ಸಮಾಜಕ್ಕೆ ಸರ್‌ಎಂವಿ ಕೊಡುಗೆ ಅಪಾರ: ತುಷಾರ್‌

| Published : Sep 19 2024, 01:45 AM IST

ಸಾರಾಂಶ

ಸರ್.ಎಂ.ವಿಶ್ವೇಶ್ವರಯ್ಯ ಸಾಕಷ್ಟು ಕೆಲಸಗಳು ಇಂದಿಗೂ ಶಾಶ್ವತವಾಗಿ ಉಳಿದಿದ್ದು, ರಾಜ್ಯವನ್ನು ಶ್ರೀಮಂತಗೊಳಿಸಲು ಅವರು ಕೊಡುಗೆ ಅಪಾರವಾದದ್ದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್.ಎಂ.ವಿಶ್ವೇಶ್ವರಯ್ಯ ಸಾಕಷ್ಟು ಕೆಲಸಗಳು ಇಂದಿಗೂ ಶಾಶ್ವತವಾಗಿ ಉಳಿದಿದ್ದು, ರಾಜ್ಯವನ್ನು ಶ್ರೀಮಂತಗೊಳಿಸಲು ಅವರು ಕೊಡುಗೆ ಅಪಾರವಾದದ್ದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಭಿಪ್ರಾಯಪಟ್ಟರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ನೌಕರರ ಭವನದಲ್ಲಿ ಬುಧವಾರ ಸರ್.ಎಂ.ವಿಶ್ವೇಶ್ವರಯ್ಯ ಜಯಂತಿ ಅಂಗವಾಗಿ ಹಲವು ಎಂಜಿನಿಯರ್‌ಗಳಿಗೆ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಬಿಬಿಎಂಪಿಯ ಎಂಜಿನಿಯರ್‌ಗಳು ಕಠಿಣ ಪರಿಸ್ಥಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರ ಕಟ್ಟಲು ಎಂಜಿನಿಯರ್‌ಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆಡಳಿತದ ಜತೆಗೆ ಎಂಜಿನಿಯರ್‌ಗಳು ಕೈ ಜೋಡಿಸಿದರೆ ಉತ್ತಮ ನಾಡು ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಎಂಜಿನಿಯರ್‌ಗಳ ಜತೆಗೆ ಪೌರಕಾರ್ಮಿಕರು, ವೈದ್ಯರು ಸೇರಿ ಇನ್ನಿತರೆ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಸ್ಮರಿಸಬೇಕು. ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಿದರೆ ಮಾತ್ರ ಹೆಚ್ಚು ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಪೂರ್ವ ವಲಯದ ಮುಖ್ಯ ಎಂಜಿನಿಯರ್‌ ಸುಗುಣ, ಬಿಎಸ್ ಡಬ್ಲ್ಯೂಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಆರ್. ಕಬಾಡೆ,ಅಧೀಕ್ಷಕ ಎಂಜಿನಿಯರ್‌ ಎಚ್.ಎಸ್. ಮಹದೇಶ್, ಕಾರ್ಯಪಾಲಕ ಎಂಜಿನಿಯರ್‌ಗಳಾದ ರೂಪೇಶ್, ಮುನಿರೆಡ್ಡಿ, ಎಲ್ ವೆಂಕಟೇಶ್, ಎಚ್.ಎಸ್. ರಾಮಚಂದ್ರಪ್ಪ, ರಾಜಣ್ಣ, ಬಿ. ಶರತ್, ಬಿ.ಎನ್.ಪ್ರದೀಪ್, ಅಶಾ ಹಾಗೂ ಸಹಾಯಕ ಎಂಜಿನಿಯರ್‌ ಚಂದ್ರಶೇಖರ್ ನಾಯಕ್ ಅವರುಗಳಿಗೆ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಶ್ರೀ ಅಮೃತ್ ರಾಜ್‌, ವಿಶೇಷ ಆಯುಕ್ತರಾದ ಡಾ. ಕೆ.ಹರೀಶ್ ಕುಮಾರ್, ಅವಿನಾಶ್ ಮೆನನ್‌ರಾಜೇಂದ್ರನ್, ಉಪ ಆಯುಕ್ತ ಮಂಜುನಾಥ ಸ್ವಾಮಿ ಹಾಜರಿದ್ದರು.