ಜೂನ್‌ ೨೦ ರಂದು 6ನೇ ವರ್ಷದ ಅಕ್ಷರ ಪುರಸ್ಕಾರ: ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಕೆ. ಗಂಗಾಧರ್

| Published : Jun 13 2024, 12:57 AM IST

ಜೂನ್‌ ೨೦ ರಂದು 6ನೇ ವರ್ಷದ ಅಕ್ಷರ ಪುರಸ್ಕಾರ: ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಕೆ. ಗಂಗಾಧರ್
Share this Article
  • FB
  • TW
  • Linkdin
  • Email

ಸಾರಾಂಶ

ಜೂ.೨೦ ರ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಅಕ್ಷರ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕ್ಷರ ಬುಕ್ ಹೌಸ್ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಕೆ.ಗಂಗಾಧರ್ ತಿಳಿಸಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ರಿಂಗ್ ರಸ್ತೆ ಬಳಿ ಇರುವ ಅಕ್ಷರ ಅಕಾಡೆಮಿ ಆವರಣದಲ್ಲಿ ಜೂ.೨೦ ರ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಅಕ್ಷರ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕ್ಷರ ಬುಕ್ ಹೌಸ್ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಕೆ.ಗಂಗಾಧರ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ‘ಅಕ್ಷರ ಅಕಾಡೆಮಿ ಮತ್ತು ಮಕ್ಕಳ ಸಾಹಿತ್ಯ ಪರಿಷತ್ ಆರನೇ ವರ್ಷದ ಅಕ್ಷರ ಪುರಸ್ಕಾರ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ, ಇದು ಮಕ್ಕಳಿಗೆ ಪುಸ್ತಕವನ್ನು ಕೊಟ್ಟು ಪ್ರೋತ್ಸಾಹ ಮಾಡುವ ಕಾರ್ಯಕ್ರಮವಾಗಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಪರ್ಸೇಂಟೇಜ್ ಸಲ್ಪ ಇಳಿಮುಖವಾಗಿದ್ದು, ನಮ್ಮ ಮಾನದಂಡ ಇನ್ನಷ್ಟು ಕಡಿಮೆ ಮಾಡಿದ್ದು, ನೂರಕ್ಕೆ ಶೇಕಡ ೭೫ಕ್ಕಿಂತ ಹೆಚ್ಚು ಅಂಕ ತೆಗೆದಿರುವವರು ಅರ್ಹರಾಗುತ್ತಾರೆ. ಯಾರು ಬೇಕಾದರೂ ಅರ್ಜಿ ಹಾಕಬಹುದು’ ಎಂದು ಹೇಳಿದರು.

‘ಕಳೆದ ವರ್ಷ ಒಂದು ಸಾವಿರ ಮಕ್ಕಳಿಳಿಗೆ ಪುಸ್ತಕ ನೀಡಲಾಗಿತ್ತು. ಈ ವರ್ಷ ಹಾಸನ ತಾಲೂಕಿನಲ್ಲಿ ಶಿಕ್ಷಣ ಪಡೆದಿರುವವರು ಮಾತ್ರ ಅರ್ಜಿ ಹಾಕಬಹುದು. ಹಾಸನ ತಾಲೂಕಿನಲ್ಲಿ ಮೊದಲು ಬಂದ ೨೦೦ ವಿದ್ಯಾರ್ಥಿಗಳಿಗೆ ಈ ಪುಸ್ತಕ ಕೊಡಲಾಗುವುದು. ಪ್ರತಿ ವಿದ್ಯಾರ್ಥಿಗಳಿಗೂ ೮ ಪುಸ್ತಕವನ್ನು ಕೊಡಲಾಗುವುದು. ಜೊತೆಗೆ ಒಂದು ಸರ್ಟಿಫಿಕೆಟ್ ಕೊಟ್ಟು ಸನ್ಮಾನ ಮಾಡಲಾಗುವುದು’ ಎಂದು ತಿಳಿಸಿದರು.

‘ಜೂ.೨೦ರ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಅಕ್ಷರ ಅಕಾಡೆಮಿ ಶಿಬಿರದಲ್ಲಿ ಪುಸ್ತಕದೊಂದಿಗೆ ಪುರಸ್ಕಾರ ಮಾಡಲಾಗುವುದು. ಅರ್ಜಿ ಹಾಕಲು ಜೂ.೧೩ ರಿಂದ ಅಪ್ಲಿಕೇಶನ್ ಸಿಗುವ ಸ್ಥಳ ಅಕ್ಷರ ಬುಕ್ ಹೌಸ್, ಹರ್ಷ ಮಹಲ್ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಹಾಗೂ ಅಕ್ಷರ ಅಕಾಡೆಮಿ ಸೇರಿ ಮೂರು ಜಾಗದಲ್ಲಿ ಅರ್ಜಿ ದೊರೆಯುವುದು. ಅಪ್ಲಿಕೇಶನ್ ಪಡೆದು ೧೦ನೇ ತರಗತಿಯ ಅಂಕಪಟ್ಟಿಯನ್ನು ಆ ಶಾಲೆಯಿಂದ ಸಹಿ ಹಾಕಿಸಿ ಫೋಟೋ ಹಾಕಿಕೊಂಡು ತರಬೇಕು. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಕ್ಷರ ಪುರಸ್ಕಾರ ಮಾಡಲಾಗುವುದು. ಪ್ರತಿ ತಾಲೂಕಿನಲ್ಲೂ ೧೦೦ ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹಾಸನ ತಾಲೂಕಿಗೆ ಮಾತ್ರ ೨೦೦ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಅಕ್ಷರ ಅಕಾಡೆಮಿಯ ಕೀರ್ತಿ, ವ್ಯವಸ್ಥಾಪಕ ಶ್ರೀನಾಥ್, ಅಕ್ಷರ ಬುಕ್ ಹೌಸ್ ವ್ಯವಸ್ಥಾಪಕ ಮಂಜುನಾಥ್, ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ರಘುನಂದನ್ ಇತರರು ಇದ್ದರು.