ಬೈಕ್, ಕಾರ್ ಡಿಕ್ಕಿ, ಇಬ್ಬರು ಬೈಕ್ ಸವಾರರು ಸಾವು

| Published : Mar 19 2025, 12:33 AM IST

ಸಾರಾಂಶ

Two bikers killed in bike-car collision

ಭೀಕರ ರಸ್ತೆ ಅಪಘಾತ : ಬೈಕ್ ಮತ್ತು ಕಾರ್ ಡಿಕ್ಕಿ, ಇಬ್ಬರು ಬೈಕ್ ಸವಾರರು ಸಾವುಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಸಾವುನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ 8.40 ರ ಸುಮಾರಿಗೆ ನಡೆದಿದೆ.

ತಾಲೂಕಿನ ಭೀಮರಾಯನಗುಡಿ ಸಮೀಪದಲ್ಲಿ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಕಾರ್​ ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವುನ್ನಪ್ಪಿದ್ದಾರೆ. ರಭಸವಾಗಿ ಬಂದ ಕಾರ್ ಬೈಕಿಗೆ ಗುದ್ದಿದ ನಂತರ ಸರ್ಕಾರಿ ಬಸ್ಸಿಗೂ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.

ತಾಲೂಕಿನ ಚಾಮನಾಳ ತಾಂಡಾದ ರಾಜು ಗುರುನಾಥ್ (31) ಹಾಗೂ ಸುರಪುರ ತಾಲೂಕಿನ ದಂಡ ಸೋಲಾಪುರ ಗ್ರಾಮದ ದೇವೇಂದ್ರ ಸುಭಾಷ್ (22) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಕಾರ್ ವೇಗವಾಗಿ ಬಂದು ಬೈಕ್ ಗೆ​ ಡಿಕ್ಕಿಯಾದ ತೀವ್ರತೆಗೆ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ನಗರದ ಮೈಕ್ರೋಫೈನಾನ್ಸಿನಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ 8.30 ಸುಮಾರಿಗೆ ತಮ್ಮ ಸ್ವಂತ ಗ್ರಾಮವಾದ ಚಾಮನಾಳ ತಾಂಡಾ ಹಾಗೂ ದಂಡ ಸೋಲಾಪುರ ಗ್ರಾಮಕ್ಕೆ ತೆರಳುತ್ತಿರುವಾಗ ಈ ಭೀಕರ ಅಪಘಾತ ಸಂಭವಿಸಿದೆ.

-

18ವೈಡಿಆರ್

ಶಹಾಪುರ ನಗರದ ಹೊರವಲಯದ ಭೀಮರಾಯನ ಗುಡಿ ಹತ್ತಿರ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಕಾರ್ ಮತ್ತು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿರುವುದು.