Two boys who went to swim in a lake die
ಕಲಬುರಗಿ: ಕೆರೆಯಲ್ಲಿ ಈಜಲು ತೆರಳಿದ್ದ ಜಿಲ್ಲೆಯ ಇಬ್ಬರು ಬಾಲಕರು ಸಾವನನಪ್ಪಿರುವ ದುರಂತ ಘಟನೆ ತೆಲಂಗಾಣದ ಬೋಪನಾರಂ ಗ್ರಾಮದಲ್ಲಿ ಸಂಭವಿಸಿದೆ. ದಾರುಣ ಸವಣ್ಣಪ್ಪಿರುವವರನ್ನು ಅಜಯ್ (14), ಪಾಂಡು (15) ಎಂದು ಗುರುತಿಸಲಾಗಿದೆ.
ಮೃತ ಬಾಲಕರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕುಂಚಾವರಂ ತಾಂಡಾ ನಿವಾಸಿಗಳು. ಶಾಲೆ ರಜೆ ಹಿನ್ನೆಲೆಯಲ್ಲಿ ಊರಿಗೆ ಹೋಗಿದ್ದ ಬಾಲಕರು ಅಲ್ಲಿ ಊರಾಚೆಯಲ್ಲಿರುವ ಕೆರೆಯಲ್ಲಿ ಈಜಲು ಹೋಗಿದ್ದರು. ಈಜು ಬಾರದೇ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.