ಸಾರಾಂಶ
ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬೈಕ್ ಕಳ್ಳರನ್ನು ಪೊಲೀಸ್ ಬಂಧಿಸಿ, ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಪಟ್ಟಣದ ಸಂತೋಷ ಲಕ್ಷ್ಮಣ ಆಲಮೇಲಕರ (34) ಹಾಗೂ ಶಕೀಲ್ ಮುಲ್ಕಸಾಬ ಪಟೇದ(38) ಬಂಧಿತ ಆರೋಪಿಗಳು.
ಆಲಮೇಲ:ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬೈಕ್ ಕಳ್ಳರನ್ನು ಪೊಲೀಸ್ ಬಂಧಿಸಿ, ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಪಟ್ಟಣದ ಸಂತೋಷ ಲಕ್ಷ್ಮಣ ಆಲಮೇಲಕರ (34) ಹಾಗೂ ಶಕೀಲ್ ಮುಲ್ಕಸಾಬ ಪಟೇದ(38) ಬಂಧಿತ ಆರೋಪಿಗಳು.
ಪಟ್ಟಣದಲ್ಲಿ ಕಳೆದ ವಾರದ ಹಿಂದೆ ಒಂದು ಬೈಕ್ ಹಾಗೂ ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಒಂದು ಬೈಕ್ ಕಳುವಾಗಿರುವ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಇಂಡಿ ಡಿವೈಎಸ್ಪಿ ಜಗದೀಶ ಎಸ್.ಎಚ್ ಇವರ ಮಾರ್ಗದರ್ಶನದಲ್ಲಿ ಆಲಮೇಲ ಠಾಣೆಯ ಕ್ರೈಂ ಪಿಎಸೈ ಎನ್.ಜಿ. ಅಪನಾಯ್ಕರ ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳ ಪತ್ತೆಗಾಗಿ ಶೋಧ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಸಂದರ್ಭದಲ್ಲಿ ಸಿಬ್ಬಂದಿಗಳಾದ ಎಸ್.ಜಿ.ಚಾವರ, ಆರ್.ಕೆ.ರಾಠೋಡ, ಎಸ್.ಎಸ್.ಜಾಲಗೇರಿ, ವಿ.ಡಿ.ಕೋಲಾರ, ಆರ್.ಎಸ್ ಪಾಟೀಲ, ಆರ್.ಎನ್.ಪಾಟೀಲ ಇದ್ದರು.