ಸಾರಾಂಶ
ನಗರಸಭೆ ಚುನಾವಣೆಗೆ ತಮಗೆ ಬೆಂಬಲ ನೀಡಿದ 12 ಬಿಜೆಪಿ ಸದಸ್ಯರಿಗೆ ಸನ್ಮಾನ ಸಮಾರಂಭ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ನಗರಸಭೆ 31 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದೆ, ಹಾಗಿದ್ದರೂ ಸಹ ನನ್ನ ನಂಬಿ ನಗರಸಭೆ ಚುನಾವಣೆ ವೇಳೆ 13 ಬಿಜೆಪಿ ಸದಸ್ಯರ ಪೈಕಿ 12 ಮಂದಿ ನಮ್ಮ ಜೊತೆಗಿದ್ದಾರೆ, ಅವರನ್ನು ಗೌರವಿಸುವ ಜೊತೆಗೆ ಅವರು ನಮ್ಮ ಮನೆ ಸದಸ್ಯರಂತೆ ಕಾಣಬೇಕಿದೆ ಎಂದು ಶಾಸಕ ಎ.ಆರ್.ಕೖಷ್ಣಮೂರ್ತಿ ಹೇಳಿದರು.
ಭೀಮಾನಗರದಲ್ಲಿ ಯಜಮಾನರು, ಕುಲಸ್ಥರು ಅಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಅಂಬೇಡ್ಕರ್ ಭವನಕ್ಕೆ ಈಗಾಗಲೇ 3 ಕೋಟಿ ರು. ಅನುಧಾನವನ್ನು ಸಚಿವ ಮಹದೇವಪ್ಪ ನೀಡಿದ್ದಾರೆ, ಕೂಡಲೆ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆಗೆ ಕಾರ್ಯಕ್ರಮ ನಿಗದಿಗೊಳಿಸಿ ಎಂದರಲ್ಲದೆ ಸಂಸದರು ಸಹ 12ಮಂದಿ ಸದಸ್ಯರಿಗೆ ತಮ್ಮ ಅನುದಾನದಲ್ಲಿ ತಲಾ 10 ಲಕ್ಷ ರು. ನೀಡಿ ಸ್ಪಂದಿಸಬೇಕು. ಅವರನ್ನು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಪಕ್ಷ ಸೇಪ೯ಡೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.ರಮೇಶ್ ಉತ್ತಮ ಕೆಲಸಗಾರರು:
ನಗರಸಭೆ ಮಾಜಿ ಅಧ್ಯಕ್ಷರಾದ ರಮೇಶ್ ಅವರು ಉತ್ತಮ ಕೆಲಸಗಾರರು, ಬೆಳಿಗ್ಗೆ ಎದ್ದು ಜನಪರ ಕೆಲಸಗಳಿಗೆ ಸ್ಪಂದಿಸುತ್ತಾರೆ, ವಾಡ್೯ ನಿವಾಸಿಗಳ ಸಂಕಷ್ಟ ಆಲಿಸುತ್ತಾರೆ, ಅವರ ಪತ್ನಿ ಸಹ ವಿದ್ಯಾವಂತೆ. ಅವರಿಗೂ ಸಹ ಅಭಿವೖದ್ಧಿಪರ ಕಾಳಜಿ ಇದೆ, ರೇಖಾರನ್ನು ಅಧ್ಯಕ್ಷರನ್ನಾಗಿಸಲು ಪತಿ ರಮೇಶ್ ಶ್ರಮ ಹಾಕಿದ್ದಾರೆ, ರಮೇಶ್ ಜನಪರಾಗಿದ್ದಾರೆ ಎಂಬ ಕಾರಣಕ್ಕೆ 2ನೇ ಬಾರಿಗೆ ಅವರನ್ನು ಅಧ್ಯಕ್ಷರನ್ನಾಗಿಸಿದೆ. ಅದೇ ರೀತಿ ಎ.ಪಿ.ಶಂಕರ್ ಅವರಿಗೂ ಸಹ 2ನೇ ಬಾರಿ ಉಪಾಧ್ಯಕ್ಷರಾಗುವ ಬಂಪರ್ ಅವಕಾಶ ಒಲಿದು ಬಂತು ಎಂದು ತಿಳಿಸಿದರು.ಮಾನಸ, ನಾಗಸುಂದ್ರಮ್ಮಗೆ ಅಧ್ಯಕ್ಷರಾಗುವ ಅವಕಾಶವಿತ್ತು:
ಬಿಜೆಪಿಯ ಮಾನಸ ಪ್ರಭುಸ್ವಾಮಿ ಮತ್ತು ನಾಗಸುಂದ್ರಮ್ಮ ಅವರಲ್ಲಿ ಒಬ್ಬರಿಗೆ ಅಧ್ಯಕ್ಷರಾಗುವ ಅವಕಾಶವಿತ್ತು, ಆದರೆ ಅದ್ಯಾವುದನ್ನು ಲೆಕ್ಕಿಸದೆ ಬಿಜೆಪಿ ತೊರೆದು ನಮಗೆ ಬೆಂಬಲ ಸೂಚಿಸಿದರು. ನಾಗಸುಂದ್ರಮ್ಮ ಮಾಜಿ ಸಚಿವರ ಸಂಬಂಧಿಯಾದರೂ ಸಹ ಲೆಕ್ಕಿಸದೆ ನಮ್ಮ ಮನೆನೆ ಬಂದಿದ್ದಾರೆ, ಅದೇ ರೀತಿ ಮಾನಸ ಅವರ ಪತಿ ಪ್ರಭುಸ್ವಾಮಿ ಅವರು ಸಹ ನಮಗೆ ಬೆಂಬಲ ಸೂಚಿಸಿದ್ದಾರೆ. ಇವೆರೆಲ್ಲರೂ ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬಂದಿದ್ದಾರೆ, ಅವರೆಲ್ಲರಿಗೂ ಬೀಮನಗರದ ಪರವಾಗಿ ನಾನು ಸ್ವಾಗತಿಸುವೆ, ನನಗೆ ದೊರೆತೆ 25 ಕೋಟಿ ರು. ಅನುದಾನದಲ್ಲಿ ಎಲ್ಲಾ ಕೋಟಿ ಎಲ್ಲಾ ಧರ್ಮದ ಜನರ ಅಭಿವೃದ್ಧಿಗೂ ಹಂಚಲಾಗಿದೆ. 19 ವರ್ಷಗಳ ವನವಾಸದ ಬಳಿಕ ಜನಸೇವೆಗೆ ಅವಕಾಶ ಸಿಕ್ಕಿದೆ ಎಂದರುಹನೂರು ಶಾಸಕ ಎಂ.ಆರ್.ಮಂಜುನಾಥ್, ಕೊಡಗು ಜಿಲ್ಲೆಯ ಎಎಸ್ಪಿ ಕೆ.ಎಸ್.ಸುಂದರರಾಜು, ಕೆಎಂಎಫ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಬೆಂಗಳೂರಿನ ಡಿವೈಎಸ್ಪಿ ಎಚ್.ಕೆ.ಮಹಾನಂದ, ನಗರಸಭಾ ನೂತನಾಧ್ಯಕ್ಷೆ ಸಿ.ಎನ್.ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್ ಅವರನ್ನು ಸಮಾರಂಭದಲ್ಲಿ ಗೌರವ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹಾದೇವ, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ನಗರಸಭಾ ಮಾಜಿ ಅಧ್ಯಕ್ಷ ಎಸ್.ರಮೇಶ್, ಜಾಮರಾಜನಗರ ಜಿಲ್ಲೆಯ ಕುಡಿಯುವ ನೀರು ವಿಭಾಗ ಇ.ಇ.ಎಸ್.ಆನಂದಮೂರ್ತಿ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಟರಾಜು ಮಾಳಿಗೆ, ನಗರಸಭೆ ಮಾಜಿ ಉಪಾಧ್ಯಕ್ಷ ಕಲಿಮುಲ್ಲ, ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಮನ್ಸೂರ್ ಪಾಶ, ಕಾಂಗ್ರೆಸ್ ಮುಖಂಡ ಅನ್ಸರ್‌ಬೇಗ್, ದೊಡ್ಡ ಯಜಮಾನ ಚಿಕ್ಕಮಾಳಿಗೆ, ನಗರಸಭೆ ಸದಸ್ಯ ಮಂಜುನಾಥ್ ಇದ್ದರುಎಲ್ಲರ ನಿರೀಕ್ಷೆಗೆ ತಕ್ಕಂತೆ ಕೆಲಸಎಲ್ಲರ ಆರ್ಶೀವಾದ ಮತ್ತು ತಾಯಿ ಚಾಮುಂಡಿ ಕೃಪೆಯಿಂದ ಸಂಸದನಾಗಿದ್ದೇನೆ. ತಾವು ಕೊಟ್ಟ ಈ ಸ್ಥಾನ ಹಾಗೂ ನಿಮ್ಮೆಲ್ಲರ ನಿರೀಕ್ಷೆಗೆ ಚ್ಯುತಿ ಬಾರದಂತೆ ಸಂವಿಧಾನ ಬದ್ಧವಾಗಿ ಕೆಲಸ ಕಾರ್ಯಗಳನ್ನು ಜಿಲ್ಲೆಯ ನಮ್ಮ ಎಲ್ಲಾ ಶಾಸಕರು, ಮಾಜಿ ಶಾಸಕರ ಮಾರ್ಗದರ್ಶನದಲ್ಲಿ ಮಾಡುತ್ತೇನೆ.
ಸುನೀಲ್ ಬೋಸ್, ಸಂಸದ.