ವನ್ಯಜೀವಿಗಳನ್ನು ಬೇಟೆಯಾಡಲು ಬಂದ ಇಬ್ಬರ ಸೆರೆ

| Published : Mar 20 2024, 01:17 AM IST

ವನ್ಯಜೀವಿಗಳನ್ನು ಬೇಟೆಯಾಡಲು ಬಂದ ಇಬ್ಬರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ವನ್ಯಜೀವಿಗಳನ್ನು ಬೇಟೆಯಾಡಲು ಬಂದ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಇಬ್ಬರನ್ನು ಹಾನಗಲ್ಲ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದು, ಒಂದು ಬಂದೂಕು ಹಾಗೂ ಟೋಯೋಟಾ ಇನ್ನೋವಾ ಕಾರು ವಶಕ್ಕೆ ಪಡೆದಿದ್ದಾರೆ. ತಲೆ ಮರೆಸಿಕೊಂಡ ಇನ್ನಿಬ್ಬರ ಹುಡುಕಾಟದಲ್ಲಿದ್ದಾರೆ.

ಹಾನಗಲ್ಲ: ವನ್ಯಜೀವಿಗಳನ್ನು ಬೇಟೆಯಾಡಲು ಬಂದ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಇಬ್ಬರನ್ನು ಹಾನಗಲ್ಲ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದು, ಒಂದು ಬಂದೂಕು ಹಾಗೂ ಟೋಯೋಟಾ ಇನ್ನೋವಾ ಕಾರು ವಶಕ್ಕೆ ಪಡೆದಿದ್ದಾರೆ. ತಲೆ ಮರೆಸಿಕೊಂಡ ಇನ್ನಿಬ್ಬರ ಹುಡುಕಾಟದಲ್ಲಿದ್ದಾರೆ.

ಹಾನಗಲ್ಲ ತಾಲೂಕಿನ ಹನುಮಾಪುರ, ಇನಾಂದ್ಯಾಮನಕೊಪ್ಪ ಅರಣ್ಯ ಪ್ರದೇಶದಲ್ಲಿ ನಾಲ್ವರು ಸಂಶಯಾಸ್ಪದವಾಗಿ ಹಾಗೂ ಆಯುಧಗಳೊಂದಿಗೆ ಅರಣ್ಯ ಪ್ರದೇಶದಲ್ಲಿ ತಿರುಗುತ್ತಿರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಈ ಬೇಟೆಯಾಡಲು ಬಂದವರನ್ನು ಬಂಧಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸ್ವಿಫ್ಟ್‌ ಕಾರು ಜಖಂಗೊಂಡಿದೆ.

ಹಾವೇರಿ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಬಾಲಕೃಷ್ಣ, ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡಕರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಗಿರೀಶ ಚೌಗುಲೆ ಹಾಗೂ ಇಲಾಖೆ ಸಿಬ್ಬಂದಿ ಎಸ್.ಎಂ. ತಳವಾರ, ಎಸ್.ಕೆ. ರಾಠೋಡ, ಕೃಷ್ಣ ನಾಯಕ, ಹನುಮಂತಪ್ಪ ಉಪ್ಪಾರ, ಫಕ್ಕೀರಪ್ಪ ಮಲ್ಲಿಗಾರ, ರಾಮಚಂದ್ರ, ಸುರೇಶ ಗೋರ್ಖಾ, ಅಶೋಕ ಕುಮಚಗಿ, ಪ್ರವೀಣ ಹುಗ್ಗೇರ ಮೊದಲಾದವರು ಕಾರ್ಯಾಚರಣೆ ನಡೆಸಿದ್ದಾರೆ.