ಒಡಿಸ್ಸಾ ಮಹಿಳೆ ಸೇರಿ ಇಬ್ಬರ ಬಂಧನ: ₹8.65 ಲಕ್ಷದ ಸ್ವತ್ತು ಜಪ್ತಿ

| Published : Feb 17 2025, 12:30 AM IST

ಒಡಿಸ್ಸಾ ಮಹಿಳೆ ಸೇರಿ ಇಬ್ಬರ ಬಂಧನ: ₹8.65 ಲಕ್ಷದ ಸ್ವತ್ತು ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಹಣಕಾಸಿನ ಸಮಸ್ಯೆ ಪರಿಹರಿಸಲು ವಿಶೇಷ ಪೂಜೆ ಮಾಡುವುದಾಗಿ ನಂಬಿಸಿ, ಮನೆಯಲ್ಲಿದ್ದ ₹1.44 ಲಕ್ಷ ಮೌಲ್ಯದ 2 ತೊಲ 02 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಒಡಿಸ್ಸಾ ಮೂಲದ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

- ಹಣಕಾಸು ಸಮಸ್ಯೆ ಪರಿಹಾರ ಪೂಜೆ ನೆಪದಲ್ಲಿ ಕಳವು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಹಣಕಾಸಿನ ಸಮಸ್ಯೆ ಪರಿಹರಿಸಲು ವಿಶೇಷ ಪೂಜೆ ಮಾಡುವುದಾಗಿ ನಂಬಿಸಿ, ಮನೆಯಲ್ಲಿದ್ದ ₹1.44 ಲಕ್ಷ ಮೌಲ್ಯದ 2 ತೊಲ 02 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಒಡಿಸ್ಸಾ ಮೂಲದ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಶಶಿಕಲಾ ರಮೇಶ ಫೆ.11ರಂದು ವಂಚನೆಗೀಡಾದವರು. ದಾವಣಗೆರೆ ಬಾಷಾ ನಗರ ವಾಸಿ, ಎಲೆಕ್ಟ್ರೀಷಿಯನ್‌ ಇಸ್ಮಾಯಿಲ್ ಜಬೀವುಲ್ಲಾ (30) ಹಾಗೂ ಒಡಿಸ್ಸಾ ರಾಜ್ಯದ ಜಗತ್‌ಸಿಂಗ್ ಪುರ ನಿವಾಸಿ, ಟೈಲರ್‌ ರುಕ್ಸಾನ ಬೇಗಂ ಕೋಂ ಜಲಾಲುದ್ದೀನ್ ಖಾನ್ (30) ಬಂಧಿತ ಆರೋಪಿಗಳು.

ಇಬ್ಬರಿಂದ ಹರಿಹರ ಗ್ರಾಮಾಂತರ ಠಾಣೆಯ 2 ಪ್ರಕರಣ, ದಾವಣಗೆರೆ ಆಜಾದ್ ನಗರ ಠಾಣೆಯ 1 ಪ್ರಕರಣಕ್ಕೆ ಸಂಬಂಧಿಸಿದಂತೆ 8.56 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ತನಿಖೆ ಮುಂದುವರಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ, ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮಾರ್ಗದರ್ಶನದಲ್ಲಿ ಎಸ್‌ಐಗಳಾದ ಮಂಜುನಾಥ ಎಸ್.ಕುಪ್ಪೇಲೂರು, ಮಹದೇವ ಸಿದ್ದಪ್ಪ ಭತ್ತೆ, ಸಿಬ್ಬಂದಿಯಾದ ತಿಪ್ಪೇಸ್ವಾಮಿ, ಜಿ.ಎನ್.ರಮೇಶ, ನೀಲ ಮೂರ್ತಿ, ದಾದಾಪೀರ್, ಅನಿಲ ಕುಮಾರ, ಬಸವನಗೌಡ, ಲಿಂಗರಾಜ, ಕರಿಯಪ್ಪ, ಟಿ.ವಿ.ಸತೀಶ, ರಿಜ್ವಾನ್ ನಾಸೂರ್, ಗಂಗಾಧರ, ಸುರೇಶ ಉಪ್ಪಾರ, ಪ್ರಸನ್ನಕಾಂತ, ಅನಿಲಕುಮಾರ ನಾಯ್ಕ, ಕಡೇಮನಿ ನಾಗಪ್ಪ, ಅರ್ಜುನ ನಂದ್ಯಾಲ, ಸಿ.ಎಂ.ಸುಶೀಲ, ನಾಜೀಮಾ, ಪವಿತ್ರ, ಸಿದ್ದಪ್ಪ ಅವರಿದ್ದ ತಂಡ ರಚಿಸಲಾಗಿತ್ತು. ತಂಡವು ಆರೋಪಿಗಳನ್ನು ಬಂಧಿಸುವ ಮೂಲಕ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ.

- - - -16ಕೆಡಿವಿಜಿ1.ಜೆಪಿಜಿ:

ಹರಿಹರ ಗ್ರಾಮಾಂತರ ಪೊಲೀಸರು ಮಹಿಳೆ ಸೇರಿದಂತೆ ಇಬ್ಬರು ಕಳ್ಳರನ್ನು ಬಂಧಿಸಿ, ₹8.65 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಜಪ್ತಿ ಮಾಡಿದರು.