ಸ್ವಚ್ಛತಾ ಕಾರ್ಯದ ವೇಳೆ ಪುರಾತನ ಎರಡು ನೆಲಮಾಳಿಗೆಗಳು ಪತ್ತೆ

| Published : Jul 24 2024, 12:17 AM IST

ಸ್ವಚ್ಛತಾ ಕಾರ್ಯದ ವೇಳೆ ಪುರಾತನ ಎರಡು ನೆಲಮಾಳಿಗೆಗಳು ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 8*15 ಅಳೆತೆಯುಳ್ಳ ಗೌಪ್ಯ ಸ್ಥಳದ ಸುತ್ತಲೂ 100 ಅಡಿ ವಿಸ್ತೀರ್ಣದ ವೃತ್ತಾಕಾರದ ಗೋಡೆಯನ್ನು ಹೊಂದಿದೆ. ಮೇಲೆ ಸೈನಿಕರು ಗಸ್ತು ತಿರುಗಲು ಬಳಸುತ್ತಿದ್ದರು ಎನ್ನಲಾಗಿದೆ. ಜೊತೆಗೆ ಈ ನೆಲಮಾಳಿಗೆಗಳು ಶತ್ರು ಸೈನ್ಯದ ಮೇಲೆ ಹದ್ದಿನ ಕಣ್ಣಿಡಲು ತಂಗುದಾಣ, ವಿಶ್ರಾಂತಿ ಗೃಹ ಅಥವಾ ಯುದ್ಧ ಸಮಯದಲ್ಲಿ ಮದ್ದು-ಗುಂಡು ಸೇರಿದಂತೆ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಿಡುತ್ತಿದ್ದ ಅಡುಗು ತಾಣವನ್ನಾಗಿ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನೂರಾರು ವಿದ್ಯಾರ್ಥಿಗಳ ಸ್ವಚ್ಛತಾ ಕಾರ್ಯದಿಂದ ಪಟ್ಟಣದ ಅಗ್ನಿ ಶಾಮಕದಳದ ಹಿಂಬದಿಯಲ್ಲಿ ಪುರಾತನ ಕಾಲದ ಎರಡು ನೆಲಮಾಳಿಗೆಗಳು ಪತ್ತೆಯಾಗಿವೆ.

ಪಟ್ಟಣದ ಅಚೀವರ್ಸ್ ಅಕಾಡೆಮಿ, ಪರಿವರ್ತನಾ ಶಾಲೆ, ಸಮರ್ಪಣಾ ಟ್ರಸ್ಟ್ ಹಾಗೂ ಮೈಸೂರಿನ ಶೇಷಾದ್ರಿಪುರಂ ಕಾಲೇಜಿನ ಎನ್ಎಸ್ಎಸ್ ಹಾಗೂ ಎಬ್‌ಸಿಸಿ ನೂರಾರು ವಿದ್ಯಾರ್ಥಿಗಳು ಶ್ರಮದಾನ ನಡೆಸಿ ಬೆಳೆದು ನಿಂತಿದ್ದ ಗಿಡ-ಗಂಟೆಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿದರು.

ಸುಮಾರು 8*15 ಅಳೆತೆಯುಳ್ಳ ಗೌಪ್ಯ ಸ್ಥಳದ ಸುತ್ತಲೂ 100 ಅಡಿ ವಿಸ್ತೀರ್ಣದ ವೃತ್ತಾಕಾರದ ಗೋಡೆಯನ್ನು ಹೊಂದಿದೆ. ಮೇಲೆ ಸೈನಿಕರು ಗಸ್ತು ತಿರುಗಲು ಬಳಸುತ್ತಿದ್ದರು ಎನ್ನಲಾಗಿದೆ. ಜೊತೆಗೆ ಈ ನೆಲಮಾಳಿಗೆಗಳು ಶತ್ರು ಸೈನ್ಯದ ಮೇಲೆ ಹದ್ದಿನ ಕಣ್ಣಿಡಲು ತಂಗುದಾಣ, ವಿಶ್ರಾಂತಿ ಗೃಹ ಅಥವಾ ಯುದ್ಧ ಸಮಯದಲ್ಲಿ ಮದ್ದು-ಗುಂಡು ಸೇರಿದಂತೆ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಿಡುತ್ತಿದ್ದ ಅಡುಗು ತಾಣವನ್ನಾಗಿ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಸದ್ಯ ಇತ್ತೀಚೆಗೆ ಬೆಳಕಿಗೆ ಬಂದಿರುವ ಈ ನೆಲಮಾಳಿಗೆಗಳಿಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಉತ್ಕನನ ನಡೆಸಿ ಸ್ಪಷ್ಟ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಚಚ್ಛತಾ ಕಾರ್ಯದಲ್ಲಿ ಅಚೀವರ್ಸ್ ಅಕಾಡಮಿ ಹಾಗೂ ಶೇಷಾದ್ರಿಪುರಂ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಡಾ.ರಾಘವೇಂದ್ರ, ಸಮರ್ಪಣಾ ಟ್ರಸ್ಟ್‌ನ ಜೈಶಂಕರ್, ಪರಿವರ್ತನಾ ಶಾಲೆಯ ಮುಖ್ಯಸ್ಥ ಮಂಜುರಾಮ್, ಪ್ರಜ್ಞಾವಂತ ವೇದಿಕೆಯ ವೆಂಕಟೇಶ್ ಸೇರಿದಂತೆ ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇಂದು ಕುಂದುಕೊರತೆ ಸಭೆ

ಪಾಂಡವಪುರ:ಮಂಡ್ಯ ಲೋಕಾಯುಕ್ತ ವಿಭಾಗದ ಅಧಿಕಾರಿಗಳು ಜುಲೈ 24ರಂದು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30 ಗಂಟೆವರೆಗೆ ಸಾರ್ವಜನಿಕರಿಂದ ದೂರು/ಅಹವಾಲುಗಳ ಸ್ವೀಕಾರ ಮಾಡಲಿದ್ದಾರೆ. ಮಂಡ್ಯ ಕರ್ನಾಟಕ ಲೋಕಾಯುಕ್ತ ಪೋಲಿಸ್ ಇನ್ಸ್ ಪೆಕ್ಟರ್‌ಗಳಾದ ಬಿ.ಪಿ.ಬ್ಯಾಟರಾಯನಗೌಡ, ಆರ್. ಎಂ. ಮೋಹನ್ ರೆಡ್ಡಿ, ಡಿವೈಎಸ್‌ಪಿ ಎಚ್.ಟಿ.ಸುನಿಲ್‌ಕುಮಾರ್ ಪಾಲ್ಗೊಳ್ಳಲಿದ್ದಾರೆ. ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರುಗಳು ಸರ್ಕಾರಿ ಕೆಲಸ ಮಾಡಿಕೊಡಲು ಅನಗತ್ಯ ವಿಳಂಬ ಮಾಡಿದ ಬಗ್ಗೆ ಹಾಗೂ ಭ್ರಷ್ಟಾಚಾರದ ಬಗ್ಗೆ ತಾಲೂಕಿನ ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ದೂರು/ಅಹವಾಲುಗಳನ್ನು ಸಲ್ಲಿಸಬಹುದು ಎಂದು ಮಂಡ್ಯ ಕರ್ನಾಟಕ ಲೋಕಾಯುಕ್ತ ಪೋಲಿಸ್ ಅಧೀಕ್ಷಕರು ತಿಳಿಸಿದ್ದಾರೆ.