ಮರಿಯಮ್ಮನಹಳ್ಳಿ; ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯೊಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಘಟನೆ ಸಮೀಪದ ಹಂಪಿನಕಟ್ಟಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಹಂಪಿನಕಟ್ಟಿ ನಿವಾಸಿ ಶಕೀಲಾ ಎಂಬ ಮಹಿಳೆಯೇ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ತಾಯಿ. ಬುಧವಾರ ಬೆಳಗಿನ ಜಾವ ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಂಪಿನಕಟ್ಟಿ ಗ್ರಾಮದಿಂದ ಹೊಸಪೇಟೆ ನಗರದ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಬೆಳಗಿನ ಜಾವ 4 ಗಂಟೆಗೆ ಒಂದು ಮಗು ಹಾಗೂ 4-20ಕ್ಕೆ ಇನ್ನೊಂದು ಮಗು ಜನನವಾಗುವ ಮೂಲಕ ಅವಳಿ ಮಕ್ಕಳ ಜನನವಾಗಿದೆ.

108 ಆ್ಯಂಬುಲೆನ್ಸ್ ಸಿಬ್ಬಂದಿ ಅನಿಲಕುಮಾರ್ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಹಾಗೂ ನವಜಾತ ಶಿಶುಗಳು ಆರೋಗ್ಯವಾಗಿದೆ ಎಂದು ಅವರು ತಿಳಿಸಿದರು. ಆಶಾ ಕಾರ್ಯಕರ್ತೆ ಗಂಗಮ್ಮ, ಚಾಲಕ ಬಾಷಾ ಇದ್ದರು.

ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟಿ ಗ್ರಾಮದ ನಿವಾಸಿ ಶಕೀಲಾ ಎಂಬ ಮಹಿಳೆಯು ಅವಳಿ ಗಂಡು ಮಕ್ಕಳಿಗೆ ಆ್ಯಂಬುಲೆನ್ಸ್‌ನಲ್ಲಿ ಜನ್ಮ ನೀಡಿದ್ದಾರೆ.