ಬಡತನದಲ್ಲಿ ಸಾಧನೆ ಮಾಡಿದ ಅವಳಿ ಸಹೋದರರು

| Published : May 13 2024, 01:08 AM IST

ಸಾರಾಂಶ

ಮಹಾಲಿಂಗಪುರ ಸಮೀಪದ ಕಪ್ಪಲಗುದ್ದಿ ಗ್ರಾಮದ ತುಕ್ಕಾನಟ್ಟಿ ಕುಟುಂಬದಲ್ಲಿ ಜನಿಸಿದ ಅವಳಿ ಸೋದರರು ಶಾಲೆಗೆ ಪ್ರಥಮ ಸ್ಥಾನ ಪಡೆದು ಕುಟುಂಬ ವರ್ಗಕ್ಕೆ ಹೆಮ್ಮೆ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸಮೀಪದ ಕಪ್ಪಲಗುದ್ದಿ ಗ್ರಾಮದ ತುಕ್ಕಾನಟ್ಟಿ ಕುಟುಂಬದಲ್ಲಿ ಜನಿಸಿದ ಅವಳಿ ಸೋದರರು ಶಾಲೆಗೆ ಪ್ರಥಮ ಸ್ಥಾನ ಪಡೆದು ಕುಟುಂಬ ವರ್ಗಕ್ಕೆ ಹೆಮ್ಮೆ ತಂದಿದ್ದಾರೆ.

ತಂದೆ ಕೃಷ್ಣಪ್ಪ ತುಕ್ಕಾನಟ್ಟಿ ಹಾಗೂ ತಾಯಿ ಬಂದವ್ವ ಅವಳಿ ಮಕ್ಕಳಾದ ಮುತ್ತಪ್ಪ ಮತ್ತು ಮಲ್ಲೇಶ ಈ ಸಾಧನೆ ಮಾಡಿದವರು. ತಾಯಿ ಅಂಗವಿಕಲ್ಯ ಮೀರಿ ಜೀವನ ನಡೆಸುತ್ತಿದ್ದಾಳೆ. ತಂದೆ ನೆರೆಹೊರೆಯವರ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಮಲ್ಲೇಶ ಮಹಾಲಿಂಗಪುರ ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಗೊಂಡ. ಮುತ್ತು ಹಳ್ಳೂರು ಶ್ರೀರಾಮವಿದ್ಯಾವರ್ಧಕ ಸಮಿತಿಯ ಸೌಭಾಗ್ಯವತಿ ಸುಮಿತ್ರಾ ದೇವಿ ಪಾಟೀಲ ಪ್ರೌಢಶಾಲೆ ಶಾಲೆಯಲ್ಲಿ ಕಲಿಯುತ್ತಿದ್ದ.

2023-24ರ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಮಲ್ಲೇಶ ತುಕ್ಕಾನಟ್ಟಿ 587 ಅಂಕ ಪಡೆದು ಪ್ರತಿಶತ ಶೇ.93.92 ಪಡೆದು ಮಹಾಲಿಂಗಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡರೆ. ಅವಳಿ ಸಹೋದರ ಮುತ್ತಪ್ಪ ತುಕ್ಕಾನಟ್ಟಿ 597 ಅಂಕ ಪಡೆದು ಪ್ರತಿಶತ 95.52 ಅಂಕ ಪಡೆದು ಹಳ್ಳೂರಿನ ಶ್ರೀ ಸೌಭಾಗ್ಯವತಿ ಸುಮಿತ್ರಾ ದೇವಿ ಪಾಟೀಲ ಪ್ರೌಢ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಕಪ್ಪಲಗುದ್ದಿ ಗ್ರಾಮಕ್ಕೆ ಕೀರ್ತಿ ತಂದಿದ್ದಕ್ಕಾಗಿ ಗ್ರಾಮದ ಉಪನ್ಯಾಸಕ ರಾಘವೇಂದ್ರ ನೀಲಣ್ಣವರ, ಶಿವರಾಜ ಬಿರಾಜ, ವಿರಾಜ ಶರಣಪ್ಪ ಮೇಟಿ, ಪ್ರಮೋದ ದಡ್ಡಿಮನಿ, ಮಹಾಲಿಂಗ ಬಾಗೋಜಿ, ಕೆಂಪಣ್ಣ ಕುರನಿಂಗ, ಬಾಳು ಬಾಗೋಜಿ, ಆಕಾಶ್ ತುಕ್ಕಾನಟ್ಟಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ತುಕ್ಕಾನಟ್ಟಿ ಕುಟುಂಬದ ಹಿರಿಯರಾದ ಕಲ್ಲೋಳೆಪ್ಪ ತುಕ್ಕಾನಟ್ಟಿ, ಯಮನವ್ವ ತುಕ್ಕಾನಟ್ಟಿ, ಸಾಧಕ ವಿದ್ಯಾರ್ಥಿಯ ತಂದೆ-ತಾಯಿ ಕೃಷ್ಣಪ್ಪ ತುಕ್ಕಾನಟ್ಟಿ, ಬಂದವ್ವ ತುಕ್ಕಾನಟ್ಟಿ ಮುಂತಾದವರು ಇದ್ದರು.