಫ, ಅಜ್ಜಪ್ಪ ನರಿ, ಮಹಾಂತೇಶ ಅರಳಿಕಟ್ಟಿ, ಫಕೀರಪ್ಪ ಅರವಳ್ಳಿ ನೂರಾರು ರೈತರು ಇದ್ದರು.ಕಲ್ಲೂರ ಗ್ರಾಮದ ಬೆನಕಪತಿ ರೈತ ಉತ್ಪಾದಕ ಸಂಘ ಭೇಟಿ, ಮರಡಿನಾಗಲಾಪೂರ ಗ್ರಾಮದ ಪಿಎಂಎಫ್‌ಎನ್‌ಇ ಕಿರು ಆಹಾರ ಸಂಸ್ಕರಣಾ ಘಟಕ ಉದ್ಘಾಟನೆಯ್ನು ಸಚಿವರು ನೆರವೇರಿಸಿದರು. ನಯಾನಗರ ಗ್ರಾಮದಲ್ಲಿ ಸಮಗ್ರ ಕೃಷಿ ಪದ್ಧತಿ, ಆಡು ಸಾಕಾಣಿಕೆ ವೀಕ್ಷಣೆ ಮಾಡಿದರು.ಬಾಬಾಗೌಡರ ಅಭಿಮಾನಿಗಳಿಂದ ಮನವಿ: ರೈತರ ಜಮೀನುಗಳಿಗೆ ತೆರಳು ರಸ್ತೆಗಳನ್ನು ಅಭವೃದ್ಧಿ ಪಡಿಸಲು ಬಾಬಾಗೌಡರ ಅಭಿಮಾನಿಗಳಿಂದ ಮನವಿ ಸಲ್ಲಿಸಿದಾಗ ಮುಖ್ಯಮಂತ್ರಿಗಳ ಜೊತೆ ಅನುದಾನಕ್ಕಾಗಿ ಚರ್ಚಿಸಲಾಗುವುದು ಎಂದು ಸಚಿವ ಚೆಲುವರಾಯಸ್ವಾಮಿ ಭರವಸೆ ನೀಡಿದರು. ಶ್ರೀಕಾಂತ ಶಿರಹಟ್ಟಿ, ಮೋಹನ ವಕ್ಕುಂದ, ಅಜ್ಜಪ್ಪ ಸಂಗೊಳ್ಳಿ, ಮಹಾಂತೇಶ ಹಿರೇಮಠ, ಮಹಾಂತೇಶ ಗುಮತಿ, ಮಲ್ಲೇಶ ಹೊಸಮನಿ ಮುಂತಾದವರು ಇದ್ದರು.