ಗಾಂಜಾ ಸಾಗಾಟ: ಇಬ್ಬರ ಬಂಧನ

| Published : Jul 10 2024, 12:38 AM IST

ಸಾರಾಂಶ

ಎಲ್‌ಪಿಎಸ್ ಕ್ಯಾಂಪ್‌ನ ನಿವಾಸಿಗಳಾದ ಸೂರ್ಯ (22) ಹಾಗೂ ನಾಗರಾಜು (23) ಎಂಬುವರನ್ನು ಬಂಧಿಸಲಾಗಿದೆ.

ಹನೂರು: ಗಾಂಜಾ ಸಾಗಾಟ ಮಾಡುತ್ತಿದ್ದ ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಟ್ಟಿ ಹೊಸೂರು ಗ್ರಾಮದ ಎಲ್‌ಪಿಎಸ್ ಕ್ಯಾಂಪ್‌ನ ನಿವಾಸಿಗಳಾದ ಸೂರ್ಯ (22) ಹಾಗೂ ನಾಗರಾಜು (23) ಎಂಬುವರನ್ನು ಬಂಧಿಸಲಾಗಿದೆ. ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಟ್ಟಿ ಹೊಸೂರು ಗ್ರಾಮದ ಕಡೆಯಿಂದ ಅರಣ್ಯ ಪ್ರದೇಶದ ಚಂಗಡಿ ಗ್ರಾಮದ ರಸ್ತೆಯ ಮಾರ್ಗವಾಗಿ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆ ವಡಕೆ ಹಳ್ಳ ಗ್ರಾಮದ ಕಡೆಗೆ ಗಾಂಜಾ ಸಾಗಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ರಾಮಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಧ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಡಕ್ಕೆ ಹಳ್ಳ ಗ್ರಾಮದ ಸಮೀಪ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ 800 ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ. ನಂತರ ಸಾಗಾಟಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಹಾಗೂ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

9ಸಿಎಚ್ಎನ್‌13