ಸಾರಾಂಶ
ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಶತಮಾನ ಕಂಡ ನಮ್ಮ ವಿವಿ ಇಂದು ಶಿಕ್ಷಣದ ಗುಣಮಟ್ಟ ಕುಸಿಯುವ ಹಂತಕ್ಕೆ ತಲುಪಿದೆ ಎಂದು ವಿಷಾದಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಸಂಶೋಧನಾ ವಿದ್ಯಾರ್ಥಿಗಳು ಕ್ರಿಯಾತ್ಮಕ ಸಂಶೋಧನೆ ಕಡೆ ಮುಖ ಮಾಡಬೇಕಿದೆ ಎಂದು ಪ್ರೊ. ಎಂ. ನಂಜಯ್ಯ ಹೊಂಗನೂರು ಸಲಹೆ ನೀಡಿದರು.ಮಾನಸಗಂಗೋತ್ರಿ ಇಎಂಆರ್.ಸಿಯಲ್ಲಿ ಬುದ್ದ ಬಳಗ ವತಿಯಿಂದ ನಡೆದ ಒಂದು ದಿನದ ಸಂಶೋಧನಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಂಶೋಧಕರು ವಿಷಯ ಆಯ್ಕೆಯಲ್ಲಿ ಗೊಂದಲ ಮಾಡಿಕೊಳ್ಳದೆ ಮಾರ್ಗದರ್ಶಕರ ಸಲಹೆ ಪಡೆಯುವುದು ಸೂಕ್ತ ಎಂದು ಹೇಳಿದರು.
ಕಾಟಾಚಾರಕ್ಕೆ ಕಾರ್ಯಕ್ರಮಗಳು ಆಗದೇ ನಿರಂತರವಾಗಿ ನಡೆಯುವಂತಗಬೇಕು ಎಂದು ತಿಳಿಸಿದರು.ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಶತಮಾನ ಕಂಡ ನಮ್ಮ ವಿವಿ ಇಂದು ಶಿಕ್ಷಣದ ಗುಣಮಟ್ಟ ಕುಸಿಯುವ ಹಂತಕ್ಕೆ ತಲುಪಿದೆ ಎಂದು ವಿಷಾದಿಸಿದರು. ಸಂಶೋಧಕ, ಸಂಶೋಧನೆ ಯಾವತ್ತು ಸಾಯಬಾರದು ಸ್ತ್ರಜನಶೀಲ ವಾಗಿ ಉಳಿಯಬೇಕು ಎಂದು ಹೇಳಿದರು.
ನಮ್ಮ ವಿವಿಯಲ್ಲಿ ಆರ್ಥಿಕ ಸಮಸ್ಯೆ ಇರಬಹುದು, ಆದರೆ ಜ್ಞಾನಕ್ಕೆ ಕೊರತೆ ಇಲ್ಲ, ವಿದ್ಯಾರ್ಥಿಗಳು ತಮ್ಮ ಜ್ಞಾನದ ಕಡೆ ಗಮನಹರಿಸಬೇಕು ಎಂದು ಅವರು ಹೇಳಿದರು.ಪ್ರೊ. ಲೋಕೇಶ್, ಜಗದೀಶ್ ಮಹದೇವ, ಸಿಂಡಿಕೇಟ್ ಸದಸ್ಯರಾದ ನಟರಾಜ ಶಿವಣ್ಣ, ಸಾಮಾಜಿಕ ಹೋರಾಟಗಾರ ಕಲ್ಲಹಳ್ಳಿ ಕುಮಾರ್, ಗಾಯಕ ಶೇಷಣ್ಣ ಇದ್ದರು.