ಶೋಕಿ ಜೀವನಕ್ಕೆ ಜೋತು ಬಿದ್ದಿದ್ದ ಆರೋಪಿಗಳು ಮದ್ಯ ವ್ಯಸನಿಗಳಾಗಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡಬೇಕೆಂಬ ಉದ್ದೇಶದಿಂದ ಸ್ಕ್ರಾಪ್ ವ್ಯಾಪಾರದ ನೆಪದಲ್ಲಿ ಬಂದು ಅಲ್ಲಲ್ಲಿ ನಿಂತಿರುವ ಆಟೋಗಳನ್ನು ಗಮನಿಸಿಕೊಂಡು ಹೋಗುತ್ತಿದ್ದರು.

ಮಾಗಡಿ: ಪಟ್ಟಣದ ಜೋತಿನಗರದಲ್ಲಿರುವ ಗ್ಯಾಸ್ ಏಜೆನ್ಸಿ ಬಳಿ ನಿಂತಿದ್ದ ವಾಹನಗಳಲ್ಲಿ ಬ್ಯಾಟರಿ, ಟೋಲ್ ಬಾಕ್ಸ್, ತೂಕದ ಯಂತ್ರಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರ ಪಾದರಾಯನಪುರ ನಿವಾಸಿಗಳಾದ ಸಲ್ಮಾನ್‌ಖಾನ್ (26), ಆಟೋ ಡ್ರೈವರ್ ಯಾಸಿನ್ (25) ಬಂಧಿತರು. ಇವರಿಂದ 40 ಸಾವಿರ ಮೌಲ್ಯದ 4 ಬ್ಯಾಟರಿ, 4 ಟೂಲ್‌ಬಾಕ್ಸ್, 04 ಸ್ಟೇಲ್‌ಗಳು ಹಾಗೂ 03 ಜಾಕ್‌ ರಾಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶೋಕಿ ಜೀವನಕ್ಕೆ ಜೋತು ಬಿದ್ದಿದ್ದ ಆರೋಪಿಗಳು ಮದ್ಯ ವ್ಯಸನಿಗಳಾಗಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡಬೇಕೆಂಬ ಉದ್ದೇಶದಿಂದ ಸ್ಕ್ರಾಪ್ ವ್ಯಾಪಾರದ ನೆಪದಲ್ಲಿ ಬಂದು ಅಲ್ಲಲ್ಲಿ ನಿಂತಿರುವ ಆಟೋಗಳನ್ನು ಗಮನಿಸಿಕೊಂಡು ಹೋಗುತ್ತಿದ್ದರು. ರಾತ್ರಿ ಸಮಯದಲ್ಲಿ ಆಟೋಗಳಲ್ಲಿನ ಬ್ಯಾಟರಿ, ಟೂಲ್‌ಬಾಕ್ಸ್, ಸ್ಟೇಲ್, ಜಾಕರಾಡು ಹಾಗೂ ಇತ್ಯಾದಿ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಗಡಿ ಉಪವಿಭಾಗದ ಉಪಾಧೀಕ್ಷಕರಾದ ಪ್ರವೀಣ್ ನೇತೃತ್ವದಲ್ಲಿ ಮಾಗಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಿ.ವೈ ಗಿರಿರಾಜ್, ಎಎಸ್‌ಐ ಶ್ರೀ ಕೃಷ್ಣಪ್ಪ , ಸಿಬ್ಬಂದಿ ಬೀರಪ್ಪ, ವೀರಭದ್ರಪ್ಪ, ಮಂಜುನಾಥ, ಪ್ರಮೋದ, ಮುನೀಂದ್ರ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.25ಕೆಆರ್ ಎಂಎನ್ 6.ಜೆಪಿಜಿ

ಪೊಲೀಸರು ಆರೋಪಿಗಳಿಂದ ವಶ ಪಡಿಸಿಕೊಂಡಿರುವ ವಸ್ತುಗಳು