ಅಡಕೆ ಕಳವು ಮಾಡಿದ್ದ ಇಬ್ಬರ ಬಂಧನ: 202.87 ಕೆಜಿ ಒಣ ಅಡಿಕೆ, ಕಾರು ವಶ

| Published : Dec 23 2024, 01:03 AM IST

ಸಾರಾಂಶ

ನರಸಿಂಹರಾಜಪುರ, ಮುತ್ತಿನಕೊಪ್ಪ ಹಾಗೂ ತಾಲೂಕಿನ ವಿವಿಧ ಕಡೆ ಅಡಕೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಲಕ್ಕಿನ ಕೊಪ್ಪದಲ್ಲಿ ವಾಸ ಮಾಡುತ್ತಿರುವ ಕಡೂರಿನ ಮಹಮದ್‌ ಸಾಧಿಕ್‌ ಬಿನ್‌ ನಸ್ರುಲ್ಲಾ ಖಾನ್‌ ಹಾಗೂ ಲಕ್ಕಿನಕೊಪ್ಪದ ಸಲ್ಮಾ ಕೋಂ ಮಹಮ್ಮದ್ ಸಾದಿಕ್ ಬಂಧಿತ ಆರೋಪಿಗಳು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮುತ್ತಿನಕೊಪ್ಪ ಹಾಗೂ ತಾಲೂಕಿನ ವಿವಿಧ ಕಡೆ ಅಡಕೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಲಕ್ಕಿನ ಕೊಪ್ಪದಲ್ಲಿ ವಾಸ ಮಾಡುತ್ತಿರುವ ಕಡೂರಿನ ಮಹಮದ್‌ ಸಾಧಿಕ್‌ ಬಿನ್‌ ನಸ್ರುಲ್ಲಾ ಖಾನ್‌ ಹಾಗೂ ಲಕ್ಕಿನಕೊಪ್ಪದ ಸಲ್ಮಾ ಕೋಂ ಮಹಮ್ಮದ್ ಸಾದಿಕ್ ಬಂಧಿತ ಆರೋಪಿಗಳು.

ಡಿ. 5 ರಾತ್ರಿ ಮುತ್ತಿನಕೊಪ್ಪದ ಗುರುಮೂರ್ತಿ ಎಂಬುವರ ಅಡಕೆ ತೋಟದಲ್ಲಿ 65 ರಿಂದ 70 ಮರಗಳಲ್ಲಿ ಕಳ್ಳರು ಅಡಕೆ ಕೊನೆ ತೆಗೆದು ತೋಟದಲ್ಲಿ ಉದುರಿಸಿ ಅಂದಾಜು 7 ರಿಂದ 8 ಕ್ವಿಂಟಾಲ್‌ ಹಸಿ ಅಡಕೆಯನ್ನು ಕಳ್ಳತನ ಮಾಡಿದ್ದರು. ಡಿ.6 ರಂದು ಬೆಳಿಗ್ಗೆ ಗುರುಮೂರ್ತಿ ಅವರು ತೋಟಕ್ಕೆ ಬಂದು ನೋಡಿದಾಗ ಅಡಕೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಡಿ. 7 ರಂದು ಈ ಕಳ್ಳತನದ ಬಗ್ಗೆ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

ಖಚಿತ ಮಾಹಿತಿ ಮೇರೆಗೆ ಶನಿವಾರ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಇಬ್ಬರು ಆರೋಪಗಳನ್ನು ಬಂಧಿಸಿ ತನಿಖೆ ಮಾಡಿದಾಗ ಮುತ್ತಿನ ಕೊಪ್ಪದಲ್ಲಿ ಅಡಕೆ ಕೊನೆ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಶಿವಮೊಗ್ಗ ತುಂಗಾ ಠಾಣಾ ವ್ಯಾಪ್ತಿಯಲ್ಲಿ ಹಾಗೂ ವಿವಿಧ ಕಡೆ ಅಡಕೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 202.87 ಕೆ.ಜಿ. ಒಣ ಅಡಕೆ ಹಾಗೂ ಮಾರುತಿ ಜೆನ್‌ ಕಾರನ್ನು ವಶಪಡಿಸಿ ಕೊಳ್ಳಲಾಗಿದ್ದು ಇದರ ಒಟ್ಟು ಮೌಲ್ಯ ₹1.60.000 ಗಳಾಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ವಿಕ್ರಂ ಆಮಟೆ ಮಾರ್ಗದರ್ಶನದಲ್ಲಿ ಪೊಲೀಸ್‌ ಠಾಣಾಧಿಕಾರಿ ನಿರಂಜಗೌಡ, ಪಿಎಸ್‌ ಐ. ಜ್ಯೋತಿ, ಸಿಬ್ಬಂದಿಗಳಾದ ಪರಮೇಶ್‌, ಪಿ.ಎ.ಬಿನು,ಮಧು,ಅಮಿತ್ ಚೌಗಲೆ,ದೇವರಾಜ್‌, ಕೌಶಿಕ್‌, ನವೀನ್‌ ಕುಮಾರ್‌ ಪಾಲ್ಗೊಡಿದ್ದರು.